ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮುಸ್ಲಿಂ ಪತ್ರಕರ್ತನ ಮನೆ ನೆಲಸಮ; ತನ್ನ ಭೂಮಿಯನ್ನೇ ಗಿಫ್ಟ್‌ ಕೊಟ್ಟ ಹಿಂದೂ ವ್ಯಕ್ತಿ!

Jammu Kashmir: ಜಮ್ಮು ಮತ್ತು ಕಾಶ್ಮೀರ ಪತ್ರಕರ್ತ ಅರ್ಫಾಜ್ ಅಹ್ಮದ್ ಡೇಯಿಂಗ್ ಅವರ ಮನೆಯನ್ನು ಅಧಿಕಾರಿಗಳು ಗುರುವಾರ ನೆಲಸಮ ಮಾಡಿದ ನಂತರ, ಜಮ್ಮುವಿನ ಹಿಂದೂ ನಿವಾಸಿ ಕುಲದೀಪ್ ಶರ್ಮಾ ಅವರು ಐದು ಮಾರ್ಲಾ ನಿವೇಶನವನ್ನು ಅವರಿಗೆ ಉಡುಗೊರೆಯಾಗಿ ನೀಡಿದ ಘಟನೆ ನಡೆದಿದೆ.

ಸಾಂಧರ್ಬಿಕ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu Kashmir) ಪತ್ರಕರ್ತ ಅರ್ಫಾಜ್ ಅಹ್ಮದ್ ಡೇಯಿಂಗ್ ಅವರ ಮನೆಯನ್ನು ಅಧಿಕಾರಿಗಳು ಗುರುವಾರ ನೆಲಸಮ ಮಾಡಿದ ನಂತರ, ಜಮ್ಮುವಿನ ಹಿಂದೂ ನಿವಾಸಿ ಕುಲದೀಪ್ ಶರ್ಮಾ ಅವರು ಐದು ಮಾರ್ಲಾ ನಿವೇಶನವನ್ನು ಅವರಿಗೆ ಉಡುಗೊರೆಯಾಗಿ (Viral News) ನೀಡಿದ ಘಟನೆ ನಡೆದಿದೆ. ಜಮ್ಮು ಮತ್ತು ಕಾಶ್ಮೀರ ಆಡಳಿತವು ಡೇಯಿಂಗ್ ಅವರ ಮನೆಯನ್ನು ಸರ್ಕಾರಿ ಭೂಮಿ ಒತ್ತುವರಿ ಮಾಡಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಅದನ್ನು ನೆಲಸಮ ಮಾಡಿದೆ. ಜಮ್ಮು ಅಭಿವೃದ್ಧಿ ಪ್ರಾಧಿಕಾರದ (ಜೆಡಿಎ) ಭೂಮಿಯಲ್ಲಿ ಅಕ್ರಮ ಕಟ್ಟಡ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರಿಂದ, ಪತ್ರಕರ್ತ ಅರಾಫಾಜ್ ಅಹ್ಮದ್ ಡೇಯಿಂಗ್ ಅವರ ಮನೆಯನ್ನು ದೊಡ್ಡ ಪೊಲೀಸರ ಸಮ್ಮುಖದಲ್ಲಿ ಕೆಡವಲಾಯಿತು.

ಈಗ ಕೆಡವಲಾಗಿರುವ ಮನೆಯನ್ನು 40 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು ಮತ್ತು ಅದು ಅವರ ತಂದೆಯ ಒಡೆತನದಲ್ಲಿತ್ತು ಎಂದು ಡೇಯಿಂಗ್ ಹೇಳಿದ್ದಾರೆ. ನೀಸ್ ಸೆಹರ್ ಇಂಡಿಯಾ ಎಂಬ ಡಿಜಿಟಲ್ ಸುದ್ದಿ ಪೋರ್ಟಲ್ ನಡೆಸುತ್ತಿರುವ ಡೇಯಿಂಗ್, ಇತ್ತೀಚೆಗೆ ಪ್ರಮುಖ ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಶಂಕಿತ ಡ್ರಗ್ಸ್ ಕಳ್ಳಸಾಗಣೆದಾರರೊಂದಿಗೆ ಪೊಲೀಸ್ ಅಧಿಕಾರಿಯ ನಂಟು ಹೊಂದಿದ್ದಾರೆ ಎಂದು ವರದಿ ಮಾಡಿದ್ದರು. ಹೀಗಾಗಿ ತಮ್ಮ ಮನೆ ಧ್ವಂಸ ಮಾಡಲಾಗಿದೆ ಎಂದು ಪತ್ರಕರ್ತ ಹೇಳಿದ್ದಾರೆ.

