ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಇದೆಂಥ ಕೃತ್ಯ? ಕೈಕಾಲುಗಳಿಗೆ ಸಂಕೋಲೆ ಬಿಗಿದಿದ್ದರೂ ದುಡಿಯುತ್ತಿರುವ ಕಾರ್ಮಿಕನ ವಿಡಿಯೊ ವೈರಲ್

ಕಾರ್ಮಿಕನ‌ ಕೈ ಮತ್ತು ಕಾಲುಗಳಿಗೆ ಕಬ್ಬಿಣದ ಸರಪಳಿ ಬಿಗಿದು ಕೆಲಸ ಮಾಡಲು ಬಲವಂತ ಪಡಿಸುತ್ತಿರುವ ಆಘಾತಕಾರಿ ವಿಡಿಯೊ ಭಾರಿ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬಡ ಕಾರ್ಮಿಕರ ಮೇಲೆ ಮನಸೋ ಇಚ್ಛೆ ಈ ರೀತಿ ದುಡಿಸುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಬಳಕೆದಾರರು ಆಗ್ರಹಿಸಿದ್ದಾರೆ.

ಕೈಕಾಲುಗಳಿಗೆ ಸಂಕೋಲೆ ಹಾಕಿ ದುಡಿಯುತ್ತಿರುವ ಕಾರ್ಮಿಕ

ನವದೆಹಲಿ: ಇತ್ತೀಚೆಗೆ ಕಾರ್ಮಿಕನ ಮೃತದೇಹವನ್ನು ಎಳೆದೊಯ್ದಿರುವ ಘಟನೆಯೊಂದು ಭಾರಿ ಸುದ್ದಿಯಾಗಿತ್ತು.ಈ ನಡುವೆಯೇ ದೆಹಲಿಯಲ್ಲಿ ಕಾರ್ಮಿಕನೊಬ್ಬನನ್ನು ಅಮಾನವೀಯವಾಗಿ ನಡೆಸಿಕೊಂಡ ಘಟನೆ ವರದಿಯಾಗಿದೆ. ಕಾರ್ಮಿಕನ‌ ಕೈ ಮತ್ತು ಕಾಲುಗಳಿಗೆ ಕಬ್ಬಿಣದ ಸರಪಳಿಯಿಂದ ಕಟ್ಟಿ ಕೆಲಸ ಮಾಡಲು ಬಲವಂತಪಡಿಸುತ್ತಿರುವ ಆಘಾತಕಾರಿ ವಿಡಿಯೊ ಇದಾಗಿದ್ದು ಭಾರಿ ವೈರಲ್ (Viral Video) ಆಗಿದೆ. ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬಡ ಕಾರ್ಮಿಕರ ಮೇಲೆ ಮನಸೋ ಇಚ್ಛೆ ಈ ರೀತಿ ದುಡಿಸುತ್ತಿರುವ ದುಷ್ಟರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಕಾರ್ಮಿಕನಿಗೆ ಈ ರೀತಿಯಾಗಿ ಚಿತ್ರಹಿಂಸೆ ನೀಡಿರುವ ದೃಶ್ಯಗಳನ್ನು ನೋಡಿದರೆ ಮನಸ್ಸು ಭಾರವಾಗುತ್ತೆ. ಇವರೇನು ಮನುಷ್ಯರೋ ಇಲ್ಲ, ರಾಕ್ಷಸ ಸ್ವಭಾವದವರೋ ಎನ್ನುವ ಭಾವನೆ ಮೂಡುತ್ತದೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. ವೈರಲ್ ಆಗಿರುವ ಕ್ಲಿಪ್‌ನಲ್ಲಿ ಕಾರ್ಮಿಕನು ‌ತಲೆಯ ಮೇಲೆ ತರಕಾರಿ ತುಂಬಿದ ಭಾರವಾದ ಗೋಣಿ ಚೀಲವನ್ನು ಹೊತ್ತುಕೊಂಡು ಕಷ್ಟಪಟ್ಟು ನಡೆಯುವ ದೃಶ್ಯ ನೋಡಬಹುದು.‌ ಆತನ ಎರಡು ಕೈಗಳು ಹಾಗೂ ಕಾಲುಗಳನ್ನು ಸರಪಳಿಯಿಂದ ಕಟ್ಟಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ.

ವಿಡಿಯೊ ವೀಕ್ಷಿಸಿ:



ಈ ದೃಶಯವನ್ನು ರಾಷ್ಟ್ರೀಯ ಅಪರಾಧ ತನಿಖಾದಳದ (NCIB) ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊದಲ್ಲಿ ಒಬ್ಬ ವ್ಯಕ್ತಿಯ ಕೈ ಮತ್ತು ಕಾಲುಗಳಿಗೆ ಸರಪಳಿಯನ್ನು ಹಾಕಿ ಬಲವಂತವಾಗಿ ದುಡಿಸುತ್ತಿರುವುದು ಸೆರೆಯಾಗಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕರೆ ಮಾಹಿತಿ ತಿಳಿಸುವಂತೆ ಎನ್‌ಸಿಐಬಿ ಸಾರ್ವಜನಿಕರಲ್ಲಿ ವಿನಂತಿಸಿದೆ.

ವಾಕಿಂಗ್ ತೆರಳಿದ್ದ ಮಾಜಿ ಶಾಸಕಿ ಮೇಲೆ ಏಕಾಏಕಿಯಾಗಿ ಹರಿದ ಕಾರು

ವಿಡಿಯೊವನ್ನು ವೀಕ್ಷಣೆ ಮಾಡಿದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರೂ ಘಟನೆಗೆ‌ ಸಂಬಂಧಿಸಿದ ಸ್ಥಳದ ಬಗ್ಗೆ ಗೊಂದಲಗಳು ಉಂಟಾಗಿವೆ. ಕೆಲವರು ವಿಡಿಯೊದಲ್ಲಿ ಕಂಡುಬಂದ ವಾಹನಗಳ ನೋಂದಣಿ ಫಲಕಗಳನ್ನು ನೋಡಿ, ಇದು ದೆಹಲಿಯದಲ್ಲ ಬದಲಾಗಿ ಪಂಜಾಬ್‌ನ ಘಟನೆ ಆಗಿರಬಹುದು ಎಂದು ಊಹಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಸಮಾಜದಲ್ಲಿ ಮಾನವೀಯತೆ ಮರೆಯಾಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು "ಈ ಘಟನೆ ದೆಹಲಿಯಲ್ಲಿ ನಡೆದಿದ್ದರೆ‌ ಅದು ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ, ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಕಮೆಂಟ್ ಮಾಡಿದ್ದಾರೆ.

ಸದ್ಯ ಎನ್‌ಸಿಐಬಿಯು ವಿಡಿಯೊದ ಸತ್ಯಾಸತ್ಯತೆಯನ್ನು ದೃಢೀಕರಿಸಲು ಸಾರ್ವಜನಿಕರ ಸಹಕಾರವನ್ನು ಕೂಡ ಕೋರಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಯಾವ ನಿರ್ದಿಷ್ಟ ಕ್ರಮ ಕೈಗೊಂಡಿದ್ದಾರೆ ಎಂಬ ಕುರಿತು ಇನ್ನಷ್ಟೇ ಮಾಹಿತಿ ಬರಬೇಕಿದೆ.