ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಫ್ರಾನ್ಸ್‌ನ ಐಫೆಲ್ ಟವರ್ ಎದುರು ಭಾರತೀಯ ಯುವತಿಯರ ‘ಸೀರೆ ವಾಕ್’; ಜಸ್ಟ್‌ ಲುಕಿಂಗ್‌ ಲೈಕ್‌ ಎ ವಾವ್‌ ಎಂದು ಉದ್ಘರಿಸಿದ ನೆಟ್ಟಿಗರು

Viral Video: ಭಾರತೀಯ ಮಹಿಳೆಯರ ವಿಡಿಯೊವೊಂದು ಗಮನ ಸೆಳೆದಿದೆ. ಮಹಿಳೆಯರ ‌ಗುಂಪು ಫ್ರಾನ್ಸ್‌ನ ಐಫೆಲ್ ಟವರ್ ಎದುರು ಸೀರೆ ಉಟ್ಟು ರ‍್ಯಾಂಪ್ ವಾಕ್ ಮಾಡಿದ್ದು ಮೆಚ್ಚುಗೆ ಗಳಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ನೃತ್ಯ ಮಾಡುವ ಬದಲು ಇಂತಹ ದೃಶ್ಯಗಳೇ ಬೆಸ್ಟ್ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.

ಐಫೆಲ್ ಟವರ್ ಬಳಿ ಭಾರತೀಯ ಮಹಿಳೆಯರ ರ‍್ಯಾಂಪ್ ವಾಕ್

ಪ್ಯಾರಿಸ್‌, ಜೂ. 2: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು ಎನ್ನುವ ಉದ್ದೇಶದಿಂದ ಇಂದು ರೀಲ್ಸ್, ವಿಡಿಯೊ ಶೂಟ್ ಎಂದು ಇದರಲ್ಲೇ ಸಮಯ ಕಳೆಯುವವರ ಸಂಖ್ಯೆ ಹೆಚ್ಚುತ್ತಿದೆ. ಜತೆಗೆ ಜನಪ್ರಿಯತೆ ಗಳಿಸಲು ಹುಚ್ಚುಹುಚ್ಚಾಗಿ ಆಡುವವರ ಸಂಖ್ಯೆಗೆ ಕಡಿಮೆ ಏನೂ ಇಲ್ಲ. ಆದರೆ ಈ ನಡುವೆ ಭಾರತೀಯ ಮಹಿಳೆಯರ ವಿಡಿಯೊವೊಂದು (Viral News) ಗಮನ ಸೆಳೆದಿದೆ. ಇವರು ಸೀರೆ ಉಟ್ಟು ರ‍್ಯಾಂಪ್ ವಾಕ್ ಮಾಡಿದ್ದು, ನೆಟ್ಟಿಗರು ಮೆಚ್ಚುಗೆ ನೀಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ನೃತ್ಯ ಮಾಡುವ ಬದಲು ಇಂತಹ ದೃಶ್ಯಗಳೇ ಬೆಸ್ಟ್ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.

ಮಹಿಳೆಯರು ಫ್ರಾನ್ಸ್‌ನ ಪ್ಯಾರಿಸ್‌ ಐಫೆಲ್ ಟವರ್ ಬಳಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. ಬಣ್ಣ ಬಣ್ಣದ ಸೀರೆಗಳನ್ನು ಉಟ್ಟು ಮಹಿಳೆಯರು ಹೆಜ್ಜೆ ಹಾಕಿದ್ದಾರೆ. ವೀಕ್ಷಕರು ವಿದೇಶದಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರದರ್ಶಿಸಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಪ್ರವಾಸಿ ಸ್ಥಳದಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸುವ ಬದಲು ಇಂತಹ ಶಿಸ್ತಿನ ನಡವಳಿಕೆ ಎಲ್ಲರಿಗೂ ಸ್ಫೂರ್ತಿದಾಯಕ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ವಿಡಿಯೊ ನೋಡಿ:



ಈ ಕ್ಲಿಪ್‌ನಲ್ಲಿ ಮಧ್ಯ ವಯಸ್ಕ ಭಾರತೀಯ ಮಹಿಳೆಯರ ಗುಂಪೊಂದು ಐಫೆಲ್ ಟವರ್ ಮುಂದೆ ಆತ್ಮವಿಶ್ವಾಸದಿಂದ ವಾಕ್ ಮಾಡುವುದು ಕಂಡು ಬಂದಿದೆ. ವಿಭಿನ್ನ ಶೈಲಿಯ ಸೀರೆಗಳನ್ನು ಧರಿಸಿ, ಅವರು ಕ್ಯಾಮರಾಗೆ ಪೋಸ್ ನೀಡುತ್ತಾ ಪ್ಯಾರಿಸ್‌ನಲ್ಲಿ ಸಮಯ ಕಳೆದಿದ್ದಾರೆ. ಮಹಿಳೆಯರು ನಿಯಮಗಳನ್ನು ಉಲ್ಲಂಘಿಸದೆ ಅಥವಾ ತಮ್ಮ ಸುತ್ತಲಿನ ಇತರರಿಗೆ ತೊಂದರೆ ನೀಡದೆ ಈ ಫೋಟೊ ಶೂಟ್ ಮಾಡಿಸಿದ್ದಾರೆ.

ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!

ಸೋಷಿಯಲ್ ಮೀಡಿಯಾಬಳಕೆದಾರರು ತಮಾಷೆಯಾಗಿ ಈ ಕ್ಷಣವನ್ನು "ಪ್ಯಾರಿಸ್ ಫ್ಯಾಷನ್ ವೀಕ್" ಎಂದು ಬಣ್ಣಿಸಿದ್ದಾರೆ. ನೆಟ್ಟಿಗರೊಬ್ಬರು, ʼʼನಾನು ಈ ಮಹಿಳೆಯರನ್ನು ಅಪಹಾಸ್ಯ ಮಾಡುವುದಿಲ್ಲ. ಅವರು ಭಾರತೀಯ ಸಂಸ್ಕೃತಿಯನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಿದ್ದಾರೆʼʼ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, ʼʼವಿಚಿತ್ರವಾಗಿ ಡ್ಯಾನ್ಸ್ ಮಾಡಿ ಜನರಿಗೆ ತೊಂದರೆ ಉಂಟು ಮಾಡುವ ರೀಲ್ಸ್‌ಗಿಂತ ಇದೇ ಉತ್ತಮʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.