ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಂಪು ಪಾನೀಯದ ಟ್ರಕ್ ಪಲ್ಟಿ: ಗಾಯಗೊಂಡ ಚಾಲಕನನ್ನು ನಿರ್ಲಕ್ಷಿಸಿ ವಸ್ತುಗಳನ್ನು ದೋಚಲು ಮುಂದಾದ ಜನ

Viral Video: ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ತಂಪು ಪಾನೀಯದ ಟ್ರಕ್ ವೊಂದು ಅಪಘಾತವಾಗಿದ್ದು ಜ್ಯೂಸ್ ಬಾಟಲಿಯನ್ನು ಕೊಂಡೊಯ್ಯಲು ಜನ ಮುಗಿಬಿದ್ದಿದ್ದಾರೆ. ಚಾಲಕ ಹಾಗೂ ಕ್ಲೀನರ್ ಗೆ ತೀವ್ರ ಗಾಯಗಳಾಗಿದ್ದು ಜನ ಇವರನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಬಾಟಲಿಗಳನ್ನು ಎತ್ತಿಕೊಳ್ಳಲು ಮುಗಿಬಿದ್ದಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜನರ ಮನಸ್ಥಿತಿ ಬಗ್ಗೆ ಕಿಡಿಕಾರಿದ್ದಾರೆ.

ತಂಪು ಪಾನೀಯದ ಟ್ರಕ್ ಪಲ್ಟಿ

ನೆಲ್ಲೂರು, ಮಾ.22: ಇಂದು ಮಾನವೀಯತೆ ಅನ್ನೋದು ಮರೆಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ತಂಪು ಪಾನೀಯದ ಟ್ರಕ್ ವೊಂದು ಅಪಘಾತವಾಗಿದ್ದು ಜ್ಯೂಸ್ ಬಾಟಲಿಯನ್ನುಕೊಂಡೊಯ್ಯಲು ಜನ ಮುಗಿಬಿದ್ದಿದ್ದಾರೆ. ಚಾಲಕ ಹಾಗೂ ಕ್ಲೀನರ್ ಗೆ ತೀವ್ರ ಗಾಯಗಳಾಗಿದ್ದು ಜನ ಇವರನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಬಾಟಲಿಗಳನ್ನು ಎತ್ತಿ ಕೊಳ್ಳಲು ಮುಗಿಬಿದ್ದಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು ಜನರ ಮನಸ್ಥಿತಿ ಬಗ್ಗೆ ಕಿಡಿಕಾರಿದ್ದಾರೆ.

ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಈ ಘಟನೆ ನಡೆದಿದೆ. ಟ್ರಕ್ ತಂಪು ಪಾನೀಯಗಳ ಬಾಟಲಿಗಳಿಂದ ತುಂಬಿತ್ತು. ಚಾಲಕನ ನಿಯಂತ್ರಣ ತಪ್ಪಿ ವಾಹನ ಉರುಳಿ ಬಿದ್ದಿದೆ. ಜನರು ಬಾಟಲಿಗಳನ್ನು ಕೊಂಡೊಯ್ಯಲು ಧಾವಿಸುತ್ತಿರುವುದನ್ನು, ಕೆಲವರು ಸಾಧ್ಯವಾದಷ್ಟು ತಂಪು ಪಾನೀಯಗಳನ್ನು ಸಂಗ್ರಹಿಸಲು ಓಡುತ್ತಿರುವುದನ್ನು ಕಾಣಬಹುದು.

ವಿಡಿಯೋ ನೋಡಿ:



ಲಾರಿ ಪಲ್ಟಿಯಾದಾಗ ಚಾಲಕ ಮತ್ತು ಕ್ಲೀನರ್ ಗೆ ಗಾಯ ವಾಗಿದ್ದು ಈ ಸ್ಥಿತಿಯಲ್ಲಿದ್ದರೂ ಬಾಟಲಿಯನ್ನು ಕೊಂಡ್ಯೊಯಬೇಡಿ ಎಂದು ಕೇಳಿಕೊಂಡರೂ ಜನ ಸಹಾಯಕ್ಕೆ ಬರದೇ ಬಾಚಿಕೊಳ್ಳಲು ಮುಂದಾಗಿದ್ದಾರೆ. ಗಾಯಾಳುಗಳನ್ನು ನಿರ್ಲಕ್ಷ ಮಾಡಿದ ಜನರು ಬ್ಯಾಗ್ ಮತ್ತು ಚೀಲಗಳಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ.

Viral News: ಪ್ಲಂಬರ್ ಕೆಲಸ ಮಾಡುವ ವ್ಯಕ್ತಿಯ ವಾರ್ಷಿಕ ಆದಾಯ ಗೊತ್ತಾ? ಐಟಿ ಉದ್ಯೋಗಕ್ಕಿಂತ ಇದೆ ಬೆಸ್ಟ್‌ ಎಂದ ನೆಟ್ಟಿಗರು

ಲಾರಿ ಚಾಲಕ ಮತ್ತು ಕ್ಲೀನರ್ ಹತಾಶವಾಗಿ ಬೇಡಿಕೊಂಡರೂ,ಜನ ಅದನ್ನು ಗಮನಿಸಲಿಲ್ಲ, ಬಳಿಕ ಇಬ್ಬರು ವ್ಯಕ್ತಿಗಳು ಸಂಪೂರ್ಣ ವಾಗಿ ಅಸಹಾಯಕರಾಗಿದ್ದು ಅಪಘಾತ ಸ್ಥಳದಲ್ಲಿ, ಜನರು ಬಾಟಲಿಗಳಿಗಾಗಿ ಪರಸ್ಪರ ತಳ್ಳಾಡುತ್ತಾಇದ್ದರು. ಪೊಲೀಸರು ಸ್ಥಳಕ್ಕೆ ಬಂದು ಗುಂಪನ್ನು ಚದುರಿಸಿದ ನಂತರವೇ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ಘಟನಾ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಲೂಟಿ ಮಾಡಿ ಎಂದು ಕೂಗುತ್ತಾ ವಿಡಿಯೋ ಮಾಡಿದ್ದಾರೆ. ಅನೇಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು ನಾಗರಿಕ ಪ್ರಜ್ಞೆಯನ್ನು ಪ್ರಶ್ನಿಸಿದ್ದಾರೆ. ಬಳಕೆದಾರರೊಬ್ಬರು ಜನರ ಮನಸ್ಥಿತಿ ಬಗ್ಗೆ ಬೇಸರವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.