ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತರ ಹೇಳಿಕೊಟ್ಟ ಮೇಲ್ವಿಚಾರಕ: 93 ಉತ್ತರ ಪತ್ರಿಕೆ ಸೀಜ್!

Viral News: ರಾಜಸ್ಥಾನದಲ್ಲಿ ಮೇಲ್ವಿಚಾರಕರೇ ವಿದ್ಯಾರ್ಥಿಗಳಿಗೆ ಉತ್ತರ ಹೇಳಿಕೊಟ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಜೋಯಿ ಗ್ರಾಮದ ಶ್ರೀ ಕರ್ಣಿ ಕಾಲೇಜಿನಲ್ಲಿ ಬೆಳಿಗ್ಗೆ 7 ರಿಂದ 10 ರವರೆಗೆ ಬಿಎ ದ್ವಿತೀಯ ವರ್ಷದ ಹಿಂದಿ ಸಾಹಿತ್ಯ ಪರೀಕ್ಷೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಇಬ್ಬರು ಇನ್ವಿ ಜಿಲೇಟರ್‌ಗಳು ಪರೀಕ್ಷಾ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಸಾಮೂಹಿಕವಾಗಿ ಹೇಳಿಕೊಡುತ್ತಿರುವ ದೃಶ್ಯ ಕಂಡು ಬಂದಿದೆ. ಶಿಕ್ಷಣದ ಹೆಸರಿನಲ್ಲಿ ಈ ರೀತಿ ಆಕ್ರಮಗಳು ನಡೆಯುತ್ತಿರುವ ಬಗ್ಗೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

ಸಂಗ್ರಹ ಚಿತ್ರ

ಜೈಪುರ,ಜು. 23: ಪ್ರಸ್ತುತ ನೀಟ್ ಪರೀಕ್ಷೆಯ ಆಕ್ರಮದ ವಿರುದ್ಧ ಹೋರಾಟ ನಡೆಯುತ್ತಿದ್ದಾಗಲೇ ರಾಜಸ್ಥಾನದಲ್ಲಿ ಮೇಲ್ವಿಚಾರಕರೇ ವಿದ್ಯಾರ್ಥಿಗಳಿಗೆ ಉತ್ತರ ಹೇಳಿಕೊಟ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಜೋಯಿ ಗ್ರಾಮದ ಶ್ರೀ ಕರ್ಣಿ ಕಾಲೇಜಿನಲ್ಲಿ ಬೆಳಿಗ್ಗೆ 7 ರಿಂದ 10 ರವರೆಗೆ ಬಿಎ ದ್ವಿತೀಯ ವರ್ಷದ ಹಿಂದಿ ಸಾಹಿತ್ಯ ಪರೀಕ್ಷೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಇಬ್ಬರು ಇನ್ವಿಜಿಲೇಟರ್‌ಗಳು ಪರೀಕ್ಷಾ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಸಾಮೂಹಿಕವಾಗಿ ಹೇಳಿಕೊಡುತ್ತಿರುವ ದೃಶ್ಯ (Viral News) ಕಂಡು ಬಂದಿದೆ. ಶಿಕ್ಷಣದ ಹೆಸರಿನಲ್ಲಿ ಈ ರೀತಿ ಆಕ್ರಮಗಳು ನಡೆಯುತ್ತಿರುವ ಬಗ್ಗೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

