ಐಜ್ವಾಲ್,ಎ. 20: ಭಾರತದಲ್ಲಿ ಇಂದು ಟ್ರಾಫಿಕ್ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ರಸ್ತೆ ಮಧ್ಯೆ ವಾಹನಗಳ ಸಾಲು, ಕಿಕ್ಕಿರಿದ ಜನ ಸಂದಣಿ ಜನರಿಗೆ ದೊಡ್ಡ ತಲೆನೋವಾಗಿ ಬಿಟ್ಟಿದೆ. ಸಿಗ್ನಲ್ ಗಳಿದ್ದರೂ ವಾಹನ ಸವಾರರು ಕೆಲವೊಮ್ಮೆ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸಿ ದಾರಿಹೋಕರಿಗೂ ಅಪಾಯ ಉಂಟು ಮಾಡುತ್ತಾರೆ. ಈ ನಡುವೆ ಮಿಜೋರಾಂದಲ್ಲಿ ಟ್ರಾಫಿಕ್ ನಡುವೆ ವಾಹನ ಸವಾರರ ಶಿಸ್ತಿನ ವಿಡಿಯೊ ವೈರಲ್ (Viral News) ಆಗುತ್ತಿದೆ. ಈ ದೃಶ್ಯ ನೋಡಿದ ಅನೇಕರು ಹೊಗಳಿದ್ದಾರೆ.
ಭಾರತದಲ್ಲಿ ಜನರ ನಡವಳಿಕೆ, ರಸ್ತೆಗಳಲ್ಲಿ ತಾಳ್ಮೆ ಮತ್ತು ದೈನಂದಿನ ಸಾರ್ವಜನಿಕ ಜವಾಬ್ದಾರಿಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕುವಂತೆ ಮಾಡಿದೆ. ಭಾರತದಲ್ಲಿ ಟ್ರಾಫಿಕ್ ಅಂದಾಗ ಅಂದಾಗ ಜನ ತಲೆಬಿಸಿ ಮಾಡಿಕೊಂಡು ಅಡ್ಡ ದಿಡ್ಡಿಯಾಗಿ ಅವಸರಿಂದ ಗಾಡಿ ಓಡಿಸುವುದೇ ಹೆಚ್ಚು. ಈ ನಡುವೆ ಮಿಜೋರಾಂದಲ್ಲಿ ಅಪರೂಪದ ದೃಶ್ಯ ಕಂಡು ಬಂದಿದೆ.
ವಿಡಿಯೋ ನೋಡಿ:
ಇಲ್ಲಿ ವಾಹನಗಳು ಗುರುತಿಸಲಾದ ಲೇನ್‌ಗಳಲ್ಲಿ ಶಾಂತವಾಗಿ ಜಾಗರೂಕತೆಯಿಂದ ಚಲಿಸುತ್ತಿವೆ. ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಸರಿಯಾದ ದೂರವನ್ನು ಕಾಯ್ದುಕೊಂಡಿದೆ. ಅದೇ ರೀತಿ ಅನಗತ್ಯ ಓವರ್‌ಟೇಕಿಂಗ್ ಅನ್ನು ತಪ್ಪಿಸಿ ತಾಳ್ಮೆಯಿಂದ ತಮ್ಮ ಸರದಿಯಲ್ಲಿ ಕಾಯುವುದನ್ನು ಗಮನಿಸಬಹುದು.
Viral Video: ವೇದಿಕೆಯಲ್ಲೇ ಆ್ಯಂಕರ್‌ಗೆ ಚಪ್ಪಲಿಯಿಂದ ಹೊಡೆದ ಖ್ಯಾತ ಗಾಯಕಿ
ಮಿಜೋರಾಂನಲ್ಲಿ ವಾಹನ ಸವಾರರ ಶಿಸ್ತನ್ನು ತೋರಿಸುವ ಒಂದು ಸಣ್ಣ ವೀಡಿಯೊ ಸಾಮಾಜಿಕ ಮಾಧ್ಯಮವನ್ನು ಆಕರ್ಷಿಸಿದೆ. ದೇಶಾದ್ಯಂತ ವೀಕ್ಷಕರಿಂದ ಭಾರೀ ಮೆಚ್ಚುಗೆಯನ್ನು ಕೂಡಗಳಿಸಿದೆ. ವಿಶೇಷವಾಗಿ ಎಷ್ಟೇ ವಾಹನದ ಲೈನ್ ಇದ್ದರೂ ಹಾರ್ನ್ ಮಾಡದೇ ತಾಳ್ಮೆಯಿಂದ ಕಾದಿರುವುದು. ಈ ದೃಶ್ಯವು ಭಾರತದ ಅಸ್ತವ್ಯಸ್ತವಾಗಿರುವ ಸಂಚಾರ ಶಬ್ದಕ್ಕೆ ಹೋಲಿಸಿದರೆ ಇದು ಅಸಾಮಾನ್ಯ ಎಂದು ಹಲವಾರು ಹೇಳಿದ್ದಾರೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಭಾರತದಲ್ಲಿನ ಪ್ರಯಾಣಿಕರಿಗೆ ಸಮಯವೂ ಇಲ್ಲ. ತಾಳ್ಮೆಯೂ ಇಲ್ಲ ಎಂದು ಬರೆಸಿದ್ದಾರೆ. ಮತ್ತೊಬ್ಬರು ರಸ್ತೆಯಲ್ಲಿ ಒಬ್ಬರಿಗೊಬ್ಬರು ಗೌರವ ನೀಡುತ್ತಾ ನಿಂತಿರುವುದು ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ. ಇದು ಎಐ ವಿಡಿಯೊ ಅಲ್ಲ.ಇದು ಭಾರತದಲ್ಲಿ ಕನಸಿನ ಮಾತು ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಈ ಬಗ್ಗೆ ಮಿಜೋದ ಜನರು ಪ್ರತಿಕ್ರಿಯೆ ನೀಡಿದ್ದು ನಾವು ಪರಿಪೂರ್ಣರಲ್ಲ, ಆದರೆ ನಮ್ಮ ಶಿಸ್ತಿಗೆ ಹೋಗಳಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.