ನವದೆಹಲಿ, ಮೇ 3: ಇತ್ತೀಚೆಗೆ ದೇಶಾದ್ಯಂತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ರಾಜಸ್ಥಾನದ ಕೋಟಾ ಪ್ರಮುಖ ಶಿಕ್ಷಣ ಕೇಂದ್ರವಾಗಿ ಹೆಸರು ಮಾಡಿದ್ದರೂ ಇಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿ ನಡೆಯುತ್ತಿದೆ. ಇದನ್ನು ತಡೆಯುವುದಕ್ಕಾಗಿ ಕೋಟಾ ಹಾಸ್ಟೆಲ್‌ಗಳು ಸೀಲಿಂಗ್ ಫ್ಯಾನ್‌ಗಳ ಸುತ್ತಲೂ ಕಬ್ಬಿಣದ ಪಂಜರ ಅಳವಡಿಸಲಾಗುತ್ತಿದೆ. ಕೋಟಾ ಹಾಸ್ಟೆಲ್‌ಗಳಿಂದ ರೆಕಾರ್ಡ್ ಆಗಿರುವ ದೃಶ್ಯ ಆನ್‌ಲೈನ್‌ನಲ್ಲಿ ವೈರಲ್ (Viral News) ಆಗಿದ್ದು ಚರ್ಚೆಗೆ ಕಾರಣವಾಗಿದೆ.
IIT-JEE ಮತ್ತು NEETನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾವಿರಾರು ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಹೆಸರುವಾಸಿಯಾದ ಕೋಟಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಜಾಸ್ತಿಯಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಅಧಿಕಾರಿಗಳು ಮತ್ತು ಹಾಸ್ಟೆಲ್ ನಿರ್ವಾಹಕರು ತಡೆಗಟ್ಟುವ ಕ್ರಮಗಳನ್ನು ಜಾರಿಗೆ ತರುತ್ತಿದ್ದಾರೆ.
ಹಾಸ್ಟೆಲ್ ಫ್ಯಾನ್‌ಗೆ ಕಬ್ಬಿಣ ಸರಳು ಅಳವಡಿಕೆ:
ಆತ್ಮಹತ್ಯೆ ತಡೆಯಲು ಸೀಲಿಂಗ್ ಫ್ಯಾನ್‌ಗಳಿಗೆ ಕಬ್ಬಿಣದ ಪಂಜರ ಅಳವಡಿಸಲಾಗುತ್ತಿದೆ. ಹಾಸ್ಟೆಲ್ ಕೋಣೆಯ ಫ್ಯಾನ್‌ಗಳಿಗೆ ಕಬ್ಬಿಣದ ಗ್ರಿಲ್ ಮೂಲಕ ಮುಚ್ಚಲಾಗಿದೆ. ವೈರಲ್ ಆದ ದೃಶ್ಯದಲ್ಲಿ ವಿದ್ಯಾರ್ಥಿ ಹಾಸ್ಟೆಲ್‌ಗಳಲ್ಲಿ ಸೀಲಿಂಗ್ ಫ್ಯಾನ್‌ಗಳು ಕಬ್ಬಿಣದ ಗ್ರಿಲ್‌ಗಳೊಳಗೆ ಲಾಕ್ ಆಗಿರುವುದನ್ನು ತೋರಿಸುತ್ತದೆ. ಈ ಬಗ್ಗೆ ಕೆಲವರು ಟೀಕಿಸಿದ್ದು, ವಿದ್ಯಾರ್ಥಿಗಳ ಮನಸ್ಥಿತಿಯನ್ನು ಬದಲಾಯಿಸಬೇಕೇ? ಹೊರತು ಇಂತಹ ಕೆಲಸಗಳು ಅನವಶ್ಯಕ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮದುವೆಗೆ ಕುಂಕುಮ ತರಲು ಮರೆತ ವರ; ಆಮೇಲಾಗಿದ್ದೇನು?
ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ಯೋಚಿಸಿ ಒತ್ತಡವನ್ನು ಕಡಿಮೆ ಮಾಡಬೇಕೆ? ವಿನಾಃ ಇಂತಹ ಕೆಲಸಗಳು ವ್ಯರ್ಥ ವಿದ್ಯಾರ್ಥಿಗಳು ಇತರ ಕೆಲವು ಮಾರ್ಗಗಳ ಬಗ್ಗೆ ಯೋಚಿಸಬಹುದು ಎಂದು ಕೆಲವರು ಹೇಳಿದ್ದಾರೆ. ಐಐಟಿ-ಜೆಇಇ ಮತ್ತು ನೀಟ್ ಪರೀಕ್ಷೆಗಳ ಅತಿಯಾದ ಒತ್ತಡದಿಂದಾಗಿ ಕೋಟಾದಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ದೂರು ಹಲವು ವರ್ಷಗಳಿಂದ ಇದೆ. ಇದೀಗ ಸ್ಥಳೀಯ ಆಡಳಿತವು ವಿದ್ಯಾರ್ಥಿಗಳ ಮಾನಸಿಕ ಅಭಿವೃದ್ಧಿಗಾಗಿ ಕೌನ್ಸೆಲಿಂಗ್ ಮತ್ತು ಪೋಷಕರೊಂದಿಗೆ ಸಂಪರ್ಕದಲ್ಲಿ ಇರಲು ಹಾಸ್ಟೆಲ್‌ಗಳಿಗೆ ಸೂಚಿಸಿದೆ ಎಂದು ತಿಳಿಸಿದೆ.