ಕೇರಳ,ಸೆ.6: ಯಾವುದೇ ಸಂಸ್ಥೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಕೆಲಸ ಬಿಡುವುದು ಕಷ್ಟದ ಕೆಲಸ. ಇಲ್ಲೊಬ್ಬ ಸರಕಾರಿ ಸಾರಿಗೆ ಸಂಸ್ಥೆಯ ಚಾಲಕ 18 ವರ್ಷದ ಸೇವೆಯ ನಂತರ ಬಸ್ ಗೆ ಮುತ್ತಿ ಟ್ಟು ಭಾವನಾತ್ಮಕವಾಗಿ ಬೀಳ್ಕೊಡುಗೆ ನೀಡುವ ವಿಡಿಯೊ ವೈರಲ್ (Viral News) ಆಗಿದೆ. ಇಡುಕ್ಕಿಯ ಕಟ್ಟಪ್ಪನ ಮೂಲದ ಪೌಲ್ ಕುರಿಯನ್ ಎಂಬವರು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ದೊಂದಿಗೆ 18 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದಾರೆ. ಕಳೆದ ಎಂಟು ವರ್ಷಗಳಿಂದ, ಅವರು ಇಡುಕ್ಕಿ ಮತ್ತು ಕುಮಿಲಿಯನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ತಮ್ಮ ಕೊನೆಯ ಕೆಲಸದ ದಿನದಂದು ಬಸ್‌ನ ಮುಂದೆ ನಿಂತಿರುವ ಭಾವನಾತ್ಮಕ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.
ಪ್ರಯಾಣಿಕರನ್ನು ಸಾಗಿಸುವಲ್ಲಿ 18 ವರ್ಷಗಳನ್ನು ಕಳೆದ ಅವರಿಗೆ ಈ ಸಕ್ರಿಯ ಸೇವೆಯ ಅಂತ್ಯವು ಮಹತ್ವದ ಅಧ್ಯಾಯವಾಗಿ ಪರಿಣಮಿಸಿತು. ಅಂತಿಮವಾಗಿ ಕುರಿಯನ್ ತಮ್ಮ ವರ್ಷಗಳ ಸೇವೆ ಯನ್ನು ಸುರಕ್ಷಿತವಾಗಿ ಪೂರ್ಣಗೊಳಿಸಲು ಸಹಾಯ ಮಾಡಿದ್ದಕ್ಕಾಗಿ ಬಸ್‌ಗೆ ಸ್ವತಃ ಧನ್ಯವಾದ ತಿಳಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದ್ದು, ಜನರ ಮನ ಮುಟ್ಟಿದೆ.
ವಿಡಿಯೋ ನೋಡಿ:
ಕುರಿಯನ್ ತಮ್ಮ ಕೆಎಸ್‌ಆರ್‌ಟಿಸಿ ವೃತ್ತಿಜೀವನದ ಕೊನೆಯ ಎಂಟು ವರ್ಷಗಳನ್ನು ಕೇರಳದ ಇಡುಕ್ಕಿ ಮತ್ತು ಕುಮಿಳಿ ಮಾರ್ಗಗಳಲ್ಲಿ ಕಳೆದಿದ್ದಾರೆ. ಇದೀಗ ತಮ್ಮ ಕೊನೆಯ ಕೆಲಸದ ದಿನದಂದು ಬಸ್‌ನ ಮುಂದೆ ನಿಂತು, ಮುತ್ತಿಕ್ಕಿ ಕಣ್ಣೀರಿಡುತ್ತಾ ಬೀಳ್ಕೊಟ್ಟಿದ್ದಾರೆ. ಚಾಲಕನು ಈ ಮಾರ್ಗದಲ್ಲಿ ಸಾಮಾನ್ಯ ಪ್ರಯಾಣಿಕರಿಗೂ ಪರಿಚಿತನಾಗಿದ್ದು ಎಲ್ಲರ ಪ್ರೀತಿ ಗಳಿಸಿದ್ದರು.
Viral Video: ಯೋಧ ಯಾವತ್ತಿದ್ದರೂ ಯೋಧನೇ; ಚಾರ್ಜ್ ಖಾಲಿಯಾದ ಮಹಿಳೆಯ ಎಲೆಕ್ಟ್ರಿಕ್ ಕಾರ್ ತಳ್ಳಿದ ಸೈನಿಕ
ಕುರಿಯನ್ ತಮ್ಮ ವರ್ಷಗಳ ಸೇವೆಯನ್ನು ಸುರಕ್ಷಿತವಾಗಿ ಪೂರ್ಣಗೊಳಿಸಲು ಸಹಾಯ ಮಾಡಿದ್ದ ಕ್ಕಾಗಿ ಬಸ್‌ಗೆ ಮನ್ನಣೆ ನೀಡಿದ್ದಾರೆ."ಇಷ್ಟು ವರ್ಷಗಳ ಕಾಲ ಪ್ರಯಾಣಿಕರನ್ನು ಮತ್ತು ನನ್ನನ್ನು ರಕ್ಷಿಸಿದ್ದು ನಾನಲ್ಲ ಈ ಬಸ್ ನಮ್ಮನ್ನು ಸುರಕ್ಷಿತ ವಾಗಿರಿಸಿದೆ" ಎಂದು ಎಂದು ಪೌಲ್ ಭಾವನಾತ್ಮಕ ವಾಗಿ ನುಡಿದಿದ್ದಾರೆ. ಈ ವೀಡಿಯೊ ಕೇರಳ ಮುಖ್ಯಮಂತ್ರಿ ಅವರ ಗಮನವನ್ನೂ ಸೆಳೆದಿದ್ದು ಕೆಎಸ್‌ಆರ್‌ಟಿಸಿ ನೌಕರರ ಸಮರ್ಪಣೆಯನ್ನು ಶ್ಲಾಘಿಸಿದ್ದಾರೆ.