ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಇದು ಹಾವಿನ ಜೊತೆ ಅಲ್ಲ... ಅಲ್ಲ... ಸಾವಿನ ಜೊತೆ ಸೆಣಸಾಟ! ಈ ಭಯಾನಕ ವಿಡಿಯೊ ಇಲ್ಲಿದೆ

ಇಲ್ಲೊಬ್ಬ ವ್ಯಕ್ತಿಯೊಬ್ಬರು ಸರಳ ಪೈಪ್ ಬಳಸಿ ಭಾರೀ ದೊಡ್ಡ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರನ್ನು ಬೆಚ್ಚಿ ಬೀಳಿಸಿದೆ. ವಿಡಿಯೋ ದಲ್ಲಿ ರಕ್ಷಣಾ ಕಾರ್ಯವು ಎಷ್ಟು ಭಯಾನಕ ಮತ್ತು ರೋಮಾಂಚಕಾರಿ ಇತ್ತು ಎಂದರೆ ನೆಟ್ಟಿಗರೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸಾವಿನ ಜೊತೆ ಸೆಣಸಾಟ! ಈ ಭಯಾನಕ ವಿಡಿಯೊ ಇಲ್ಲಿದೆ

Man Catches Giant King Cobra

Profile Pushpa Kumari Aug 17, 2025 3:53 PM

ನವದೆಹಲಿ: ದೈತ್ಯ ಹಾವು ಅದರಲ್ಲೂ ಕಾಳಿಂಗ ಸರ್ ನೋಡಿದರೆ ಅದೆಷ್ಟು ಧೈರ್ಯಶಾಲಿಯ ಎದೆ ಒಮ್ಮೆ ನಡುಗಿ ಬಿಡುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿಯೊಬ್ಬರು ಸರಳ ಪೈಪ್ ಬಳಸಿ ಭಾರೀ ದೊಡ್ಡ ಗಾತ್ರದ ಕಾಳಿಗ ಸರ್ವವನ್ನು ಹಿಡಿದ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರನ್ನು ಬೆಚ್ಚಿ ಬೀಳಿಸಿದೆ. ವಿಡಿಯೋದಲ್ಲಿ ರಕ್ಷಣಾ ಕಾರ್ಯವು ಎಷ್ಟು ಭಯಾನಕ ಮತ್ತು ರೋಮಾಂಚಕಾರಿ ಇತ್ತು ಎಂದರೆ ನೆಟ್ಟಿಗರೇ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ (Viral Video) ಆಗುತ್ತಿದೆ.

ಆಗಸ್ಟ್ 3ರಂದು ಇನ್‌ಸ್ಟಾಗ್ರಾಮ್ ನಲ್ಲಿ ವೈರಲ್ ಆದ ಈ ವಿಡಿಯೋದಲ್ಲಿ, ಮನೆಯೊಂದರ ಅಂಗಳದಲ್ಲಿ ಹಾವು ಚಲಿಸುತ್ತಿರುವುದು ಕಾಣುತ್ತದೆ. ಹಾವು ತುಂಬಾ ಅಪಾಯಕಾರಿ ಆಗಿದ್ದರೂ, ವ್ಯಕ್ತಿಯೂ ಬಹಳ ಶಾಂತವಾಗಿ ಮತ್ತು ಆತ್ಮವಿಶ್ವಾಸದಿಂದ ಕೆಲಸ ಮಾಡುತ್ತಾನೆ. ಹಾವು ಪದೇ ಪದೆ ಆತನ ಮೇಲೆ ದಾಳಿ ಮಾಡಲು ಯತ್ನಿಸಿದರೂ, ಆತ ತನ್ನ ಕೈಯಲ್ಲಿರುವ ಪೈಪ್‌ ನಿಂದ ತನ್ನನ್ನು ರಕ್ಷಿಸಿಕೊಳ್ಳುತ್ತಾನೆ. ಈ ಪೈಪ್‌ಗೆ ಒಂದು ಚೀಲವನ್ನು ಅಳವಡಿಸಲಾಗಿತ್ತು. ಸುಮಾರು ಅರ್ಧ ಗಂಟೆ ಹೋರಾಟದ ನಂತರ, ಅಂತಿಮವಾಗಿ ಆ ಬೃಹತ್ ಕಾಳಿಂಗ ಸರ್ಪ ಚೀಲದೊಳಗೆ ಸೇರುತ್ತದೆ

