ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬ್ಯಾಂಕಾಕ್ ಟ್ರಾಫಿಕ್ ನಿಯಮ ಕೇಳಿ ಶಾಕ್‌ ಆದ ಭಾರತೀಯ ಮಹಿಳೆ; ಮಗ ಹಂಚಿಕೊಂಡ ವಿಡಿಯೋದಲ್ಲೇನಿದೆ?

Viral Video: ಬ್ಯಾಂಕಾಕ್‌ಗೆ ಮೊದಲ ಬಾರಿಗೆ ಭೇಟಿ ನೀಡಿದ ಮಹಿಳೆಯೊಬ್ಬರು ಅಲ್ಲಿನ ಟ್ರಾಫಿಕ್ ನಿಯಮ ಕೇಳಿ ಶಾಕ್ ಆಗಿದ್ದಾರೆ. ಅಲ್ಲಿನ ರಸ್ತೆಗಳಲ್ಲಿ ದುಪ್ಪಟ್ಟು ವಾಹನಗಳಿದ್ದರೂ ಯಾವುದೇ ಗದ್ದಲ ಇಲ್ಲದೆ ಹಾರ್ನ್ ಶಬ್ದವಿಲ್ಲದೆ ಪ್ರಯಾಣ ಮಾಡುವ ರೀತಿ ಕಂಡು ಅವರು ದಂಗಾಗಿದ್ದಾರೆ. ಸದ್ಯ ಆ ಮಹಿಳೆಯ ಮಗ ಈ ವಿಡಿಯೋ ಶೇರ್ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ..

ಬ್ಯಾಂಕಾಕ್ ಟ್ರಾಫಿಕ್

ಬ್ಯಾಂಕಾಕ್,ಡಿ. 12: ಇತ್ತೀಚೆಗೆ ಎಲ್ಲೂ ನೋಡಿದರೂ ವಾಹನಗಳ ದಟ್ಟಣೆ, ಅದರಲ್ಲೂ ನಗರವನ್ನು ಪ್ರವೇಶಿಸುವ ಮಾರ್ಗಗಳಲ್ಲಿ ಸಂಚಾರ ಸಮಸ್ಯೆ ಅಧಿಕವಾಗುತ್ತಿದೆ. ಹೀಗಾಗಿ ಇತ್ತೀಚೆಗೆ ಟ್ರಾಫಿಕ್ ರೂಲ್ಸ್ ಅನ್ನು ಬಿಗಿಗೊಳಿಸಲಾಗಿದೆ. ಆದ್ರೆ ಬ್ಯಾಂಕಾಕ್‌ಗೆ ಮೊದಲ ಬಾರಿಗೆ ಭೇಟಿ ನೀಡಿದ ಮಹಿಳೆಯೊಬ್ಬರು ಅಲ್ಲಿನ (Viral Video) ಟ್ರಾಫಿಕ್ ನಿಯಮ ಕೇಳಿ ಶಾಕ್ ಆಗಿದ್ದಾರೆ. ಅಲ್ಲಿನ ರಸ್ತೆಗಳಲ್ಲಿ ದುಪ್ಪಟ್ಟು ವಾಹನಗಳಿದ್ದರೂ ಯಾವುದೇ ಗದ್ದಲ ಇಲ್ಲದೆ ಹಾರ್ನ್ ಶಬ್ದವಿಲ್ಲದೆ ಪ್ರಯಾಣ ಮಾಡುವ ರೀತಿ ಕಂಡು ಅವರು ದಂಗಾಗಿದ್ದಾರೆ. ಸದ್ಯ ಆ ಮಹಿಳೆಯ ಮಗ ಈ ವಿಡಿಯೋ ಶೇರ್ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ

