ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kerala IAS Aspirant: ವೆಂಟಿಲೇಟರ್‌ ಜೊತೆಗೆ UPSC ಪರೀಕ್ಷೆ ಬರೆದ ಯುವತಿ; ಈಕೆ ಸ್ಥಿತಿ ನೋಡಿದ್ರೆ ಕಣ್ಣೀರು ಬರುತ್ತೆ!

ಸಾವಿರಾರು ಮೂಳೆ ಮುರಿದಿದೆ. ಆಮ್ಲಜನಕದ ಸಹಾಯವಿಲ್ಲದೆ ಓಡಾಡಲು ಸಾಧ್ಯವಿಲ್ಲ. ಹೀಗಿದ್ದರೂ ಕೇರಳದ ಲತೀಶ್ ಐಎಎಸ್ ಅಧಿಕಾರಿಯಾಗುವ ಕನಸಿನೊಂದಿಗೆ ಯುಪಿಎಸ್ ಸಿ ಪರೀಕ್ಷೆ ಬರೆದಿದ್ದರು. ಈ ಮೂಲಕ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಇವರ ಸ್ಫೂರ್ತಿದಾಯಕ ಜೀವನದ ಕಥೆ ಇಲ್ಲಿದೆ.

ಕೊಚ್ಚಿ: ಹೋರಾಟವನ್ನೇ ಬದುಕಾಗಿಸಿಕೊಂಡವರಿಗೆ ಯಾವುದು ಕೂಡ ಕಷ್ಟವಲ್ಲ ಎಂಬುದನ್ನು ಕೇರಳದ (Kerala) ಲತೀಶ್ (Latheesh) ತೋರಿಸಿಕೊಟ್ಟಿದ್ದಾರೆ. ಸಾವಿರಾರು ಮೂಳೆ ಮುರಿತಗೊಂಡಿದ್ದರೂ ಆಮ್ಲಜನಕದ ಬೆಂಬಲವಿಲ್ಲದೆ ಅತ್ತಿಂದಿತ್ತ ಹೋಗಲು ಸಾಧ್ಯವಾಗದ ಸ್ಥಿತಿ ಇದ್ದರೂ ಕೂಡ ಇವರು ಐಎಎಸ್ ಅಧಿಕಾರಿಯಾಗುವ (Kerala IAS Aspirant) ಕನಸಿನೊಂದಿಗೆ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (Union Public Service Commission) ಪರೀಕ್ಷೆ ಬರೆದಿದ್ದಾರೆ. ಅಪರೂಪದ ಕಾಯಿಲೆಯೊಂದಿಗೆ ಹೋರಾಡುತ್ತಿದ್ದರೂ ಇದಕ್ಕಾಗಿ ತಮ್ಮ ಕನಸನ್ನು ಬಿಟ್ಟುಕೊಡದ ಇವರು ಅನೇಕರಿಗೆ ಮಾದರಿಯಾಗಿದ್ದಾರೆ. ಕನಸು ನನಸಾಗುವ ಹಾದಿಯಲ್ಲಿ ಕಷ್ಟಗಳು ಇರುತ್ತವೆ. ಆದರೆ ಅದನ್ನು ಮೆಟ್ಟಿ ನಿಂತರೆ ಯಾವುದು ಕೂಡ ಕಷ್ಟವಲ್ಲ ಎನ್ನುತ್ತಾರೆ ಲತೀಶ್.

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅನೇಕ ವಿದ್ಯಾರ್ಥಿಗಳು ತಮ್ಮದೇ ಆದ ಅನೇಕ ಸ್ಫೂರ್ತಿದಾಯಕ ಕಥೆಗಳನ್ನು ಹೊಂದಿದ್ದಾರೆ. ಇದರಲ್ಲಿ ಕೇರಳದ ಲತೀಶ್ ಅನ್ಸಾರಿ ಕೂಡ ಒಬ್ಬರು. ಆಮ್ಲಜನಕ ಸಿಲಿಂಡರ್‌ನೊಂದಿಗೆ ಬಂದು ಪರೀಕ್ಷೆ ಹಾಲ್ ನಲ್ಲಿ ಕುಳಿತು ಇವರು ಯುಪಿಎಸ್ ಸಿ ಪರೀಕ್ಷೆ ಬರೆದಿದ್ದಾರೆ. ಇದರ ಹಿಂದೆ ಅತ್ಯಂತ ದುಃಖದಾಯಕವಾದ ಕಥೆ ಇದೆ.