ವೈರಲ್ ಆದ ವಿಡಿಯೊದಲ್ಲಿ ವ್ಯಕ್ತಿ ಪೈಪ್‌ನ ನೆರವಿನಿಂದ ಅದನ್ನು ನಿಯಂತ್ರಿಸಲು ಯತ್ನಿಸುವ ದೃಶ್ಯ ಕಾಣಬಹುದು. ಹಾವು ದ್ವೇಷದಿಂದ ಮರು ದಾಳಿ ಮಾಡಿದರೂ, ಪೈಪ್‌ನಿಂದ ತನ್ನನ್ನು ರಕ್ಷಿಸಿಕೊಂಡು, ಕೊನೆಗೂ ಚೀಲವನ್ನು ಜೋಡಿಸಿ ಕಿಂಗ್ ಕೋಬ್ರಾವನ್ನು ಚೀಲದೊಳಗೆ ಹಾಕಲು ಯಶಸ್ವಿಯಾಗುತ್ತಾನೆ. ಈ ವಿಡಿಯೋ ಕೆಲವೇ ದಿನಗಳಲ್ಲಿ 1 ಮಿಲಿಯನ್‌ಗಿಂತ ಹೆಚ್ಚು ಪ್ರತಿಕ್ರಿಯೆ ಗಳನ್ನು ಪಡೆದು, ಈಗಾಗಲೇ ಮಿಲಿಯನ್‌ ಗಟ್ಟಲೆ ವೀಕ್ಷಣೆಗಳನ್ನು ಪಡೆದಿದೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದು ಆಶ್ಚರ್ಯ ಕೂಡ ವ್ಯಕ್ತ ಪಡಿಸಿದ್ದಾರೆ. ಕೆಲವರು ವ್ಯಕ್ತಿಯ ಧೈರ್ಯವನ್ನು ಪ್ರಶಂಸಿದರೆ ಇನ್ನು ಕೆಲವರು ಹಾವಿನ ಭೀಕರ ಗಾತ್ರವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

ಇದನ್ನು ಓದಿ:Viral Video: Viral Video: ಪುಣೆಗೆ ಹೊರಟಿದ್ದ ವಿಮಾನದಲ್ಲಿ ತಪ್ಪಿದ ದುರಂತ; ಗಾಳಿಗೆ ಹಾರಿ ಬಿದ್ದ ಕಿಟಕಿಯ ಚೌಕಟ್ಟು, ವಿಡಿಯೋ ನೋಡಿ

ನೆಟ್ಟಿಗರೊಬ್ಬರು ಬಹಳಷ್ಟು ಧೈರ್ಯವಂತ. ಕೇವಲ ಪೈಪ್ ಮತ್ತು ಚೀಲದಿಂದ ಕಿಂಗ್ ಕೋಬ್ರಾ ಹಿಡಿದಿದ್ದಾನೆ ಎಂದು ಬರೆದು ಕೊಂಡಿದ್ದಾನೆ. ಮತ್ತೊಬ್ಬರು ಅದು ನಿಮ್ಮ ಕಿರಿಯ ಉದ್ಯೋಗಿಯೇನು? ಅದು ತನ್ನ ರಾಜ್ಯದ ರಾಜ. ಆದರೂ ಅದ್ಭುತ ಕೆಲಸ ಮಾಡಿದ್ದೀರಿ” ಎಂದು ಮೆಚ್ಚಿ ಕೊಂಡಿದ್ದಾರೆ.."ಇದು ತುಂಬ ಅಪಾಯಕಾರಿ ಮತ್ತು ಸಾಹಸಮಯ ಕೆಲಸ...ನೀವೇ ನಿಜಕ್ಕೂ ಧೈರ್ಯಶಾಲಿ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.