ತಾತನ ಜತೆ ಟಿವಿಎಸ್‍ನಲ್ಲಿ ಹಲವು ಬಾರಿ ಪ್ರಯಾಣಿಸಿದ್ದೆ; ಇದೀಗ ಅವರನ್ನು ಸವಾರಿಗೆ ಕರೆದೊಯ್ಯುವ ಸರದಿ ನನ್ನದು ಎಂದ ಪೈಲಟ್
Viral Video: ಇಂಡಿಗೋ ವಿಮಾನಯಾನ ಸಂಸ್ಥೆಯ ಪೈಲಟ್ ಆಗಿರುವ ಪ್ರದೀಪ್ ಕೃಷ್ಣನ್, ಚೆನ್ನೈಗೆ ಹೋಗುವ ವಿಮಾನದಲ್ಲಿ ತಮ್ಮ ಕುಟುಂಬವನ್ನು ಸ್ವಾಗತಿಸುವ ಹೃದಯಸ್ಪರ್ಶಿ ಕ್ಷಣವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೊ ನೋಡಿ ಮೆಚ್ಚುಗೆ ವ್ಯಲ್ತಪಡಿಸಿದ್ದಾರೆ.


ಚೆನ್ನೈ: ಇತ್ತೀಚೆಗೆ ಚೆನ್ನೈನಿಂದ ಕೊಯಮತ್ತೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಹೃದಯಸ್ಪರ್ಶಿ ದೃಶ್ಯವೊಂದು ಕಂಡು ಬಂತು. ಆ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ, ತನ್ನ ತಾತ ಮತ್ತು ತಾಯಿ ಕೂಡ ಪ್ರಯಾಣ ಮಾಡುತ್ತಿದ್ದಾರೆ ಎಂದು ಪೈಲಟ್ ಘೋಷಿಸಿದ್ದಾರೆ. ಇದರ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.
ಇಂಡಿಗೋ ವಿಮಾನಯಾನ ಸಂಸ್ಥೆಯ ಪೈಲಟ್ ಆಗಿರುವ ಪ್ರದೀಪ್ ಕೃಷ್ಣನ್, ತಮ್ಮ ವಾಯುಯಾನ ಪ್ರಯಾಣದ ತುಣುಕುಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನಿಯಮಿತವಾಗಿ ಪೋಸ್ಟ್ ಮಾಡುತ್ತಾರೆ. ಅವರು ಚೆನ್ನೈಗೆ ಹೋಗುವ ವಿಮಾನದಲ್ಲಿ ತಮ್ಮ ಕುಟುಂಬವನ್ನು ಸ್ವಾಗತಿಸುವ ಹೃದಯಸ್ಪರ್ಶಿ ಕ್ಷಣವನ್ನು ಹಂಚಿಕೊಂಡಿದ್ದಾರೆ.
ಟೇಕ್ ಆಫ್ ಆಗುವ ಮೊದಲು ವಿಶೇಷ ಘೋಷಣೆ ಮಾಡಿ, ಕೃಷ್ಣನ್ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡಿದರು. ʼʼನನ್ನ ಕುಟುಂಬ ನನ್ನೊಂದಿಗೆ ಪ್ರಯಾಣಿಸುತ್ತಿದೆ ಎಂದು ಘೋಷಿಸಲು ತುಂಬಾ ಸಂತೋಷವಾಗುತ್ತಿದೆ. ನನ್ನ ತಾತ, ಅಜ್ಜಿ, ಅಮ್ಮ 29ನೇ ಸಾಲಿನಲ್ಲಿ ಕುಳಿತಿದ್ದಾರೆ. ನನ್ನ ಅಜ್ಜ ಇಂದು ಮೊದಲ ಬಾರಿಗೆ ನನ್ನೊಂದಿಗೆ ಹಾರುತ್ತಿದ್ದಾರೆ’ʼ ಎಂದು ಅವರು ಪ್ರಯಾಣಿಕರಿಗೆ ತಮಿಳು ಮತ್ತು ಇಂಗ್ಲಿಷ್ ಮಿಶ್ರ ಭಾಷೆಯಲ್ಲಿ ಹೇಳಿದರು.
