ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಳೆ ಬರ್ತಿದೆ ವರ್ಕ್‌ ಫ್ರಾಂ ಹೋಂ ಕೊಡಿ ಎಂದ ಉದ್ಯೋಗಿಗೆ ಕಂಪನಿ ಹೇಳಿದ್ದೇನು? ವೈರಲ್‌ ಆಯ್ತು ಪೋಸ್ಟ್‌

Viral News: ಗುಜರಾತ್ ನಲ್ಲಿ ಸುರಿಯುತ್ತಿರುವ ತೀವ್ರ ಮಳೆಯ ನಡುವೆಯೂ ಅಹಮದಾಬಾದ್ ಮೂಲದ ಐಟಿ ಕಂಪನಿಯೊಂದು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನಿರಾಕರಣೆ ಮಾಡಿದೆ. ಗುಜರಾತ್‌ನ ಕೆಲವು ಭಾಗಗಳಲ್ಲಿ ಮಳೆಯ ಅಭಾವದಿಂದ ಅಸ್ತ ವ್ಯಸ್ತಗೊಂಡಿದ್ದು ರಸ್ತೆಗಳು ಜಲಾವೃತಗೊಂಡಿವೆ. ಟ್ರಾಫಿಕ್ ಜಾಮ್‌ಗಳಿಂದಾಗಿ ಸಾವಿರಾರು ಜನರಿಗೆ ದೈನಂದಿನ ಪ್ರಯಾಣ ಕಷ್ಟಕರವಾಗಿದೆ. ಇದಕ್ಕಾಗಿ ಕಂಪನಿಯ ಬಹಳಷ್ಟು ನೌಕರರು ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕೇಳಿದ್ದು ಮ್ಯಾನೇಜರ್ ಇದನ್ನು ನಿರಾಕರಣೆ ಮಾಡಿದ್ದಾರೆ.

ಸಂಗ್ರಹ ಚಿತ್ರ

ಅಹಮದಾಬಾದ್,ಜು.24: ಕೆಲವೊಂದು ಐಟಿ ಕಂಪನಿಗಳು ಉದ್ಯೋಗಿಗಳ ಸಮಸ್ಯೆಯನ್ನು ಅರಿಯದೇ ಕಠಿಣ ನಿಯಮ ಗಳನ್ನು ಜಾರಿಗೆ ತರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಗುಜರಾತ್ ನಲ್ಲಿ ಸುರಿಯುತ್ತಿರುವ ತೀವ್ರ ಮಳೆಯ ನಡುವೆಯೂ ಅಹಮದಾಬಾದ್ ಮೂಲದ ಐಟಿ ಕಂಪನಿಯೊಂದು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನಿರಾಕರಣೆ ಮಾಡಿದೆ. ಗುಜರಾತ್‌ನ ಕೆಲವು ಭಾಗಗಳಲ್ಲಿ ಮಳೆಯ ಅಭಾವದಿಂದ ಅಸ್ತ ವ್ಯಸ್ತಗೊಂಡಿದ್ದು ರಸ್ತೆಗಳು ಜಲಾವೃತಗೊಂಡಿವೆ. ಟ್ರಾಫಿಕ್ ಜಾಮ್‌ಗಳಿಂದಾಗಿ ಸಾವಿರಾರು ಜನರಿಗೆ ದೈನಂದಿನ ಪ್ರಯಾಣ ಕಷ್ಟಕರವಾಗಿದೆ. ಇದಕ್ಕಾಗಿ ಕಂಪನಿಯ ಬಹಳಷ್ಟು ನೌಕರರು ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕೇಳಿದ್ದು ಮ್ಯಾನೇಜರ್ ಇದನ್ನು ನಿರಾಕರಣೆ ಮಾಡಿದ್ದಾರೆ. ಉದ್ಯೋ ಗಿಯೊಬ್ಬರು ಮ್ಯಾನೇಜರ್ ಜೊತೆ ಸಂಭಾಷಣೆಯನ್ನು ಮಾಡಿರುವ ಸ್ಕ್ರೀನ್‌ಶಾಟ್ ಅನ್ನು ಶೇರ್ (Viral News) ಮಾಡಿದ್ದಾರೆ