ಜಮ್ಮು ಕಾಶ್ಮೀರದ ವೈದ್ಯಕೀಯ ಕಾಲೇಜಿನ 50 ಸೀಟ್‌ಗಳ ಪೈಕಿ 42 ಮುಸ್ಲಿಂ ವಿದ್ಯಾರ್ಥಿಗಳು; ಬಿಜೆಪಿಯಿಂದ ವಿರೋಧ

ಮನೆ ಧ್ವಂಸದಿಂದ ಡೇಯಿಂಗ್ ಅವರ ವೃದ್ಧ ಪೋಷಕರು, ಅವರ ಪತ್ನಿ ಮತ್ತು ಅವರ ಮೂವರು ಮಕ್ಕಳು ನಿರಾಶ್ರಿತರಾಗಿದ್ದಾರೆ. ಧ್ವಂಸದ ಹೃದಯ ವಿದ್ರಾವಕ ದೃಶ್ಯಗಳಿಂದ ಮತ್ತು ಪತ್ರಕರ್ತನ ಕುಟುಂಬ ಹೆಚ್ಚಿನ ಸಮಯ ನೀಡುವಂತೆ ಅಧಿಕಾರಿಗಳಲ್ಲಿ ಬೇಡಿಕೊಂಡರೂ ಕೊಡದಿದ್ದಾಗ, ಹಿಂದೂ ನೆರೆಹೊರೆಯವರು ಆತನ ಕುಟುಂಬಕ್ಕೆ ಸಹಾಯ ಮಾಡಲು ಮುಂದೆ ಬಂದರು. ಅರ್ಫಾಜ್‌ಗೆ 5 ಮರ್ಲಾ ಭೂಮಿಯನ್ನು ಉಡುಗೊರೆಯಾಗಿ ನೀಡಿದ್ದೇನೆ.

ಅದಕ್ಕೆ ಸರಿಯಾದ ಕಂದಾಯ ದಾಖಲೆಗಳನ್ನು ನೀಡಿದ್ದೇನೆ. ಅದನ್ನು ನೋಂದಾಯಿಸಿದ್ದೇನೆ. ಇದು ನನ್ನ ಭೂಮಿ ಮತ್ತು ನನ್ನ ಸಹೋದರ ಪತ್ರಕರ್ತ ಅಸಹಾಯಕನಾಗಿ ಉಳಿಯಬಾರದು ಎಂದು ಅದನ್ನು ಉಡುಗೊರೆಯಾಗಿ ನೀಡುತ್ತಿದ್ದೇನೆ" ಎಂದು ಕುಲದೀಪ್ ಶರ್ಮಾ ಹೇಳಿದ್ದಾರೆ. ಮನೆ ಧ್ವಂಸದ ದುಃಖಕರ ದೃಶ್ಯಗಳನ್ನು ನೋಡಿದ ನಂತರ ಶರ್ಮಾ ತೀವ್ರವಾಗಿ ಭಾವುಕರಾದರು ಎಂದು ಅವರು ತಿಳಿಸಿದ್ದಾರೆ. ಅವರ ದುಃಸ್ಥಿತಿಯಿಂದ ನಾನು ನಡುಗಿ ಹೋದೆ ಮತ್ತು ಕುಟುಂಬಕ್ಕೆ ಸಹಾಯ ಮಾಡಲು ನಿರ್ಧರಿಸಿದೆ" ಎಂದು ಅವರು ಹೇಳಿದರು.