International Yoga Day: ಸಿಕ್ಕಾಪಟ್ಟೆ ವೈರಲ್ ಆಯ್ತು ಶ್ವಾನದ ಈ ಯೋಗಾಸನ; ವಿಡಿಯೊ ವೈರಲ್!
ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿರುವ 13 ನೇ ಬೆಟಾಲಿಯನ್ ಕ್ಯಾಂಪಸ್‌ನಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ನಡೆಸಿದ ವಿಶೇಷ ಯೋಗ ಅಧಿವೇಶನದಲ್ಲಿ ಜನರ ಜೊತೆಗೆ ನಾಯಿಯೊಂದು ಯೋಗ ಮಾಡಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.


ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನ(International Yoga Day)ವನ್ನು ಆಚರಿಸಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಆಯೋಜಿಸಿದ್ದ ವಿಶೇಷ ಯೋಗ ಅಧಿವೇಶನದಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. 13 ನೇ ಬೆಟಾಲಿಯನ್ ಕ್ಯಾಂಪಸ್‌ನಲ್ಲಿ ನಡೆದ ಈ ಅಧಿವೇಶನದಲ್ಲಿ ನಾಯಿಯೊಂದು ಅದ್ಭುತವಾಗಿ ಯೋಗ ಮಾಡಿದೆ. ನಾಯಿ(Dog) ಯೋಗ ಮಾಡುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್(Viral Video)ಆಗಿದ್ದು ಇದನ್ನು ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿಯೊಂದಿಗೆ ನಾಯಿಯೊಂದು ಯೋಗ ಆಸನಗಳನ್ನು ಪ್ರದರ್ಶಿಸುವುದನ್ನು ಸೆರೆಹಿಡಿಯಲಾಗಿದೆ. ನಾಯಿಯು ವಜ್ರಾಸನ ಭಂಗಿಯಿಂದ ಹಿಡಿದು ವಿವಿಧ ರೀತಿಯ ಆಸನಗಳನ್ನು ಮಾಡಿದೆ.
ವಿಡಿಯೊ ಇಲ್ಲಿದೆ ನೋಡಿ...
#WATCH | J&K | A dog trained by the National Disaster Response Force (NDRF) emerges as the surprise star of a special Yoga session held, ahead of the 11th International Yoga Day, at the campus of the 13th Battalion at Sui, Udhampur today
— ANI (@ANI) June 20, 2025
The dog was adopted and trained by NDRF… pic.twitter.com/HSvJOx89vV
ಈ ನಾಯಿಗೆ ಎನ್‍ಡಿಆರ್‌ಎಫ್ ಸಿಬ್ಬಂದಿ ಸುಮಾರು ಎರಡು ವರ್ಷಗಳ ಕಾಲ ತರಬೇತಿ ನೀಡಿದ್ದಾರೆ ಎಂದು ವರದಿಯಾಗಿದೆ. ಅಧಿಕಾರಿಗಳು ತಮ್ಮ ಯೋಗ ಮ್ಯಾಟ್‌ಗಳನ್ನು ಹಾಕಿ ಆಸನಗಳನ್ನು ಮಾಡುವುದನ್ನು ನೋಡಿದಾಗ, ಅದು ಸುಮ್ಮನೆ ಅವರಿದ್ದ ಜಾಗಕ್ಕೆ ನಡೆದುಕೊಂಡು ಬಂದು ತಾನೇನು ಕಡಿಮೆ ಇಲ್ಲವೆಂಬಂತೆ ಯೋಗ ಮಾಡಿ ತೋರಿಸಿದೆ.ಇದು ಎಲ್ಲರ ಕಣ್ಮನ ಸೆಳೆದಿದೆ.
ನಾಯಿಯ ಯೋಗಾಭ್ಯಾಸದ ದೃಶ್ಯಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. “ನಾಯಿ ಕೂಡ ಯೋಗ ಕಲಿಯಲು ಸಾಧ್ಯವಾದರೆ, ಮನುಷ್ಯರು ಅದನ್ನು ತಮ್ಮ ದೈನಂದಿನ ಜೀವನದಲ್ಲಿ ಏಕೆ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ?" ಎಂದು ಎನ್‌ಡಿಆರ್‌ಎಫ್ ತಂಡವು ಹೇಳಿದೆ.
ಈ ಸುದ್ದಿಯನ್ನೂ ಓದಿ:Viral Video: ಟ್ರಂಪ್ ಕಾರ್ಯಕ್ರಮದ ನಡುವೆ ಕ್ರೇನ್ ಆಪರೇಟರ್ ಭರ್ಜರಿ ನಿದ್ದೆ! ಫನ್ನಿ ವಿಡಿಯೊ ಇಲ್ಲಿದೆ
ಬೆಟಾಲಿಯನ್‌ನ ಇನ್ಸ್‌ಪೆಕ್ಟರ್ ಮುನ್ಷಿ ರಾಮ್ ಅವರು ಅಧಿವೇಶನದ ನೇತೃತ್ವ ವಹಿಸಿದ್ದರು ಮತ್ತು ನಾಯಿಯ ಯೋಗಾಭ್ಯಾಸದ ಕುರಿತು ಮಾತನಾಡಿದ ಇವರು, "ಯೋಗವನ್ನು ಪ್ರಾಣಿಗಳು ಸೇರಿದಂತೆ ಎಲ್ಲರೂ ಮಾಡಬಹುದಾಗಿದೆ. ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನದಂದು, ಮಾತ್ರ ಯೋಗ ಮಾಡುವುದಲ್ಲ, ಬದಲಾಗಿ ದಿನನಿತ್ಯದ ಜೀವನದಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು" ಎಂದು ಅವರು ತಿಳಿಸಿದ್ದಾರೆ.