ಅಹಮದಾಬಾದ್ ಮೂಲದ ಐಟಿ ಸಂಸ್ಥೆಯ ಉದ್ಯೋಗಿಯೊಬ್ಬರು ಮ್ಯಾನೇಜರ್ ಜೊತೆ ಸಂಭಾಷಣೆಯನ್ನು ಮಾಡಿರುವ ಸ್ಕ್ರೀನ್‌ಶಾಟ್ ಅನ್ನು ಶೇರ್ ಮಾಡಿದ್ದಾರೆ. ಅಲ್ಲಿ ಹೆಚ್ಚಿನ ಉದ್ಯೋಗಿಗಳು ಭಾರೀ ಮಳೆ ಹಾಗೂ ರಸ್ತೆಗಳ ಹಾನಿಯ ತೊಂದರೆಯಿಂದ ಮನೆಯಿಂದ ಕೆಲಸ ಮಾಡಲು ಅನುಮತಿ ಕೋರಿದ್ದಾರೆ. ಇದಕ್ಕೆ ಉತ್ತರಿಸಿದ ಮ್ಯಾನೇಜರ್ ಮಳೆಯ ಕಾರಣದಿಂದ WFH ಕೇಳುತ್ತಿದ್ದೀರಿ. ಇಂದು ಸ್ವಲ್ಪ ತಡವಾಗಿ ಬಂದರೂ ಸಮಸ್ಯೆ ಇಲ್ಲ,ಆದರೆ ಕೆಲಸಕ್ಕೆ ಕಚೇರಿಗೆ ಬನ್ನಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದಕ್ಕೆ ರೆಸ್ಪಾನ್ಸ್ ಮಾಡಿದ ಇನ್ನೊಬ್ಬ ಮ್ಯಾನೇಜರ್ ಕಂಪನಿಯ ನಿಲುವನ್ನು ಸ್ಪಷ್ಟಪಡಿಸುತ್ತಾ, “ತಡವಾಗಿ ಬರುವುದು ಎಂದರೆ ಮಳೆ ನಿಲ್ಲುವವರೆಗೆ ಕಾಯುವುದು" ಎಂದಲ್ಲ, ಆದರೆ ಯಾರಾ ದರೂ ಮಳೆಯಿಂದಾಗಿ ಸಂಚಾರದಲ್ಲಿ ಸಿಲುಕಿಕೊಂಡರೆ ವಿನಾಯಿತಿ ಇದೆ ಎಂದು ಹೇಳಿದ್ದಾರೆ‌. ಈ ಸ್ಕ್ರೀನ್‌ಶಾಟ್ ಹಂಚಿಕೊಂಡ ಉದ್ಯೋಗಿ, ನಿರ್ಧಾರವನ್ನು ಟೀಕಿಸುತ್ತಾ ಮ್ಯಾನೇಜರ್ ವರ್ತನೆ ಎಷ್ಟು ಸರಿ? ಪ್ರಯಾಣ ಮಾಡಲು ಕಷ್ಟ ಎಂದರೂ ಇವರಿಗೆ ಅರಿವಾಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ‌

Viral Video: ಯೋಧ ಯಾವತ್ತಿದ್ದರೂ ಯೋಧನೇ; ಚಾರ್ಜ್‌ ಖಾಲಿಯಾದ ಮಹಿಳೆಯ ಎಲೆಕ್ಟ್ರಿಕ್‌ ಕಾರ್‌ ತಳ್ಳಿದ ಸೈನಿಕ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಲವಾರು ಬಳಕೆದಾರರು ಐಟಿ ಕಂಪನಿಯು ಇಂತಹ ಪರಿಸ್ಥಿತಿಗಳಲ್ಲಿ ಉದ್ಯೋಗಿಗಳನ್ನು ಏಕೆ ಒತ್ತಾಯಿಸಿತು ಎಂದು ಪ್ರಶ್ನಿಸಿದರು. ಬಳಕೆದಾರರೊಬ್ಬರು "ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದರೂ ನೌಕರರ ಸುರಕ್ಷತೆಗಿಂತ ಕಂಪನಿಗೆ ಬರುವುದು ಮುಖ್ಯವೇ? ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಇಂತಹ ಕಂಪನಿಯಲ್ಲಿ ಕೆಲಸ ಮಾಡುವುದಕ್ಕಿಂತ ಇತರ ಆಯ್ಕೆ ನೋಡಿಕೊಳ್ಳಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