ದೇಹದ ಬೆಳವಣಿಗೆ ನಿಲ್ಲುವ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಇವರು, ಜನಿಸುವಾಗಲೇ ಅಪರೂಪದ ಮೂಳೆ ಕಾಯಿಲೆ ಮತ್ತು ಶ್ವಾಸಕೋಶದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಆದರೂ ಐಎಎಸ್ ಅಧಿಕಾರಿಯಾಗುವ ಕನಸು ಕಂಡರು ಮತ್ತು ಆ ಕನಸನ್ನು ನನಸಾಗಿಸುವ ಹಾದಿಯಲ್ಲಿ ಸಾಗುತ್ತಿದ್ದಾರೆ.

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗಳನ್ನು ತಂದೆಯೇ ಸಾಕಿದ್ದಾರೆ. ಅವಳನ್ನು ಶಾಲೆ ಮತ್ತು ಕಾಲೇಜಿಗೆ ಕರೆದುಕೊಂಡು ಹೋಗಿ ಬರುತ್ತಾರೆ. 2019ರಲ್ಲಿ ಮೊದಲ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆಯಲು ಹೋದ ಲತೀಶ್ ತನ್ನ ಕುಟುಂಬದೊಂದಿಗೆ ಆಮ್ಲಜನಕ ಸಿಲಿಂಡರ್‌ ಕೂಡ ತೆಗೆದುಕೊಂಡು ಹೋಗಿದ್ದರು. ಪಕ್ಕದಲ್ಲೇ ಆಮ್ಲಜನಕ ಸಿಲಿಂಡರ್ ಇಟ್ಟುಕೊಂಡು ಪರೀಕ್ಷೆ ಬರೆದರು.

ಇದನ್ನೂ ಓದಿ: ಹಾಂಗ್‌ಕಾಂಗ್ ಓಪನ್ ಬ್ಯಾಡ್ಮಿಂಟನ್: ಸೆಮಿ ಪ್ರವೇಶಿಸಿದ ಸಾತ್ವಿಕ್–ಚಿರಾಗ್ ಜೋಡಿ

ಪರೀಕ್ಷೆ ಬರೆದು ಮುಗಿಸಿದ ಬಳಿಕ ನೇರವಾಗಿ ಆಸ್ಪತ್ರೆಗೆ ದಾಖಲಾದ ಲತೀಶ್, ತಂದೆಯೊಂದಿಗೆ ಮಾತನಾಡಿ, ನಾನು ಎಂದಿಗೂ ನಿಲ್ಲಲು ಸಾಧ್ಯವಾಗಲಿಲ್ಲ. ದಯವಿಟ್ಟು, ನನಗೆ ಎದ್ದು ನಿಲ್ಲಲು ಸಹಾಯ ಮಾಡಿ ಎಂದಷ್ಟೇ ಕೇಳಿದರು.

ಇದನ್ನು ನೋಡಿ ತಂದೆ ಆಕೆಯನ್ನು ಹಿಡಿದು ಸತತ ಎರಡು ಗಂಟೆಗಳ ಕಾಲ ನಿರಂತರವಾಗಿ ನಿಲ್ಲಲು ಸಹಾಯ ಮಾಡಿದರು. ಇದು ಅವರ ಜೀವನದ ಬಹುದೊಡ್ಡ ಜಯವಾಗಿತ್ತು. ಇಷ್ಟು ಹೋರಾಟ ಮಾಡಿದ ಲತೀಶ್ 2021ರ ಜೂನ್ 16ರಂದು 27 ನೇ ವಯಸ್ಸಿನಲ್ಲಿ ಲತೀಶ್ ನಿಧನರಾದರು.

ವಿದ್ಯಾ ಇರ್ವತ್ತೂರು

View all posts by this author