ಪರೀಕ್ಷೆಗಳಲ್ಲಿ ಜವಾಬ್ದಾರಿ ವಹಿಸುವ ಮೇಲ್ವಿಚಾರಕರೇ ಈ ರೀತಿಯ ಕೃತ್ಯ ಎಸಗಿದರೆ ಹೇಗೆ ಎಂದು ಪೋಷಕರು ಪ್ರಶ್ನೆ ಮಾಡುತ್ತಿದ್ದಾರೆ. ವಿಶ್ವವಿದ್ಯಾನಿಲಯದ ಅಧಿಕಾರಿಗಳ ಪ್ರಕಾರ, ಪ್ರಾಧ್ಯಾಪಕ ಅಮನ್ ಸಿಂಗ್, ಸುರೇಶ್ ಚೌಧರಿ, ಲಲಿತ್ ಝಾಲಾ ಮತ್ತು ಗೌರವ್ ಜೈನ್ ಅವರನ್ನೊಳಗೊಂಡ ತಂಡವು ಪರೀಕ್ಷಾ ಪರಿಶೋಧನೆಗಾಗಿ ಪರೀಕ್ಷಾ ಕೊಠಡಿಯೊಳಗೆ ಅನಿರೀಕ್ಷಿತ ಭೇಟಿ ನೀಡಿದೆ. ಈ ಸಂದರ್ಭದಲ್ಲಿ ಜೈ ಕರಣ್ ಮತ್ತು ಓಂ ಪ್ರಕಾಶ್ ಎಂದು ಗುರುತಿಸಲಾದ ಇಬ್ಬರು ಮೇಲ್ವಿಚಾರಕರು ಪರೀಕ್ಷಾ ಒಳಗೆ ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಹೇಳಿಕೊಡುತ್ತಿರುವುದು ಕಂಡು ಬಂದಿದೆ.

ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯ 93 ಉತ್ತರ ಪತ್ರಿಕೆಗಳನ್ನು ಸೀಲ್ ಮಾಡಿ ಘಟನೆಯ ಬಗ್ಗೆ ತನಿಖೆ ಆರಂಭಿಸಿದೆ ಕಾಲೇಜಿನಲ್ಲಿ ಶನಿವಾರ ಬೆಳಿಗ್ಗೆ 7 ರಿಂದ 10 ರವರೆಗೆ ಬಿಎ ದ್ವಿತೀಯ ವರ್ಷದ ಹಿಂದಿ ಸಾಹಿತ್ಯ ಪರೀಕ್ಷೆ ನಡೆಯುತ್ತಿತ್ತು. ಈ ವೇಳೆ ಇಬ್ಬರು ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಡಿಕ್ಟೇಟ್ ಮಾಡಿದ್ದಾರೆ.

Viral Video: ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 1 ಲಕ್ಷ ರುಪಾಯಿ ಖರ್ಚು ಮಾಡಿ ಆಸ್ಟ್ರೇಲಿಯಾದಿಂದ ಬಂದ ಬಿ.ಟೆಕ್ ಪದವೀಧರ!

ಉತ್ತರ ಪತ್ರಿಕೆಗಳನ್ನು ವೀಕ್ಷಣೆ ಮಾಡಿದಾಗ ಹಲವಾರು ವಿದ್ಯಾರ್ಥಿಗಳು ಬರೆದ ಉತ್ತರಗಳಲ್ಲಿ ಗಮನಾರ್ಹ ಹೋಲಿಕೆಗಳು ಪತ್ತೆಯಾಗಿವೆ. ಜೊತೆಗೆ ಕಾಲೇಜಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗಲೂ ಮೇಲ್ವಿಚಾರಕರು ಉತ್ತರ ಹೇಳಿ ಕೊಡುತ್ತಿರುವುದು ಸಾಬೀತಾಗಿದೆ. ಸದ್ಯ ಜೈಸಲ್ಮೇರ್ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಶ್ಯಾಮ್ ಸುಂದರ್ ಮೀನಾ ಅವರು ಪ್ರಕರಣವನ್ನು ದೃಢಪಡಿಸಿದ್ದು , ಪತ್ರಿಕೆಗಳನ್ನು ವಶಪಡಿಸಿಕೊಂಡ ತಕ್ಷಣ ಆ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಂದುವರಿಸಲು ಹೊಸ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿದೆ ಎಂದಿದ್ದಾರೆ.

ಆದರೆ, ವಿವಿ ನಿಯಮಾವಳಿಗಳ ಪ್ರಕಾರ ನಕಲು ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿಗಳನ್ನು 1 ರಿಂದ 3 ವರ್ಷಗಳ ಕಾಲ ಪರೀಕ್ಷೆ ಬರೆಯದಂತೆ ಡಿಬಾರ್ ಮಾಡುವ ಅವಕಾಶವಿದ್ದು ಈ ಬಗ್ಗೆ ನಿರ್ಧಾರ ಕೈಗೊಳ್ಳಲು ತನಿಖೆ ನಡೆಯುತ್ತಿದೆ ಅಂದರು.