ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

20ರ ಯುವತಿಯಂತೆ ನೃತ್ಯ ಮಾಡಿದ ಪಾಪ್ ತಾರೆ; ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ 55ರ ಹರೆಯದ ಜೆನ್ನಿಫರ್

Jennifer Lopez: ಪಾಪ್ ತಾರೆ ಜೆನ್ನಿಫರ್ ಲೋಪೇಜ್ ಶನಿವಾರ ರಾತ್ರಿ ಸ್ಪೇನ್‌ನ ಟೆನೆರೈಫ್‌ನಲ್ಲಿ ನಡೆದ ಕುಕ್ ಮ್ಯೂಸಿಕ್ ಫೆಸ್ಟಿವಲ್‌ನಲ್ಲಿ ಅದ್ಧೂರಿ ಪ್ರದರ್ಶನ ನೀಡಿದ್ದಾರೆ. 55 ವರ್ಷವಾದರೂ 20ರ ಯುವತಿಯಂತೆ ಗಾಯನ, ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ.

20ರ ಯುವತಿಯಂತೆ ನೃತ್ಯ ಮಾಡಿದ ಪಾಪ್ ತಾರೆ ಜೆನ್ನಿಫರ್

Priyanka P Priyanka P Jul 21, 2025 5:54 PM

ಟೆನೆರೈಫ್‌: ಪಾಪ್ ತಾರೆ ಜೆನ್ನಿಫರ್ ಲೋಪೇಜ್ (Jennifer Lopez) ಅವರಿಗೆ ವೇದಿಕೆಯನ್ನು ಹೇಗೆ ನಿಯಂತ್ರಿಸಬೇಕೆಂದು ಚೆನ್ನಾಗಿ ತಿಳಿದಿದೆ. ಶನಿವಾರ ರಾತ್ರಿ ಸ್ಪೇನ್‌ನ ಟೆನೆರೈಫ್‌ನಲ್ಲಿ ನಡೆದ ಕುಕ್ ಮ್ಯೂಸಿಕ್ ಫೆಸ್ಟಿವಲ್‌ನಲ್ಲಿ ನೀಡಿದ ಅದ್ಧೂರಿ ಪ್ರದರ್ಶನದ ಸಮಯದಲ್ಲಿ ಅವರು ಅದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. 55 ವರ್ಷ ವಯಸ್ಸಿನ ಪಾಪ್ ತಾರೆ, ಗಾಯನ, ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಆನ್‌ಲೈನ್‌ನಲ್ಲಿ ಇದರ ವಿಡಿಯೊ ವೈರಲ್ ಆಗಿದ್ದು, ಜೆನ್ನಿಫರ್ ಪುರುಷ ನೃತ್ಯಗಾರರೊಂದಿಗೆ ಲೈಂಗಿಕತೆ ಸೂಚಿಸುವ ಚಲನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನೆರೆದವರನ್ನು ರೋಮಾಂಚನಗೊಳಿಸಿದ್ದಾರೆ. ಒಂದು ಹಂತದಲ್ಲಿ, ಅವರು ಒಬ್ಬ ನರ್ತಕನನ್ನು ಬಹುತೇಕ ಚುಂಬಿಸುವ ಹಂತಕ್ಸುಕೆ ಹೋಗಿದ್ದಾರೆ. ನಂತರ ಇನ್ನೊಬ್ಬನತ್ತ ಬಾಗಿದ್ದಾರೆ. ಈ ದೃಶ್ಯ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.

