ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದನ ಕಾಯುವವನ ಮೇಲೆ ಏಕಾ ಏಕಿ ದಾಳಿ ಮಾಡಿದ ಸಿಂಹ: ಕಲ್ಲು ತೂರಿ ಜೀವ ಉಳಿಸಿದ ಗ್ರಾಮಸ್ಥರು!

Viral Video: ಗುಜರಾತ್ ನ ಗರ್ಜಿಯಾ ಗ್ರಾಮದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು ದನಗಾಹಿ ಯೊಬ್ಬನ ಮೇಲೆ ಸಿಂಹವೊಂದು ದಾಳಿ ಮಾಡಿದ್ದು ವ್ಯಕ್ತಿಗೆ ತೀವ್ರ ಗಾಯಗಳಾಗಿವೆ‌. ಕೂಡಲೇ ಎಚ್ಚೆತ್ತು ಕೊಂಡ ಗ್ರಾಮಸ್ಥರು ಆತನನ್ನು ರಕ್ಷಿಸಲು ಧಾವಿಸಿದ್ದಾರೆ. ಈ ಘಟನೆಯ ದೃಶ್ಯ ವೈರಲ್ ಆಗುತ್ತಿದ್ದಂತೆ ಗ್ರಾಮಸ್ಥರ ಸುರಕ್ಷತೆ ಬಗ್ಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.

ಗುಜರಾತ್‌ನಲ್ಲಿ ವ್ಯಕ್ತಿಯ ಮೇಲೆ ಸಿಂಹ ದಾಳಿ

ಗುಜರಾತ್‌,ಜು.7: ಕಾಡು ಪ್ರಾಣಿಗಳು ಇತ್ತೀಚೆಗೆ ಆಹಾರ ಹುಡುಕುತ್ತ ನಾಡಿಗೆ ಭೇಟಿಕೊಡುತ್ತೀವೆ. ಇದೀಗ ಗುಜರಾತ್ ನ ಗರ್ಜಿಯಾ ಗ್ರಾಮದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು ದನಗಾಹಿಯೊಬ್ಬನ ಮೇಲೆ ಸಿಂಹವೊಂದು ದಾಳಿ ಮಾಡಿದ್ದು ವ್ಯಕ್ತಿಗೆ ತೀವ್ರ ಗಾಯಗಳಾಗಿವೆ‌. ಕೂಡಲೇ ಎಚ್ಚೆತ್ತುಕೊಂಡ ಗ್ರಾಮಸ್ಥರು ಆತನನ್ನು ರಕ್ಷಿಸಲು ಧಾವಿಸಿದ್ದಾರೆ.ಈ ಘಟನೆಯ ದೃಶ್ಯ ವೈರಲ್ (Viral News) ಆಗುತ್ತಿದ್ದಂತೆ ಗ್ರಾಮಸ್ಥರ ಸುರಕ್ಷತೆ ಬಗ್ಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.

ಪಾಲಿಟಾನಾ ತಾಲ್ಲೂಕಿನ ಗಾರ್ಜಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಭಾನುವಾರ ಬೆಳಿಗ್ಗೆ ಕಾಲುಭಾಯ್ ಬೋಗಾಭಾಯ್ ಗಮರಾ ಎಂಬ ವ್ಯಕ್ತಿ ತನ್ನ ಮನೆಯ ಬಳಿ ಇದ್ದಾಗ, ಸಿಂಹವೊಂದು ಏಕಾಏಕಿ ಬಂದು ದಾಳಿ ಮಾಡಲು ಮುಂದಾಗಿದೆ. ಸಿಂಹವು ಆತನನ್ನು ಕೆಳಗೆ ತಳ್ಳಿ, ಮೈಮೇಲೆ ಕೂತು ಕಚ್ಚಲಾರಂಭಿಸಿದೆ. ಗಾಬರಿಗೊಂಡ ಗ್ರಾಮಸ್ಥರು ಅವನನ್ನು ರಕ್ಷಿಸಲು ಧಾವಿಸಿದ್ದಾರೆ.

ವಿಡಿಯೋ ನೋಡಿ:



ನೆರೆದಿದ್ದ ಜನರು ಜೋರಾಗಿ ಕಿರುಚುತ್ತಾ, ಸಿಂಹದ ಮೇಲೆ ಸತತವಾಗಿ ಕಲ್ಲು ಎಸೆದಿದ್ದಾರೆ. ಜನರ ಕಿರುಚಾಟ ಕೇಳಿ ಹೆದರಿದ ಸಿಂಹವು, ಕಾಲುಭಾಯ್ ಅವರ ಕಾಲನ್ನು ಬಲವಾಗಿ ಕಚ್ಚಿ ಗಾಯಗೊಳಿಸಿ, ಅಲ್ಲಿಂದ ಓಡಿದೆ. ಆದರೆ ಆತ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ಚಿಕಿತ್ಸೆ ಮುಂದುವರಿಯುತ್ತಿದ್ದು ​ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ.

Viral video: ಉಚಿತ ಪ್ರಯಾಣ ನಿರಾಕರಿಸಿದ ಆಟೋ ಚಾಲಕನನ್ನು ನಿಂದಿಸಿದ ಹೋಮ್ ಗಾರ್ಡ್ ಸಿಬ್ಬಂದಿ ಅಮಾನತು

ದಾಳಿ ನಡೆದ ಪ್ರದೇಶದಲ್ಲಿ ತಂಡಗಳನ್ನು ನಿಯೋಜಿಸಲಾಗಿದ್ದು ಕಾಡು ಪ್ರಾಣಿಯನ್ನು ಹಿಡಿಯಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಪಾಲಿಟಾನ ಅರಣ್ಯ ಇಲಾಖೆಯ ಅಧಿಕಾರಿ ಚಿರಾಗ್ ಅಮೀನ್ ಹೇಳಿದ್ದಾರೆ. ಸಿಂಹಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅರಣ್ಯದಿಂದ ಹೊರಬಂದು ಗ್ರಾಮೀಣ ಪ್ರದೇಶಗಳಿಗೆ ನುಗ್ಗುತ್ತಿವೆ. ಈ ಘಟನೆಯಿಂದಾಗಿ ಅಲ್ಲಿನ ಸುತ್ತಮುತ್ತಲಿನ ಹಳ್ಳಿಗಳ ಜನರಲ್ಲಿ ತೀವ್ರ ಭೀತಿ ಆವರಿಸಿದೆ.