ಈ ಸುದ್ದಿಯನ್ನೂ ಓದಿ: Viral Video: ವೃದ್ಧನ ಮೇಲೆ ಬೀಡಾಡಿ ಹಸುಗಳಿಂದ ಏಕಾಏಕಿ ದಾಳಿ- ವಿಡಿಯೊ ನೋಡಿದ್ರೆ ಶಾಕ್ ಆಗ್ತೀರಿ!
‘ʼನಾನು ಅವರ TVS 50 ದ್ವಿಚಕ್ರ ವಾಹನದ ಹಿಂದಿನ ಸೀಟಿನಲ್ಲಿ ಹಲವು ಬಾರಿ ಪ್ರಯಾಣಿಸಿದ್ದೇನೆ. ಈಗ ಅವರನನು ಕರೆದೊಯ್ಯುವ ಮಾಡುವ ಸರದಿ ನನ್ನದು’ʼ ಎಂದು ಹೃದಯಸ್ಪರ್ಶಿ ಕ್ಷಣವನ್ನು ಹಂಚಿಕೊಂಡರು. ಈ ವೇಳೆ ಪೈಲಟ್ ತಾಯಿ ಆನಂದಭಾಷ್ಪ ಸುರಿಸಿದ್ದಾರೆ. ಪೈಲಟ್ ಪ್ರಯಾಣಿಕರ ಬಳಿ ತನ್ನ ತಾತನಿಗೆ ಹಾಯ್ ಹೇಳುವಂತೆ ಸೂಚಿಸಿದ್ದಾರೆ. ಅವರ ತಾತ ತನ್ನ ಸೀಟಿನಿಂದ ಎದ್ದು ನಿಂತು ಕ್ಯಾಬಿನ್‌ನಲ್ಲಿದ್ದ ಎಲ್ಲರನ್ನೂ ಸ್ವಾಗತಿಸಲು ಕೈ ಜೋಡಿಸಿದರು. ಈ ಹೃದಯಸ್ಪರ್ಶಿ ಕ್ಷಣವನ್ನು ವೀಕ್ಷಿಸಿದ ಪ್ರಯಾಣಿಕರು ಚಪ್ಪಾಳೆ ತಟ್ಟಿದ್ದಾರೆ.
ಕುಟುಂಬ ಮತ್ತು ಸ್ನೇಹಿತರನ್ನು ವಿಮಾನ ಸವಾರಿ ಮಾಡಿಸುವುದು ಪ್ರತಿಯೊಬ್ಬ ಪೈಲಟ್‌ನ ಕನಸು ಎಂದು ಕೃಷ್ಣನ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಕರ್ಷಿಸಿದೆ. ಅವರು ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಡುತ್ತಾರೆ ಪ್ರದೀಪ್ ಎಂದು ತಮಿಳು ಟಿವಿ ಕಾರ್ಯಕ್ರಮದ ನಿರೂಪಕಿ ಅನಿತಾ ಸಂಪತ್ ಪ್ರತಿಕ್ರಿಯಿಸಿದ್ದಾರೆ. ಬಹಳ ದಿನಗಳ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ನೋಡಿದ ಅತ್ಯುತ್ತಮ ವಿಷಯ ಇದು ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
ಪ್ರದೀಪ್ ಕೃಷ್ಣನ್ 2018ರಲ್ಲಿ ಮೊದಲ ಬಾರಿಗೆ ತಮ್ಮ ತಾಯಿ ಮತ್ತು ಅಜ್ಜಿಯನ್ನು ಕರೆದೊಯ್ದರು. ಅದರ ವಿಡಿಯೊ ಕೂಡ ವೈರಲ್ ಆಗಿತ್ತು. ವಿಮಾನ ಹಾರಾಟ ನಡೆಸುವ ಮೊದಲು, ಪೈಲಟ್ ವಿಮಾನದಲ್ಲಿ ಕುಳಿತಿದ್ದ ತನ್ನ ತಾತ, ತಾಯಿ ಮತ್ತು ಅಜ್ಜಿಯ ಬಳಿಗೆ ಹೋಗಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದಿದ್ದರು.