ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಲಾಕ್ ಅಪ್ ಖ್ಯಾತಿಯ ಆಕಾಂಕ್ಷಾ ಚೌಧರಿ ಅಪಹರಣ ಯತ್ನ; ಕಾರ್‌ ಚಾಲಕನಿಗೆ ಹೊಡೆದು ಪಾರಾದ ನಟಿ

Viral Video: ಲಾಕ್ ಅಪ್ ರಿಯಾಲಿಟಿ ಶೋ ಖ್ಯಾತಿಯ ನಟಿ ಆಕಾಂಕ್ಷಾ ಚೌಧರಿ ಮಹಾರಾಷ್ಟ್ರದ ಪುಣೆಯ ಕಾರ್ಯಕ್ರಮ ಆಯೋಜಕರು ಸುರಕ್ಷತೆಯಲ್ಲಿ ಲೋಪ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಾರಿನಲ್ಲಿದ್ದವರಿಗೆ ತಾನು ಹೊಡೆದ ಮೇಲೆಯೇ ವಾಹನ ನಿಲ್ಲಿಸಿದರು ಎಂದಿದ್ದಾರೆ. ತಂಡದವರನ್ನು ಬಿಟ್ಟು, ತನ್ನನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.

ಲಾಕ್ ಅಪ್ ಖ್ಯಾತಿಯ ಆಕಾಂಕ್ಷಾ ಚೌಧರಿ

ಮುಂಬೈ, ಅ. 19: ಲಾಕ್ ಅಪ್ ರಿಯಾಲಿಟಿ ಶೋ ಖ್ಯಾತಿಯ ನಟಿ ಆಕಾಂಕ್ಷಾ ಚೌಧರಿ ಮಹಾರಾಷ್ಟ್ರದ ಪುಣೆಯ ಕಾರ್ಯಕ್ರಮ ಆಯೋಜಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ್ಮನ್ನು ಅಪಹರಿಸುವ ಪ್ರಯತ್ನ ನಡೆದಿತ್ತು ಎಂದಿದ್ದಾರೆ. ಸುರಕ್ಷತೆಯ ಲೋಪಗಳನ್ನು ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಾರಿನಲ್ಲಿದ್ದವರಿಗೆ ತಾನು ಹೊಡೆದ ಮೇಲೆಯೇ ವಾಹನ ನಿಲ್ಲಿಸಿದರು ಎಂದಿದ್ದಾರೆ. ತಂಡದವರನ್ನು ಬಿಟ್ಟು, ತನ್ನನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದಿದ್ದಾರೆ  ಎಂದು ಅವರು ಹೇಳಿಕೊಂಡಿದ್ದಾರೆ. ಇದರ ಕುರಿತಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News) ಆಗಿದೆ. ಈ ವೇಳೆ ತಮ್ಮ ತಂಡ ಜತೆಗಿಲ್ಲದೆ ತಮಗೆ ಅಸುರಕ್ಷಿತ ಅನುಭವವಾಗಿದೆ.  ಇದು ಒಂದು ರೀತಿಯ ಅಪಹರಣದಂತಿತ್ತು ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.

ಪುಣೆಯಲ್ಲಿ ನಡೆದ ನವರಾತ್ರಿ ಕಾರ್ಯಕ್ರಮವೊಂದರಲ್ಲಿ ತಮಗೆ ಎದುರಾದ ಕಹಿ ಅನುಭವದ ಬಗ್ಗೆ ಆಕಾಂಕ್ಷಾ ಚೌಧರಿ ಮಾತನಾಡಿದ್ದಾರೆ. ಆಯೋಜಕರ ವಿರುದ್ದ ಆರೋಪ ಮಾಡಿದ್ದು, ತಮ್ಮ ತಂಡದವರನ್ನು ಜತೆಗಿಲ್ಲದಂತೆ ಮಾಡಿ, ಬಲವಂತವಾಗಿ ಕಾರ್ಯಕ್ರಮದ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಒಪ್ಪಿಗೆ ಇಲ್ಲದೆ ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಪುಣೆಯ ಪೇಡ್ಕರ್ ಮೈದಾನಕ್ಕೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಒಬ್ಬಳೇ ಕಾರ್ಯಕ್ರಮದ ಸ್ಥಳಕ್ಕೆ ಹೋಗಲು ತಾನು ಏಕೆ ಹಿಂಜರಿದೆ ಎಂಬುದನ್ನು ವಿವರಿಸಿದ ಈ ರಿಯಾಲಿಟಿ ಸ್ಟಾರ್, ತನ್ನ ತಂಡದವರು ಜತೆಗಿಲ್ಲದೆ ತಾನು ಸುರಕ್ಷಿತವಾಗಿಲ್ಲ ಎಂದು ಆಯೋಜಕರಿಗೆ ಪದೇ ಪದೆ ಹೇಳಿದ್ದಾಗಿ ತಿಳಿಸಿದರು. ಆದರೆ ಕಾರಿನಲ್ಲಿದ್ದವರು ಗಂಭೀರವಾಗಿ ಪರಿಗನಿಸುವ ಬದಲು ನಗಲಾರಂಭಿಸಿದರು ಎಂದು ಆರೋಪಿಸಿದ್ದಾರೆ

ವಿಡಿಯೊ ನೋಡಿ:



ಆಯೋಜಕರು ರಾತ್ರಿ 10:30ರ ಸುಮಾರಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುವ ಸಮಯ ತಮ್ಮನ್ನು ಕರೆದೊಯ್ಯಲು ವಾಹನ ಕಳುಹಿಸಿದ್ದರು ಎಂದು ಆಕಾಂಕ್ಷಾ ದೂರಿದ್ದಾರೆ. ಕೇವಲ ಸುರಕ್ಷತೆಯಷ್ಟೇ ಅಲ್ಲದೆ ಇವೆಂಟ್ ಮ್ಯಾನೇಜ್‌ಮೆಂಟ್ ತಂಡವು ಹಣ ಪಾವತಿಸದೆ ವಂಚಿಸಿದೆ ಹಾಗೂ ತಮ್ಮ ಒಪ್ಪಿಗೆಯಿಲ್ಲದೆ ಪ್ರಚಾರಕ್ಕಾಗಿ ತಮ್ಮ ಚಿತ್ರಗಳನ್ನು ಬಳಸಿಕೊಂಡಿದೆ ಎಂದು ಕಿಡಿಕಾರಿದ್ದಾರೆ.

ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ; ಇದೇನು ನಿಮ್ಮ ಮನೆಯ ಆಸ್ತಿಯೇ?

ತನ್ನ ಅನುಭವವು ಅಪಹರಣದಂತೆಯೇ ಇತ್ತು ಎಂದು ಆಕಾಂಕ್ಷಾ ಆರೋಪಿಸಿದ್ದಾರೆ. ಕೊನೆಗೆ ಏನು ತೋಚದೆ ತಾನು ಹೊಡೆದ ಮೇಲೆಯೇ ವಾಹನ ನಿಲ್ಲಿಸಿದ್ದಾರೆ ಎಂದಿದ್ದಾರೆ. ಈ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಅವರು ತಿಳಿಸಿದ್ದಾರೆ.

​ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಟಿಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಪುಣೆ ಪೊಲೀಸರಿಗೆ ಟ್ಯಾಗ್ ಮಾಡಿ ತಕ್ಷಣವೇ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ.