ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಇದೆಂಥಾ ಅಸಹ್ಯ! ತಯಾರಿಸಿಟ್ಟ ಜಾಮೂನ್‌ ಗೆ ಮೂತ್ರ ವಿಸರ್ಜನೆ ಮಾಡಿದ ಕೊಳಕ- ವಿಡಿಯೊ ವೈರಲ್

ವ್ಯಕ್ತಿಯೊಬ್ಬ ತಯಾರಿಸಿಟ್ಟ ಸ್ವೀಟ್‌ಗೆ ಮೂತ್ರ ವಿಸರ್ಜಿಸುವ ಅಸಹ್ಯಕರ ವಿಡಿಯೊವೊಂದು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ಭಾರಿ ವೈರಲ್‌ ಆಗುತ್ತಿದ್ದು ಇದನ್ನು ನೋಡಿದ ನೆಟ್ಟಿಗರು ಛೀ, ಥೂ ಎಂದು ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ವ್ಯಕ್ತಿಯೊಬ್ಬ ಗುಲಾಬ್ ಜಾಮೂನು ತಯಾರಿಸಿಟ್ಟ ಕಡಾಯಿಗೆ ಮೂತ್ರ ವಿಸರ್ಜನೆ ಮಾಡುವ ದೃಶ್ಯ ವಿಡಿಯೊದಲ್ಲಿ ಕಂಡುಬಂದಿದೆ. ಆತನ ಪಕ್ಕದಲ್ಲಿ ನಿಂತಿದ್ದ ಸಹೋದ್ಯೋಗಿ ಇದನ್ನು ವಿಡಿಯೊ ಮಾಡಿದ್ದಾರೆ

Viral Video

ನವದೆಹಲಿ: ಸಾಮಾನ್ಯವಾಗಿ ಜನರಿಗೆ ಹೊರಗಿನ ಸ್ಟ್ರೀಟ್ ಫುಡ್ ಆಹಾರಗಳು ಬಹಳ ಇಷ್ಟವಾಗುತ್ತವೆ. ಆದರೆ ಕೆಲವೆಡೆ ಆಹಾರ ತಯಾರಿಸೋ ಸ್ಥಳ, ಆಹಾರ ತಯಾರಿಸೋ ರೀತಿ ತುಂಬಾ ಕೆಟ್ಟದಾಗಿರುತ್ತೆ ಎನ್ನುವುದಕ್ಕೆ ಈ ವಿಡಿಯೊ ಸಾಕ್ಷಿ. ಇಲ್ಲೊಬ್ಬ ಗುಲಾಬ್ ಜಾಮೂನು ತಯಾರು ಮಾಡುವ ಬಗೆ ನೋಡಿದ್ರೆ ವಾಕರಿಕೆ ಬರೋದು ಖಂಡಿತ.ಸದ್ಯ ಇಂಟರ್‌ನೆಟ್‌ನಲ್ಲಿ ಈ ವಿಡಿಯೊ ಫುಲ್ ವೈರಲ್(Viral Video) ಆಗ್ತಿದೆ. ವ್ಯಕ್ತಿಯೊಬ್ಬ ತಯಾರಿಸಿಟ್ಟ ಸ್ವೀಟ್‌ ಗೆ ಮೂತ್ರ ವಿಸರ್ಜಿಸುವ ಅಸಹ್ಯಕರ ವಿಡಿಯೊವೊಂದು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು ಸದ್ಯಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ಭಾರಿ ವೈರಲ್‌ ಆಗುತ್ತಿದ್ದು ಇದನ್ನು ನೋಡಿದ ನೆಟ್ಟಿಗರು ಛೀ, ಥೂ ಎಂದು ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.



ವ್ಯಕ್ತಿಯೊಬ್ಬ ಗುಲಾಬ್ ಜಾಮೂನು ತಯಾರಿಸಿಟ್ಟ ಕಡಾಯಿಗೆ ಮೂತ್ರ ವಿಸರ್ಜನೆ ಮಾಡುವ ದೃಶ್ಯ ವಿಡಿಯೊದಲ್ಲಿ ಕಂಡುಬಂದಿದೆ. ಆತನ ಪಕ್ಕದಲ್ಲಿ ನಿಂತಿದ್ದ ಸಹೋದ್ಯೋಗಿ ಇದನ್ನು ವಿಡಿಯೊ ಮಾಡಿದ್ದಾರೆ. ಈ ವಿಡಿಯೊ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ಯಾವುದೇ ವಿವೇಕವಂತ ಬುದ್ದಿ ಇದ್ದವರು ಇಂತಹ ಕೆಲಸ ಮಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಈ ವಿಡಿಯೊ‌ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ನೆಟ್ಟಿಗರು ವ್ಯಕ್ತಿಯ ಅಸಹ್ಯಕರ ವರ್ತನೆಯ ಬಗ್ಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ವರು ಯಾಕೆ ತಿನ್ನುವ ಆಹಾರವನ್ನು ಇಷ್ಟು ಅಸಹ್ಯವಾಗಿ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರ ‌ಇದನ್ನು ಆತನಿಗೆಯೇ ತಿನ್ನಿಸಬೇಕೆಂದು ಕಮೆಂಟ್ ಮಾಡಿದ್ದಾರೆ. ಈ ರೀತಿ ತಿನ್ನುವ ಆಹಾರವನ್ನು ಅಸಹ್ಯಕರ ಮಾಡಿದವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: Viral Video: ಈ ಕೋತಿಗಳ ಕುಚೇಷ್ಟೆ ಒಂದೆರಡಲ್ಲ! ಕಪಿರಾಯನ ಕಾಟಕ್ಕೆ ಪ್ರವಾಸಿಗರು ಕಂಗಾಲು; ವಿಡಿಯೊ ಭಾರೀ ವೈರಲ್

ಈ ಹಿಂದೆ ಇಂತಹುದೇ ಹಲವು ಅಸಹ್ಯಕರ ಆಹಾರ ತಯಾರಿಕೆಯ ವಿಡಿಯೊ ವೈರಲ್ ಆಗಿತ್ತು. ಪಾನಿಪೂರಿ ಮಾರುತ್ತಿದ್ದ ವ್ಯಕ್ತಿ ಮೂತ್ರವನ್ನು ಆಹಾರಕ್ಕೆ ಬೆರೆಸುತ್ತಿದ್ದ ವಿಡಿಯೊ ವೈರಲ್ ಆಗಿತ್ತು. ಅಷ್ಟೇ ಅಲ್ಲದೆ, ಕೊಳೆತ ಆಲೂಗಡ್ಡೆಯನ್ನು ಮಸಾಲೆಗೆ ಮಿಶ್ರಣ ಮಾಡುತ್ತಿದ್ದ ಘಟನೆಯ ವಿಡಿಯೊ ಕೂಡ ವೈರಲ್ ಆಗಿತ್ತು.