ವಾಷಿಂಗ್ಟನ್: ಇತ್ತೀಚೆಗೆ ಪಂಜಾಬ್‌ನ ದಂಪತಿ ಅಮೆರಿಕಾದಲ್ಲಿ ತಮ್ಮ ನೆರೆಹೊರೆಯವರಿಗೆ ಪಕೋಡ ಹಾಗೂ ಚಟ್ನಿ ಮಾಡಿಕೊಟ್ಟಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಅಮೆರಿಕದ ಸೀಲ್‌ಕೋಟಿಂಗ್ ಕಂಪನಿಯ ಕೆಲಸಗಾರರಿಗೆ ಮಹಿಳೆಯೊಬ್ಬಳು ಸಾಂಪ್ರದಾಯಿಕ ಭಾರತೀಯ ತಿಂಡಿಯಾದ ವಡಾ ಹಾಗೂ ಕಾಯಿ ಚಟ್ನಿಯನ್ನು ನೀಡಿದ್ದಾಳೆ. ಅದನ್ನು ನೋಡಿ ಆ ಕೆಲಸಗಾರರು ಸಖತ್ ಖುಷಿಯಾಗಿದ್ದಾರಂತೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ಮಿನ್ನೇಸೋಟ ಮೂಲದ ದಿ ಸೀಲ್‌ಕೋಟಿಂಗ್ ಗೈಸ್ ಎಂಬ ಕಂಪನಿಯ ಕೆಲಸಗಾರರು ಮನೆಯ ಹೊರಗೆ ಡ್ರೈವ್‌ವೇಗೆ ಡಾಂಬರು ಹಾಕುವ ಮತ್ತು ಸೀಲಿಂಗ್ ಕೆಲಸ ಮಾಡುತ್ತಿದ್ದಾಗ, ಭಾರತೀಯ ಮಹಿಳೆಯೊಬ್ಬಳು ಅವರಿಗೆ ತನ್ನ ಮನೆಯಲ್ಲಿ ತಯಾರಿಸಿದ ವಡೆ ಮತ್ತು ಚಟ್ನಿಯನ್ನು ನೀಡಿದ್ದಾಳೆ.
ವಿಡಿಯೊ ಇಲ್ಲಿದೆ ನೋಡಿ...
ವಡಾ ನೋಡಿ ಖುಷಿಯಾಗಿ ಅವರು ಆಕೆಗೆ ಧನ್ಯವಾದ ಹೇಳಿದ್ದಾರೆ. ಹಾಗೇ "ವಡಾ ನೋಡುವುದಕ್ಕೆ ಡೋನಟ್ ತರಹ ಇದೆ ಆದರೆ ಸಿಹಿ ಅಲ್ಲ, ಖಾರ ಇದೆ. ತುಂಬಾ ರುಚಿಯಾಗಿದೆ ಎಂದು ಹಾಡಿ ಹೊಗಳಿದ್ದಾರಂತೆ.
ಈ ಸುದ್ದಿಯನ್ನೂ ಓದಿ:Viral Video: ಶಾಪಿಂಗ್ ಮಾಲ್‌ಗೆ ನುಗ್ಗಿದ ಗಜರಾಜ; ಈ ವಿಡಿಯೊ ನೋಡಿದ್ರೆ ಎದೆ ಝಲ್ಲೆನ್ನೋದು ಗ್ಯಾರಂಟಿ
ಈ ವಿಡಿಯೊವನ್ನು ದಿ ಸೀಲ್‌ಕೋಟಿಂಗ್ ಗೈಸ್ ಕಂಪನಿಯು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೊ ಪೋಸ್ಟ್ ಮಾಡಿದಾಗಿನಿಂದ, 12 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಗಳಿಸಿದೆ.ನೆಟ್ಟಿಗರು ಮಹಿಳೆಯನ್ನು ಹೊಗಳಿದ್ದಾರಂತೆ. "ಇದು ಭಾರತದ ಸುಂದರ ಸಂಸ್ಕೃತಿ. ಅತಿಥಿ ದೇವೋ ಭವ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ನಮ್ಮ ಭಾರತೀಯ ಸಂಸ್ಕೃತಿ ವಿಶ್ವದಲ್ಲೇ ಅತ್ಯುತ್ತಮವಾಗಿದೆ" ಎಂದು ಹೇಳಿದ್ದಾರೆ.