ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತೀಯ ಪ್ರವಾಸಿಗರ ಅಸಭ್ಯ ವರ್ತನೆ: ಚೀನಾದ ಮಹಾಗೋಡೆಯ ಮೇಲೆ ನೃತ್ಯ ಮಾಡಿ ಹುಚ್ಚಾಟ

Viral News: ಸಾರ್ವಜನಿಕ ಸ್ಥಳದಲ್ಲಿ ಶಿಸ್ತಿನಿಂದ ವರ್ತಿಸಿಸದೆ ಹುಚ್ಚಾಟ ಮೆರೆಯುವ ಅನೇಕ ಘಟನೆಗಳು ನಡೆದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಭಾರತೀಯರ ಗುಂಪೊಂದು ಚೀನಾದ ಪ್ರಸಿದ್ಧ ಮಹಾ ಗೋಡೆಯ ಮೇಲೆ 'ಚೋಗಾಡಾ' ಹಾಡಿಗೆ ಗರ್ಬಾ ನೃತ್ಯ ಮಾಡಿದೆ. ಅನೇಕರು ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಇದೇ ರೀತಿ ಪ್ರವಾಸಿ ಸ್ಥಳದಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸಿದ ಅನೇಕ ದೃಶ್ಯಗಳು ವೈರಲ್ ಆಗಿವೆ.

ವಿದೇಶದಲ್ಲಿ ನಾಗರಿಕ ಪ್ರಜ್ಞೆ ಮರೆತು ವರ್ತಿಸಿದ ಭಾರತೀಯರು

ಬೀಜಿಂಗ್, ಜೂ 1: ಇತ್ತೀಚೆಗೆ ಭಾರತೀಯರಲ್ಲಿ ನಾಗರಿಕ ಪ್ರಜ್ಞೆ ಮರೆಯಾಗುತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ಶಿಸ್ತಿನಿಂದ ವರ್ತಿಸದೆ ಹುಚ್ಚಾಟ ಮೆರೆಯುವ ಅನೇಕ ಘಟನೆಗಳು ನಡೆದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಭಾರತೀಯರ ಗುಂಪೊಂದು ಚೀನಾದ ಪ್ರಸಿದ್ಧ ಮಹಾ ಗೋಡೆಯ ಮೇಲೆ 'ಚೋಗಾಡಾ' ಹಾಡಿಗೆ ಗರ್ಬಾ ನೃತ್ಯ ಮಾಡಿದೆ. ಅನೇಕರು ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಇದೇ ರೀತಿ ಪ್ರವಾಸಿ ಸ್ಥಳದಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸಿದ ಅನೇಕ ದೃಶ್ಯಗಳು ವೈರಲ್ (Viral News) ಆಗಿವೆ.

ಇತ್ತೀಚೆಗೆ ವಿಯೆಟ್ನಾಂನಲ್ಲಿ ವಿಮಾನ ನಿಲ್ದಾಣದ ರನ್ ವೇ ಮೇಲೆಯೇ ಪ್ರವಾಸಿಗರು ನೃತ್ಯ ಮಾಡಿದ ಘಟನೆ ಕಂಡು ಬಂದಿತ್ತು. ಇದರ ಬೆನ್ನಲ್ಲೇ ಜಪಾನ್, ಚೀನಾ ಮತ್ತು ಅಮೆರಿಕದ ಪ್ರವಾಸಿ ಸ್ಥಳದಲ್ಲಿ ಭಾರತೀಯರು ಅಶಿಸ್ತಿನಿಂದ ವರ್ತಿಸಿರುವುದು ಬೆಳಕಿಗೆ ಬಂದಿದೆ. ಈ ವಿಡಿಯೊ ಕಂಡು ಬಂದ ಬೆನ್ನಲ್ಲೇ ಇಂದು ಮಕ್ಕಳಿಗೆ ಪುಸ್ತಕದ ಪಾಠ ಹೇಳುವ ಬದಲು ನಾಗರಿಕ ಪ್ರಜ್ಞೆಯ ಬಗ್ಗೆ ತಿಳಿಸಿ ಕೊಡಬೇಕು. ಇಂತಹ ವರ್ತನೆಯಿಂದ ಭಾರತಕ್ಕೆ ಕೆಟ್ಟ ಹೆಸರು ಎಂದು ಹಲವರು ಕಿಡಿಕಾರಿದ್ದಾರೆ.

ವಿಡಿಯೊ ನೋಡಿ:



ಜಪಾನ್‌ನಲ್ಲಿರುವ ಕೆಲವು ಭಾರತೀಯ ಪ್ರವಾಸಿಗರು ಫೋಟೊಗಳನ್ನು ತೆಗೆಸಿಕೊಳ್ಳಲು ಸಾಲಿನಲ್ಲಿ ನಿಲ್ಲದೆ ನಿಯಮ ಉಲ್ಲಂಘನೆ ಎಸಗಿದ್ದಾರೆ. ಜಪಾನಿಯರ ಪಾಲಿನ ಶ್ರದ್ಧಾ ಕೇಂದ್ರ 'ಹಾಚಿಕೊ' ಶ್ವಾನದ ಪ್ರತಿಮೆಯ ಮುಂದೇ ಕೆಲವು ಪ್ರವಾಸಿಗರು ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ ಭಾರತೀಯ ಮೂಲದ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷ ಸಾಲನ್ನೇ ಧಿಕ್ಕರಿಸಿ ನೇರವಾಗಿ ಪ್ರತಿಮೆಯ ಮುಂದೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ. ಅಲ್ಲಿದ್ದವರು ಈ ನಡವಳಿಕೆಯನ್ನು ಖಂಡಿಸಿದ್ದು, ಭಾರತೀಯ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ.



ಮತ್ತೊಂದು ವಿಡಿಯೊದಲ್ಲಿ ಭಾರತೀಯರ ಗುಂಪು ಚೀನಾದ ಮಹಾ ಗೋಡೆಯಲ್ಲಿ ಗರ್ಬಾ ನೃತ್ಯ ಪ್ರದರ್ಶಿಸುವುದನ್ನು ತೋರಿಸಲಾಗಿದೆ. ಹಬ್ಬದ ಉಡುಪನ್ನು ಧರಿಸಿ, ಕೆಲವು ಪುರುಷರು ಮತ್ತು ಮಹಿಳೆಯರು ನಿರಾತಂಕವಾಗಿ ನೃತ್ಯ ಮಾಡುವುದನ್ನು ಸೆರೆ ಹಿಡಿಯಲಾಗಿದೆ. ಈ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದು, ಇದು ಅತ್ಯಂತ ಮುಜುಗರದ ಸಂಗತಿ. ಇಂತಹ ಜನರು ವಿದೇಶಗಳಿಗೆ ಭೇಟಿ ನೀಡುವ ಬದಲು ಮನೆಯಲ್ಲಿಯೇ ಇದ್ದು ಭಾರತೀಯರ ಮರ್ಯಾದೆ ಕಾಪಾಡಿ ಎಂದು ಕಮೆಂಟ್ ಮಾಡಿದ್ದಾರೆ. ಒಬ್ಬರು, ʼʼಇದು ಮೂರ್ಖತನ ವರ್ತನೆʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀಮಂತ ಹುಡುಗರು ಬಿಸಿ ಸಮೋಸ ಇದ್ದಂತೆ! ಸಂಗಾತಿ ಆಯ್ಕೆ ಬಗ್ಗೆ ಸಲಹೆ ನೀಡಿದ ಯುವತಿ!