ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral Video: ಪೊಲೀಸ್ ಠಾಣೆಯಲ್ಲೇ ಕಾನ್ಸ್‌ಟೇಬಲ್‌ಗಳ ರೊಮ್ಯಾನ್ಸ್‌; ತನ್ನ ಪಾಡಿಗೆ ಕೂತಿದ್ದ ಪೇದೆಯನ್ನು ತಬ್ಬಿ ಮುತ್ತಿಕ್ಕಿದ ಲೇಡಿ ಪೊಲೀಸ್

ಉತ್ತರ ಪ್ರದೇಶದ ಜಾಲೌನ್‌ನ ಓರೈ ಪೊಲೀಸ್ ಠಾಣೆಯಲ್ಲಿ ಇಬ್ಬರು ಕಾನ್ಸ್‌ಟೇಬಲ್‌ಗಳು ಆತ್ಮೀಯವಾಗಿ ವರ್ತಿಸುತ್ತಿರುವುದಾಗಿ ಹೇಳಲಾದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಪುರುಷ ಕಾನ್ಸ್‌ಟೇಬಲ್ ಅರವಿಂದ್‌ನನ್ನು ಅಮಾನತುಗೊಳಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಪೋಲಿಸ್ ಠಾಣೆಯಲ್ಲಿ ಸಿಬ್ಬಂದಿ ರೋಮಾನ್ಸ್

ಲಖನೌ, ಜೂ. 27: ಉತ್ತರ ಪ್ರದೇಶದ ಜಾಲೌನ್ ಜಿಲ್ಲೆಯ ಓರೈ ಪೊಲೀಸ್ ಠಾಣೆಯಲ್ಲಿ ಮಹಿಳಾ ಹಾಗೂ ಪುರುಷ ಕಾನ್ಸ್‌ಟೇಬಲ್ ಆತ್ಮೀಯವಾಗಿ ವರ್ತಿಸುತ್ತಿರುವ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಜಾಲೌನ್ ಪೊಲೀಸರು ಕ್ರಮ ಕೈಗೊಂಡಿದ್ದು, ಪುರುಷ ಕಾನ್ಸ್‌ಟೇಬಲ್ ಅರವಿಂದ್‌ನನ್ನು ತಕ್ಷಣದಿಂದಲೇ ಅಮಾನತುಗೊಳಿಸಿದ್ದಾರೆ. ವೈರಲ್ ಆಗಿರುವ ದೃಶ್ಯದಲ್ಲಿ, ಕಂಪ್ಯೂಟರ್ ಮುಂದೆ ಕುಳಿತಿದ್ದ ಅರವಿಂದ್ ಬಳಿಗೆ ಮಹಿಳಾ ಕಾನ್ಸ್‌ಟೇಬಲ್ ಬಂದು ಹಿಂದಿನಿಂದ ಅಪ್ಪಿಕೊಳ್ಳುತ್ತಿರುವುದು ಕಂಡು ಬಂದಿದೆ. ಬಳಿಕ ಇಬ್ಬರೂ ಠಾಣೆಯೊಳಗೆ ಆತ್ಮೀಯವಾಗಿ ಮಾತನಾಡುತ್ತಾ ಓಡಾಡುತ್ತಿರುವ ದೃಶ್ಯವೂ ಸಿಸಿಟಿವಿಯಲ್ಲಿ ದಾಖಲಾಗಿರುವುದಾಗಿ ವರದಿಯಾಗಿದೆ.

ಘಟನೆಯ ವೇಳೆ ಇಬ್ಬರೂ ಸಾಮಾನ್ಯ ಉಡುಪಿನಲ್ಲಿ ಇದ್ದರು. ಆದರೆ ಪುರುಷ ಕಾನ್ಸ್‌ಟೇಬಲ್ ಕರ್ತವ್ಯದಲ್ಲಿದ್ದ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ವಿಡಿಯೊ ಇಲ್ಲಿದೆ:



ಘಟನೆ ಕುರಿತು ಜಾಲೌನ್ ಪೊಲೀಸರು ಗಮನ ಹರಿಸಿ, ಕಾನ್ಸ್‌ಟೇಬಲ್ ಅರವಿಂದ್‌ನನ್ನು ಅಮಾನತುಗೊಳಿಸಿದ್ದು, ಸಂಪೂರ್ಣ ಪ್ರಕರಣದ ತನಿಖೆಯನ್ನು ನಗರ ಉಪವಿಭಾಗಾಧಿಕಾರಿಗೆ ವಹಿಸಿದ್ದಾರೆ. ತನಿಖಾ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಉಚಿತ ಪ್ರಯಾಣ ನಿರಾಕರಿಸಿದ ಆಟೋ ಚಾಲಕನನ್ನು ನಿಂದಿಸಿದ ಹೋಮ್ ಗಾರ್ಡ್ ಸಿಬ್ಬಂದಿ

ಪುರುಷ ಅಧಿಕಾರಿ ವಿರುದ್ಧ ಮಾತ್ರ ಕ್ರಮವೇಕೆ?

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಪುರುಷ ಕಾನ್ಸ್‌ಟೇಬಲ್ ವಿರುದ್ಧ ಮಾತ್ರ ಕ್ರಮ ಕೈಗೊಂಡಿರುವುದಕ್ಕೆ ಪ್ರಶ್ನೆಗಳು ಎದ್ದಿವೆ. ಮಹಿಳಾ ಕಾನ್ಸ್‌ಟೇಬಲ್ ವಿರುದ್ಧವೂ ಸಮಾನ ಕ್ರಮ ಕೈಗೊಳ್ಳಬೇಕಿತ್ತು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಲಿಂಗ ತಾರತಮ್ಯದ ಕುರಿತು ಚರ್ಚೆ ಆರಂಭವಾಗಿದೆ. ಮತ್ತೊಂದೆಡೆ, ಕೆಲವರು ಸಿಸಿಟಿವಿ ದೃಶ್ಯವನ್ನು ಸಹೋದ್ಯೋಗಿಯೊಬ್ಬರು ಸೋರಿಕೆ ಮಾಡಿರಬಹುದು ಎಂದು ಊಹಿಸಿದ್ದಾರೆ.