ಥೈಲ್ಯಾಂಡ್‌ನಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ತಮ್ಮ ತಾಯಿಯನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿನ ವಾಹನ ಸಂಚಾರವನ್ನು ಗಮನಿಸಿದ ಅವರ ತಾಯಿಗೆ ದೊಡ್ಡ ಆಶ್ಚರ್ಯವೊಂದು ಕಾದಿತ್ತು. ಅಲ್ಲಿ‌ನ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಇದ್ದರೂ ವಾಹನಗಳು ಸರಾಗವಾಗಿ ಮತ್ತು ಸದ್ದಿಲ್ಲದೆ ಚಲಿಸುತ್ತವೆ. ಚಾಲಕರು ತಾಳ್ಮೆಯಿಂದ ಕಾಯುತ್ತಿದ್ದು ಯಾವುದೇ ಅನಗತ್ಯ ಶಬ್ದವಿಲ್ಲದೆ ಪ್ರಯಾಣ ಮಾಡಿದ್ದಾರೆ. ಇದನ್ನು ಗಮನಿಸಿದ ಮಹಿಳೆ ಎಂತಹ ಅದ್ಭುತ ನಾಗರಿಕ ಪ್ರಜ್ಞೆ ಎಂದು ಅಲ್ಲಿನ ಜನರ ಬಗ್ಗೆ ಫಿದಾ ಆಗಿದ್ದಾರೆ.

ವಿಡಿಯೋ ನೋಡಿ:



ರಸ್ತೆಯಲ್ಲಿ ನೂರಾರು ವಾಹನಗಳಿದ್ದರೂ ಯಾವುದೇ ಚಾಲಕರು ಅನಗತ್ಯವಾಗಿ ಹಾರ್ನ್ ಹಾಕುತ್ತಿರಲಿಲ್ಲ. ವಾಹನಗಳು ಶಿಸ್ತಿನಿಂದ ಸಾಲಿನಲ್ಲಿ ನಿಂತಿದ್ದು ‌ಅಡ್ಡಾದಿಡ್ಡಿಯಾಗಿ ಓವರ್‌ಟೇಕ್ ಮಾಡಲು ಕೂಡ ಹೋಗಿಲ್ಲ. ವಿಡಿಯೊದಲ್ಲಿ ಜನನಿಬಿಡ ರಸ್ತೆಯ ಬಳಿ ಮಹಿಳೆ ನಿಂತಿರುವುದನ್ನು ವೀಡಿಯೊ ತೋರಿಸುತ್ತದೆ. ರಸ್ತೆಯು ಕಾರುಗಳು ಮತ್ತು ಬೈಕ್‌ಗಳಿಂದ ತುಂಬಿದ್ದರೂ, ಅವರನ್ನು ಹೆಚ್ಚು ಆಶ್ಚರ್ಯಗೊಳಿಸುವುದು ಜನಸಂದಣಿಯಲ್ಲ, ಬದಲಿಗೆ ಅಲ್ಲಿನ ಶಾಂತತೆ ಆಗಿತ್ತು.

Viral News: ಗಾಯಗೊಂಡ ಮಗುವಿಗೆ ಫೆವಿಕ್ವಿಕ್ ಬಳಸಿ ಚಿಕಿತ್ಸೆ: ವೈದ್ಯರ ವಿರುದ್ಧ ದೂರು ದಾಖಲು

ಈ ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರು ಇದನ್ನು ವೀಕ್ಷಿಸಿದ್ದಾರೆ. ಹಲವಾರು ವೀಕ್ಷಕರು ಭಾರತದಲ್ಲಿನ ಸಂಚಾರ ಪರಿಸ್ಥಿತಿಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ.ಇಂತಹ ಶಿಸ್ತು ನಮಗೂ ಅಗತ್ಯವಿದೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಮತ್ತೊಬ್ಬರು ಇದು ರಸ್ತೆಗಳ ಗುಣಮಟ್ಟದ ವಿಚಾರ ಅಲ್ಲ ಜನರ ಮನಸ್ಥಿತಿಯ ಬದಲಾವಣೆಯ ವಿಷಯ," ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.ಇನ್ನೊಬ್ಬರು ಭಾರತದಲ್ಲಿ ನಮಗೆ ನಿಜವಾಗಿಯೂ ಈ ರೀತಿಯ ನಾಗರಿಕ ಪ್ರಜ್ಞೆ ಬೇಕು ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.