ವಿಡಿಯೊ ಇಲ್ಲಿದೆ:



ಇನ್ನು ಜೆನ್ನಿಫರ್ ಅಭಿನಯಕ್ಕೆ ಅಂತರ್ಜಾಲದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಅಭಿಮಾನಿಗಳು ಇದರಿಂದ ವಿಸ್ಮಯಗೊಂಡರೆ, ಇನ್ನು ಕೆಲವರು ಇದು ಅನುಚಿತ ಎಂದು ಹೇಳಿದರು. ಒಬ್ಬ ಅಭಿಮಾನಿ, ‘ʼಇದರಲ್ಲಿ ಏನು ಕೆಟ್ಟದಾಗಿದೆ? ಅವಳಿಗೆ 25ರ ಬದಲು 55 ವರ್ಷ? ಅವಳಿಗೆ 25 ವರ್ಷವಾಗಿದ್ದರೆ ಚೆನ್ನಾಗಿರುತ್ತಿತ್ತು? ಅವಳು ಅದ್ಭುತವಾಗಿ ಕಾಣುತ್ತಾಳೆ. ಇಲ್ಲಿ ಏನು ಸಮಸ್ಯೆ? ಇಷ್ಟವಿಲ್ಲವೇ? ಅದನ್ನು ನೋಡಬೇಡಿ’ʼ ಎಂದು ಬರೆದಿದ್ದಾರೆ.

ಮತ್ತೊಬ್ಬ ಅಭಿಮಾನಿ, ʼʼನಾನು ಇನ್ನೂ ಕೆಟ್ಟದ್ದನ್ನು ನೋಡಿದ್ದೇನೆ ಮತ್ತು ಅವಳು 55 ವರ್ಷ ವಯಸ್ಸಿನವಳು ಎಂದು ದೂರುವ ಪುರುಷರಿಗೆ; ನೀವು ಎಂದಿಗೂ ತೃಪ್ತರಾಗುವುದಿಲ್ಲ. ಆಕೆ ತುಂಬಾ ಚೆನ್ನಾಗಿ ಕಾಣುತ್ತಾಳೆʼ’ ಎಂದು ಬರೆದಿದ್ದಾರೆ.

ಜೆನ್ನಿಫರ್ ಅವರ ಇತ್ತೀಚಿನ ಪ್ರವಾಸಗಳು

ಜೆನ್ನಿಫರ್ ತನ್ನ ಪ್ರದರ್ಶನಗಳಿಂದ ಅತಿ ಹೆಚ್ಚು ಜನಪ್ರಿಯತೆ ಗಳಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅಮೆರಿಕನ್ ಮ್ಯೂಸಿಕ್ ಅವಾರ್ಡ್ಸ್ ಸಮಾರಂಭದಲ್ಲಿ ನೃತ್ಯ ಮಾಡಿ ಸುದ್ದಿಯಾಗಿದ್ದರು. ಪಾಪ್ ತಾರೆಗಳು ಬಹಿರಂಗವಾಗಿ ಲೈಂಗಿಕವಾಗಿ ತೊಡಗಿದಂತೆ ಅಭಿನಯಿಸುವ ಪ್ರವೃತ್ತಿ ಇತ್ತೀಚೆಗೆ ಜನಪ್ರಿಯತೆಯನ್ನು ಗಳಿಸುತ್ತಿದೆ. ಸಬ್ರಿನಾರಂತಹ ಕಲಾವಿದರು ಸಹ ಇದೇ ರೀತಿಯ ಚಲನೆಗಳಿಂದ ಗಮನ ಸೆಳೆಯುತ್ತಿದ್ದಾರೆ.

ವಿವಾದ ಅಥವಾ ಅಚ್ಚರಿಯ ಪ್ರದರ್ಶನಗಳ ಹೊರತಾಗಿಯೂ, ಜೆನ್ನಿಫರ್ ಅವರ ಆತ್ಮವಿಶ್ವಾಸ ಮತ್ತು ಅಭಿನಯ ಎರಡನ್ನೂ ಶ್ಲಾಘಿಸಿದ ಅಭಿಮಾನಿಗಳಿಂದ ಜೋರಾಗಿ ಹರ್ಷೋದ್ಗಾರಗಳು ಮತ್ತು ಪ್ರಶಂಸೆಗಳು ಬಂದವು. ವಯಸ್ಸು 55 ಆದರೂ 20ರ ಯುವತಿಯಂತೆ ಅವರು ಮಾಡಿದ ಪ್ರದರ್ಶನ ಅಭಿಮಾನಿಗಳನ್ನು ರಂಜಿಸಿದಂತೂ ಸುಳ್ಳಲ್ಲ.