ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮುಂಬೈ ಕಡಲತೀರದಲ್ಲಿ 1.5 ಟನ್ ಕಸವನನ್ನು ಸಂಗ್ರಹಿಸಿದ ಪರಿಸರ ಪ್ರೇಮಿ ಲಿಸ್ಬನ್ ಫೆರಾವ್ ತಂಡ: ನೆಟ್ಟಿಗರಿಂದ ಪ್ರಶಂಸೆ!

Viral Video: ಪರಿಸರವಾದಿ ಲಿಸ್ಬನ್ ಫೆರಾವೊ ಎಂಬವರು ಕಡಲತೀರ ಸ್ವಚ್ಛತೆಯ ಅಭಿಯಾನ ಮೂಲಕ ಬರೋಬ್ಬರಿ 1.5 ಟನ್ ಕಸವನ್ನು ಹೊರತೆಗೆದಿದ್ದಾರೆ. ಇದು ಮುಂಬೈನ ತೀರದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಮತ್ತು ಹೆಚ್ಚುತ್ತಿರುವ ತ್ಯಾಜ್ಯ ಸಮಸ್ಯೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಪ್ಲಾಸ್ಟಿಕ್, ಗಾಜಿನ ಬಾಟಲಿಗಳು ಮತ್ತು ಇತರ ತ್ಯಾಜ್ಯಗಳು ಕಡಲತೀರದ ಅಡಿಯಲ್ಲಿ ಹೂತುಹೋಗಿದ್ದು ಇವರ ಈ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮುಂಬೈ ಬೀಚ್ ನಲ್ಲಿ 1.5 ಟನ್ ತ್ಯಾಜ್ಯ ವಿಲೇವಾರಿ ಮಾಡಿದ ಪರಿಸರ ಪ್ರೇಮಿಗಳು

ಮುಂಬೈ,ಆ.2: ಇತ್ತೀಚೆಗೆ ಪ್ರವಾಸಿ ಸ್ಥಳದಲ್ಲಿ ತ್ಯಾಜ್ಯಗಳ ರಾಶಿ ಹೆಚ್ಚಾಗುತ್ತಿದೆ. ಕೆಲವರು ನಾಗರಿಕ ಪ್ರಜ್ಞೆಯನ್ನು ಮರೆತು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯುತ್ತಿದ್ದಾರೆ. ಇದೀಗ ಪರಿಸರ ವಾದಿ ಲಿಸ್ಬನ್ ಫೆರಾವೊ ಎಂಬವರು ಕಡಲತೀರ ಸ್ವಚ್ಛತೆಯ ಅಭಿಯಾನ ಮೂಲಕ ಬರೋಬ್ಬರಿ 1.5 ಟನ್ ಕಸವನ್ನು ಹೊರತೆಗೆದಿದ್ದಾರೆ. ಇದು ಮುಂಬೈನ ತೀರದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಮತ್ತು ಹೆಚ್ಚುತ್ತಿರುವ ತ್ಯಾಜ್ಯ ಸಮಸ್ಯೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಪ್ಲಾಸ್ಟಿಕ್, ಗಾಜಿನ ಬಾಟಲಿಗಳು ಮತ್ತು ಇತರ ತ್ಯಾಜ್ಯಗಳು ಕಡಲತೀರದ ಅಡಿಯಲ್ಲಿ ಹೂತುಹೋಗಿದ್ದು ಇವರ ಈ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ (Viral News) ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪರಿಸರವಾದಿ ಲಿಸ್ಬನ್ ಫೆರಾವೊ ಅವರ ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ತಮ್ಮ ಸ್ವಯಂ ಸೇವಕರ ಜೊತೆಗೆ ಸೇರಿ ಅವರು ವಸಾಯಿ ಕಡಲ ತೀರದಿಂದ ಬರೋಬ್ಬರಿ 1.5 ಟನ್ ಕಸವನ್ನು ಸಂಗ್ರಹ ಮಾಡಿದ್ದಾರೆ. ಬೀಚ್‌ನ ಸ್ವಚ್ಛತಾ ಸಮಯದಲ್ಲಿ, ಪ್ಲಾಸ್ಟಿಕ್ ಬಾಟಲಿಗಳು, ಆಹಾರ ಹೊದಿಕೆಗಳು, ಮೀನುಗಾರಿಕಾ ಬಲೆಗಳು, ಗಾಜಿನ ಬಾಟಲಿಗಳು, ಪಾದರಕ್ಷೆಗಳು, ಇತ್ಯಾದಿ ಸೇರಿದ್ದು ಸಮುದ್ರ ಪರಿಸರ ವ್ಯವಸ್ಥೆಗಳಿಗೆ ಗಂಭೀರ ಅಪಾಯವನ್ನುಂಟು ಮಾಡುತ್ತವೆ.ಅಂತಹ ತ್ಯಾಜ್ಯವು ಸಮುದ್ರ ಜೀವಿಗಳಿಗೆ ಹಾಗೂ ಮನುಷ್ಯರ ದೇಹಕ್ಕೂ ತೊಂದರೆ ಉಂಟು ಮಾಡುತ್ತವೆ‌.



