ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜೆಪ್ಟೊ ಸಿಬ್ಬಂದಿಯಿಂದ ಕಿರುಕುಳ: ಒಬ್ಬಂಟಿ ಮಹಿಳೆ ಕಂಡು ಮನೆಯೊಳಗೆ ನುಗ್ಗಲು ಪ್ರಯತ್ನಿಸಿದ ಡೆಲಿವರಿ ಬಾಯ್

Viral Video: ಆರ್ಡರ್ ತಲುಪಿಸಲು ಬಂದ ಜೆಪ್ಟೊ ಸಂಸ್ಥೆಯ ಡೆಲಿವರಿ ಏಜೆಂಟ್ ಮಹಿಳೆಯೊಬ್ಬರು ಒಬ್ಬಂಟಿ ಇರುವಾಗ ಒಳಗೆ ಬರಲು ಪಟ್ಟು ಹಿಡಿದಿದ್ದಾನೆ. ವೀಡಿಯೊ ಶೇರ್ ಮಾಡಿದ ಮಹಿಳೆ ಜೆಪ್ಟೋ ಏಜೆಂಟ್ ಕುಡಿಯಲು ನೀರು ಕೇಳಿದ ನಂತರ ಪದೇ ಪದೇ ತನ್ನ ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಮಹಿಳೆಗೆ ಕಿರುಕುಳ ನೀಡಿದ ಜೆಪ್ಟೊ ಡೆಲಿವರಿ ಬಾಯ್

ನವದೆಹಲಿ,ಜು.31: ಇತ್ತೀಚೆಗೆ ಡೆಲಿವರಿ ಸಿಬ್ಬಂದಿಗಳು ಮಹಿಳೆಯರ ಜೊತೆ ಅಸಭ್ಯ ವರ್ತನೆ ತೋರುವ ಅನೇಕ ಘಟನೆಗಳು ನಡೆಯುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಆರ್ಡರ್ ತಲುಪಿಸಲು ಬಂದ ಜೆಪ್ಟೊ ಸಂಸ್ಥೆಯ ಡೆಲಿವರಿ ಏಜೆಂಟ್ ಒಬ್ಬರು ಮಹಿಳೆಯೊಬ್ಬರು ಒಬ್ಬಂಟಿ ಇರುವಾಗ ಒಳಗೆ ಬರಲು ಪಟ್ಟು ಹಿಡಿದಿದ್ದಾನೆ. ವೀಡಿಯೊ ಶೇರ್ (Viral News) ಮಾಡಿದ ಮಹಿಳೆ ಜೆಪ್ಟೋ ಏಜೆಂಟ್ ಕುಡಿಯಲು ನೀರು ಕೇಳಿದ ನಂತರ ಪದೇ ಪದೇ ತನ್ನ ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್ ಜೆಪ್ಟೋಗೆ ಸಂಬಂಧಿಸಿದ ಡೆಲಿವರಿ ಬಾಯ್ ಒಬ್ಬ ತನಗೆ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ವಿವರಿಸಿದ್ದಾರೆ. ಡೆಲಿವರಿ ಏಜೆಂಟ್ ವಸ್ತುಗಳನ್ನು ನೀಡಿದ ಬಳಿಕ ಕುಡಿಯಲು ನೀರು ಕೇಳಿದ್ದಾನೆ. ತಾನು ನೀರಿನ ಬಾಟಲಿಯನ್ನು ನೀಡಿ, ಅದನ್ನು ಜೊತೆಯಲ್ಲೇ ಅವರಿಗೆ ಕೊಂಡೊಯ್ಯುವಂತೆ ಹೇಳಿದೆ. ಆದರೆ ಆತ ಇದನ್ನು ಕೇಳದೆ ಇನ್ನೂ ನೀರು ಬೇಕು ಎಂದು ಪಟ್ಟು ಹಿಡಿದು ಒಳಗೆ ಬರಲು ಪ್ರಯತ್ನಿಸಿದ್ದಾನೆ.

ಹೊರಗಡೆ ಕೂರುವಂತೆ ಹೇಳಿದರೂ ಕೇಳದ ಆತ, ಮನೆ ಒಳಗೆ ಬರಲು ಮುಂದಾಗಿದ್ದಾನೆ. ಇದ ರಿಂದ ಭಯಗೊಂಡ ಮಹಿಳೆ ಗೇಟ್ ಹಾಕಿ ಮುಖ್ಯ ಬಾಗಿಲು ಮುಚ್ಚಲು ಮುಂದಾಗಿದ್ದಾರೆ. ಆಗ ಬಾಗಿಲಿನ ಡೋರ್ ಬಡಿದು ಪದೇ ಪದೇ ಕಿರುಕುಳ‌ ನೀಡಿದ್ದಾನೆ ಎಂದು ಅಳಲು ತೋಡಿಕೊಂಡಿ ದ್ದಾಳೆ. ವೀಡಿಯೊದಲ್ಲಿ, ಮಹಿಳೆ ಈ ವಿಷಯವನ್ನು ಪರಿಶೀಲಿಸುವಂತೆ ಜೆಪ್ಟೋ ಅವರನ್ನು ಒತ್ತಾಯಿಸಿದ್ದು ಮತ್ತು ಕಂಪನಿಯ ಕುಂದುಕೊರತೆ ಪರಿಹಾರ ವ್ಯವಸ್ಥೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

Viral Video: ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 1 ಲಕ್ಷ ರುಪಾಯಿ ಖರ್ಚು ಮಾಡಿ ಆಸ್ಟ್ರೇಲಿಯಾದಿಂದ ಬಂದ ಬಿ.ಟೆಕ್ ಪದವೀಧರ!

ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಾ ಜೆಪ್ಟೋ ಈ ವಿಷಯವನ್ನು ತನಿಖೆ ಮಾಡಲು ಬಯಸುತ್ತೇವೆ. ದಯವಿಟ್ಟು ನಿಮ್ಮ ಆರ್ಡರ್ ವಿವರಗಳು ಮತ್ತು ಸಂಪರ್ಕ ಸಂಖ್ಯೆಯನ್ನು ನೇರ ಸಂದೇಶದ ಮೂಲಕ ಹಂಚಿಕೊಳ್ಳಿ ಎಂದಿದೆ. ಈ ವೀಡಿಯೊ ಭಾರೀ ವೈರಲ್ ಆಗಿದ್ದು ಗ್ರಾಹಕರ ಸುರಕ್ಷತೆಯ ಬಗ್ಗೆ ಕಳವಳವನ್ನುಂಟುಮಾಡಿದೆ. ಹಲವಾರು ಬಳಕೆದಾರರು ಸಂಪೂರ್ಣ ತನಿಖೆಗೆ ಕರೆ ನೀಡಿದರೆ, ಇಂತಹ ಘಟನೆಗಳು ಮರುಕಳಿಸದಂತೆ ವಿತರಣಾ ಸಂಸ್ಥೆಗಳು ಡೆಲಿವರಿ ಪಾರ್ಟ್‌ನರ್‌ಗಳ ಹಿನ್ನೆಲೆಯನ್ನು ಪರಿಶೀಲನೆ ನಡೆಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.