ನವದೆಹಲಿ,ಏ. 23: ಇತ್ತೀಚಿನ ದಿನದಲ್ಲಿ ಕ್ಯಾಬ್ ಚಾಲಕರು ಹಾಗೂ ಪ್ರಯಾಣಿಕರ ನಡುವೆ ಜಗಳ ಹೆಚ್ಚಾಗುತ್ತಿವೆ. ದುಪ್ಪಟ್ಟು ಹಣ ವಸೂಲಿ, ಸೂಚಿಸಿದ ಸ್ಥಳಕ್ಕೆ ತಲುಪಿಸದೇ ಇರುವುದು ಹೀಗೆ ನಾನಾ ಕಾರಣಕ್ಕೆ ವಾಗ್ವಾದಗಳು ಉಂಟಾಗುತ್ತವೆ. ಇದೀಗ ಮಹಿಳಾ ಪ್ರಯಾಣಿಕ ಹಾಗೂ ಕ್ಯಾಬ್ ಚಾಲಕನ ನಡುವೆ ಜಗಳ ಉಂಟಾಗಿದ್ದು ಈ ವಿಡಿಯೊ ಭಾರೀ ವೈರಲ್ (Viral News) ಆಗುತ್ತಿದೆ. ದೆಹಲಿ (Delhi) ಯಲ್ಲಿ ಈ ಘಟನೆ ನಡೆದಿದ್ದು 200 ರೂಪಾಯಿ ಬಾಡಿಗೆ ವಿವಾದ ತಾರಕಕ್ಕೆ ಹೋಗಿದೆ. ತಾನು ಪತ್ರಕರ್ತೆ ಎಂದು ಹೇಳಿಕೊಂಡಿರುವ ಮಹಿಳೆ ಹಣ ನೀಡಲು ನಿರಾಕರಿಸಿದ್ದಾಳೆ.
ಮಹಿಳೆಯೊಬ್ಬರು 200 ರೂಪಾಯಿ ಕ್ಯಾಬ್ ದರ ಪಾವತಿಸಲು ನಿರಾಕರಿಸಿದ್ದಾಳೆ. ಆಕೆ ತಾನು ಪತ್ರಕರ್ತೆ ಎಂದು ಹೇಳಿಕೊಂಡಿದ್ದು ಚಾಲಕನೊಂದಿಗೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಘಟನೆಯನ್ನು ತನ್ನ ಫೋನ್‌ನಲ್ಲಿ ಚಿತ್ರೀಕರಿಸಿದ ಚಾಲಕ, ವಾದದ ಸಮಯದಲ್ಲಿ ಅವಳನ್ನು ಎದುರಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೊ ನೋಡಿದ ಅನೇಕರು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.
ವಿಡಿಯೋ ನೋಡಿ:
ಬಾಡಿಗೆ ವಿಚಾರವಾಗಿ ಮಹಿಳೆ ಮತ್ತು ಚಾಲಕನ ನಡುವೆ ಮಾತಿನ ಚಕಮಕಿ ನಡೆದಿದೆ. ಹಣ ಪಾವತಿ ಮಾಡುವ ಬದಲು ಯುವತಿ ತಾನು ಪತ್ರಕರ್ತೆ ಎಂದು ಹೇಳಿಕೊಂಡಿದ್ದಾಳೆ. ಶುಲ್ಕ ಪಾವತಿಸುವುದನ್ನು ತಪ್ಪಿಸಲು ನೀವು ಪತ್ರಕರ್ತೆ ಎಂದು ಹೇಳುವ ಮೂಲಕ ನನ್ನನ್ನು ಬೆದರಿಸಬೇಡಿ ಎಂದು ಚಾಲಕ ಈ ಸಂದರ್ಭದಲ್ಲಿ ಹೇಳಿದ್ದಾನೆ. ಅದಕ್ಕೆ ಮಹಿಳೆ ಪೊಲೀಸ್ ಠಾಣೆಯಲ್ಲೇ ಈ ಬಗ್ಗೆ ಮಾತನಾಡೋಣ ಎಂದು ದಮ್ಕಿ ಹಾಕಿದ್ದಾಳೆ.
Viral Video: ಶೂಟಿಂಗ್ ವೇಳೆ ಗೋಡೆ ಏರಿದ ಅಕ್ಷಯ ಕುಮಾರ್; ಮೈ ಝುಂ ಎನ್ನುವ ಸಾಹಸ ದೃಶ್ಯ ವೈರಲ್
@Gharkekalesh ಎಂಬ ಬಳಕೆದಾರರು ಈ ಕ್ಲಿಪ್, ಶೇರ್ ಮಾಡಿದ್ದಾರೆ. ವಿಡಿಯೋದ ಕೊನೆಯಲ್ಲಿ, ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವಂತೆ ಕಾಣುತ್ತಿದೆ, ಮಹಿಳೆ ಚಾಲಕನ ಫೋನ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಾಳೆ, ಆದರೂ ಚಾಲಕ ವಿಡಿಯೊ ಮುಂದುವರಿಸುತ್ತಾನೆ. ವೈರಲ್ ಕ್ಲಿಪ್ ಬಳಕೆದಾರರಿಂದ ಅನೇಕ ಪ್ರತಿಕ್ರಿಯೆ ಬಂದಿವೆ. ಅವರಲ್ಲಿ ಹಲವರು ಚಾಲಕನ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಾ ಮಹಿಳೆಯ ನಡವಳಿಕೆಯನ್ನು ಟೀಕೆ ಮಾಡಿದ್ದಾರೆ.
ನೆಟ್ಟಿಗರೊಬ್ಬರು ಸಹೋದರಿ, ''ನೀವು ರಾಷ್ಟ್ರಪತಿ ಅಥವಾ ಪ್ರಧಾನ ಮಂತ್ರಿಯಲ್ಲ ಪತ್ರಕರ್ತೆ" ಎಂದು ಬರೆದಿದ್ದಾರೆ. ಮತ್ತೊಬ್ಬರು ಇಂತಹ ಅಹಂಕಾರ ಹಣದ ವ್ಯವಹಾರದಲ್ಲಿ ತೋರಿಸುವುದು ತಪ್ಪು ಎಂದು ಕಿಡಿಕಾರಿದ್ದಾರೆ.