ಸರಿಯಾದ ತ್ಯಾಜ್ಯ ವಿಲೇವಾರಿ ಮತ್ತು ಪರಿಸರ ಜವಾಬ್ದಾರಿಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಫೆರಾವ್ ಸೋಷಿಯಲ್ ಮೀಡಿಯಾದಲ್ಲಿ ಈ ಸ್ವಚ್ಛತಾ ಅಭಿಯಾನಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. "ಹೀರೋ ಡ್ಯಾಡ್' ಎಂದು ಜನಪ್ರಿಯವಾಗಿ ಕರೆಯಲ್ಪಡುವ ಫೆರಾವ್, ತಮ್ಮ ಪರಿಸರ ಕಾಳಜಿಯಲ್ಲಿ ಪತ್ನಿ ಮತ್ತು ಮಕ್ಕಳು ಸೇರಿದಂತೆ ತಮ್ಮ ಕುಟುಂಬವನ್ನು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ.

Viral Video: ಅಳಿಲಿನ ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಪುಟಾಣಿಗಳು; 'ಇಂತಹ ಮಕ್ಕಳನ್ನು ಬೆಳೆಸಬೇಕು' ಎಂದ ನಟಿ ರಮ್ಯಾ

ಒಮ್ಮೆ ಅವರ ತಮ್ಮ ಪುಟ್ಟ ಮಕ್ಕಳು ಕಡಲತೀರದಲ್ಲಿ ವಿಸ್ಕಿ ಬಾಟಲಿಗಳು ಹಾಗೂ ತ್ಯಾಜ್ಯದ ನಡುವೆ ಆಟವಾಡುತ್ತಿರುವುದನ್ನು ಕಂಡು ಈ ಸ್ವಚ್ಚತಾ ಕಾರ್ಯಕ್ಕೆ ಇಳಿದಿದ್ದಾರೆ. ತಕ್ಷಣವೇ ಕಸದ ಚೀಲ ಹಿಡಿದ ಲಿಸ್ಬನ್, ಪ್ರತಿ ವಾರಾಂತ್ಯದಲ್ಲಿ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಕಡಲತೀರ ಸ್ವಚ್ಛ ಗೊಳಿಸಲು ಆಗಮಿಸುತ್ತಾರೆ. ಕೇವಲ ನಾಲ್ಕು ಜನರಿಂದ ಆರಂಭವಾದ ಈ ಸಣ್ಣ ಪ್ರಯತ್ನ, ಇಂದು 20,000ಕ್ಕೂ ಹೆಚ್ಚು ಸ್ವಯಂಸೇವಕರ ಬೃಹತ್ ತಂಡವಾಗಿ ಬೆಳೆದಿದೆ.

​ಲಿಸ್ಬನ್ ಅವರು ತಮ್ಮ ಸ್ವಚ್ಛತೆಯ ವಿಡಿಯೋವನ್ನು ಶೇರ್ ಮಾಡಿದ್ದು "ನಿರ್ಧಾರ ಮಾಡಿದ ಕೆಲವೇ ಕ್ಷಣದಲ್ಲೇ ಬದಲಾವಣೆ ಆರಂಭವಾಗುತ್ತದೆ. ಇಂದು 1.5 ಟನ್‌ಗೂ ಹೆಚ್ಚು ಕಸವನ್ನು ಸ್ವಚ್ಛಗೊಳಿಸಿದ್ದೇವೆ. ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು," ಎಂದು ಬರೆದು ಶೇರ್ ಮಾಡಿದ್ದಾರೆ. ನೆಟ್ಟಿಗರು ಈ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದ್ದು ನಿಮ್ಮ ಈ ಪ್ರೇರಣದಾಯಕ ಕೆಲಸಕ್ಕೆ ಒಳಿತಾಗಲಿ ಎಂದು ಬರೆದಿದ್ದಾರೆ.