ಟೋಕಿಯೊ, ಸೆ. 2: ಇತ್ತೀಚೆಗೆ ಜಪಾನ್‌ನ ಬೇಬಿ ಮಂಕಿ ಪಂಚ್ (Punch Monkey) ಭಾರಿ ಸುದ್ದಿಯಲ್ಲಿದೆ. ಜಪಾನ್‌ನ ಮೃಗಾಯಲವೊಂದರಲ್ಲಿದ್ದ ಏಳು ತಿಂಗಳ ಪುಟ್ಟ ಮಂಗ ಪಂಚ್ ಹುಟ್ಟಿದ ಕೂಡಲೇ ತಾಯಿಯಿಂದ ಬೇರ್ಪಟ್ಟು ಒಬ್ಬಂಟಿಯಾಗಿತ್ತು. ಇತರ ಮಂಗಗಳು ಅದನ್ನು ಹತ್ತಿರಕ್ಕೂ ಸೇರಿಸಿಕೊಳ್ಳುತ್ತಿರಲಿಲ್ಲ. ಹತ್ತಿರ ಹೋದರೆ ಹೊಡೆದು ಹಿಂಸೆ ನೀಡುತ್ತಿದ್ದವು. ಹೀಗಾಗಿ ಮೃಗಾಲಯದ ಸಿಬ್ಬಂದಿ ಅದಕ್ಕೆ ಒರಾಂಗುಟನ್ ಗೊಂದೆ ನೀಡಿದ್ದರು. ಅದನ್ನೇ ಪಂಚ್ ತನ್ನ ತಾಯಿ ಎಂದು ಪರಿಗಣಿಸಿ ಆಟವಾಡುತ್ತಿತ್ತು. ಇದರ ಕಥೆ ಕೇಳಿ ಪ್ರಾಣಿಪ್ರಿಯರು ಕಣ್ಣೀರು ಸುರಿಸಿದ್ದರು. ಆ ಮೂಲಕ ಪಂಚ್ ಜಗತ್ತಿನ ಗಮನ ಸೆಳೆದಿತ್ತು. ಇದನ್ನು ನೋಡಲೆಂದೇ ಸಾರ್ವಜನಿಕರು ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದರು. ಆದರೆ ಇತ್ತೀಚೆಗೆ ಪಂಚ್ ಸಾರ್ವಜನಿಕರಿಗೆ ಕಾಣಿಸದೆ ಇರುವುದರಿಂದ ಅದು ಸತ್ತಿದೆ ಎಂಬ ವದಂತಿಗಳು ಹಬ್ಬಿತ್ತು. ಈ ಬಗ್ಗೆ ಇದೀಗ ಇಚಿಖಾವಾ ಮೃಗಾಲಯದ ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ. ಜತೆಗೆ ವದಂತಿಯನ್ನು ತ‍್ಳಿ ಹಾಕಿದ್ದು, ಪಂಚ್ ಆರೋಗ್ಯದಿಂದ ಇರುವುದಾಗಿ ತಿಳಿಸಿದೆ.
ಈ ಹಿಂದೆ ಪಂಚ್ ನೋಡಲು ಮೃಗಾಲಯಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತಿತ್ತು. ಆದರೆ ಇದೀಗ ಅದು ಸಾರ್ವಜನಿಕರಿಂದ ಕಣ್ಮರೆಯಾಗಿದ್ದು ಹೊಸ ವದಂತಿಗಳಿಗೆ ಕಾರಣವಾಗಿದೆ. ಕೆಲವರು ಅದು ಸತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ನಡುವೆ ವದಂತಿಗಳಿಗೆ ಈಗ ಸ್ಪಷ್ಟನೆ ಸಿಕ್ಕಿದ್ದು ಪಂಚ್ ಸಂಪೂರ್ಣ ಆರೋಗ್ಯವಾಗಿದೆ ಎಂದು ವರದಿಯಾಗಿದೆ.
ಕೆಲಸದ ಸಮಯ ಮುಗಿದ್ರೂ ಮನೆಗೆ ಹೋಗಂಗಿಲ್ಲ
ಪಂಚ್ ಸಾರ್ವಜನಿಕರಿಗೆ ಕಾಣಿಸದೇ ಇರಲು ಕಾರಣ ಆರೋಗ್ಯ ಸಮಸ್ಯೆಯಲ್ಲ, ಬದಲಿಗೆ ಪಂಚ್ ಇರುವ ಮೃಗಾಲಯದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ಇಲ್ಲಿ ಸುಧಾರಣಾ ಕೆಲಸಗಳು ನಡೆಯುತ್ತಿರುವುದರಿಂದ ಸೆಪ್ಟೆಂಬರ್ 1ರಿಂದ 18ರವರೆಗೆ ಮಂಕಿ ಮೌಂಟೇನ್ ಪ್ರದೇಶವನ್ನು ಸಂದರ್ಶಕರಿಗೆ ಮುಚ್ಚಲಾಗುವುದು ಎಂದು ಇಚಿಕಾವಾ ಮೃಗಾಲಯ ಘೋಷಿಸಿದೆ. ಆವರಣದಲ್ಲಿ ವಾಸಿಸುವ ಮಂಗಗಳ ವಾಸಸ್ಥಳ ಸುಧಾರಿಸಲು ಸನ್‌ಶೇಡ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಹೀಗಾಗಿ ಪಂಚ್ ಕಾಣಿಸಿಕೊಳ್ಳುತ್ತಿಲ್ಲ ಎಂದು ವಿವರಿಸಲಾಗಿದೆ.
ಕೋತಿಗಳ ವಾಸಸ್ಥಳದ ವಾತಾವರಣವನ್ನು ಉತ್ತಮಗೊಳಿಸಲು, ಬಿಸಿಲಿನಿಂದ ರಕ್ಷಣೆ ನೀಡುವ ನೆರಳು ಹಾಗೂ ಇತರ ಸೌಲಭ್ಯಗಳನ್ನು ಅಳವಡಿಸಲು ಕಾಮಗಾರಿ ನಡೆಸಲಾಗುತ್ತಿದೆ. ಹೀಗಾಗಿ ಪಂಚ್ ವೀಕ್ಷಕರಿಗೆ ನೋಡಲು ಸಿಗುತ್ತಿಲ್ಲ. ವೀಕ್ಷಣಾ ಪ್ರದೇಶ ಬಂದ್ ಆಗುವ ಮುನ್ನ ಭೇಟಿ ನೀಡಿದ ಸಾರ್ವಜನಿಕರ ಪ್ರಕಾರ, ಪಂಚ್ ಇತರ ಕೋತಿಗಳೊಂದಿಗೆ ಆಟವಾಡುತ್ತಾ ಆ್ಯಕ್ಟೀವ್ ಆಗಿ ಇತ್ತು ಎಂದು ಹೇಳಿಕೊಂಡಿದ್ದಾರೆ.