ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಳಿಯಲ್ಲಿ ತಿರುಗಾಡುತ್ತಿದ್ದ ಬೀದಿನಾಯಿಯನ್ನು ರಕ್ಷಿಸಲು ಟ್ರೈನ್ ನಿಲ್ಲಿಸಿದ ಲೋಕೋ ಪೈಲಟ್; ಮಾನವೀಯತೆಗೆ ನೆಟ್ಟಿಗರು ಫಿದಾ!

Viral Video: ಲೋಕಲ್ ಟ್ರೈನ್ ನ ಪೈಲೆಟ್ ವೊಬ್ಬರು ಮಾನವೀಯತೆ ಮೆರೆದ ಘಟನೆಯೊಂದು ನಡೆದಿದೆ. ರೈಲು ಪ್ಲಾಟ್‌ಫಾರ್ಮ್ ಸಮೀಪಿಸುತ್ತಿದ್ದಾಗ ಬೀದಿ ನಾಯಿಯೊಂದು ಆಕಸ್ಮಿಕವಾಗಿ ಹಳಿಗಳ ಮೇಲೆ ಅಲೆದಾಡುತ್ತಿದ್ದು ಇದನ್ನು ಗಮನಿಸಿದ ಲೋಕೋ ಪೈಲಟ್ ಟ್ರೈನ್ ನಿಲ್ಲಿಸಿ ನಾಯಿಯ ಪ್ರಾಣ ಉಳಿಸಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಲೊಕೊ ಪೈಲಟ್ ನ ಕೆಲಸಕ್ಕೆ ಎಲ್ಲರು ಫಿದಾ ಆಗಿದ್ದಾರೆ..

ನಾಯಿಯನ್ನು ರಕ್ಷಿಸಲು ಟ್ರೈನ್ ನಿಲ್ಲಿಸಿದ ಲೋಕೋ ಪೈಲಟ್

ಮುಂಬೈ,ಜು.6: ಇತ್ತೀಚೆಗೆ ಮಳೆಯ ಪ್ರಮಾಣ ಕೆಲವೆಡೆ ಹೆಚ್ಚಾಗಿದ್ದು ಈಗಾಗಲೇ ಹವಾಮಾನ ಇಲಾಖೆ ರೆಡ್ ಆಲರ್ಟ್ ಅನ್ನು ಘೋಷನೆ ಮಾಡಿದೆ. ಅದೇ ರೀತಿ ಮುಂಬೈನಲ್ಲೂ ತೀವ್ರ ಮಳೆಯಾಗಿದ್ದು ಈ ಸನ್ನಿವೇಶದಲ್ಲೂ ಲೋಕಲ್ ಟ್ರೈನ್ ನ ಪೈಲೆಟ್ ವೊಬ್ಬರು ಮಾನವೀಯತೆ ಮೆರೆದ ಘಟನೆಯೊಂದು ನಡೆದಿದೆ. ರೈಲು ಪ್ಲಾಟ್‌ಫಾರ್ಮ್ ಸಮೀಪಿಸುತ್ತಿದ್ದಾಗ ಬೀದಿ ನಾಯಿಯೊಂದು ಆಕಸ್ಮಿಕವಾಗಿ ಹಳಿಗಳ ಮೇಲೆ ಅಲೆದಾಡುತ್ತಿದ್ದು ಇದನ್ನು ಗಮನಿಸಿದ ಲೋಕೋ ಪೈಲಟ್ ಟ್ರೈನ್ ನಿಲ್ಲಿಸಿ ನಾಯಿಯ ಪ್ರಾಣ ಉಳಿಸಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ಲೋಕೋ ಪೈಲಟ್ ನ ಕೆಲಸಕ್ಕೆ ಎಲ್ಲರು ಫಿದಾ ಆಗಿದ್ದಾರೆ.

ಇತ್ತೀಚೆಗೆ ಮನುಷ್ಯರ ಮೇಲೂ ದಯೆ ತೋರಿಸಿದ ಜನರಿದ್ದೂ ಇಂತಹ ಹೃದಯವಂತಿಕೆ ಮೆರೆಯುವವರನ್ನು ಮೆಚ್ಚಲೇಬೇಕು ಎಂದು ಅನೇಕರು ಕೊಂಡಾಡಿದ್ದಾರೆ. ನಾಯಿಯೂ ಲೋಕಲ್ ಟ್ರೈನ್ ಬರುತ್ತಿದ್ದಂತೆ ಪ್ಲಾಟ್‌ಫಾರ್ಮ್ ಕಡೆಗೆ ಧಾವಿಸಿದ್ದು ಅಲ್ಲಿಂದ ಕದಲದೆ ನಿಂತಿದೆ. ನಾಯಿಯನ್ನು ಓಡಿಸಲು ಲೋಕೋ ಪೈಲಟ್‌ಗಳು ಎಷ್ಟೇ ಹಾರ್ನ್ ಮಾಡಿದರೂ ಅಲ್ಲಿಂದ ಒಂಚೂರು ಕದಲಿಲ್ಲ. ಸ್ವಲ್ಪ ಕ್ಷಣಗಳ ನಂತರ, ಒಬ್ಬ ವ್ಯಕ್ತಿ ಹಳಿಗಳ ಮೇಲೆ ಇಳಿದು ನಾಯಿಯನ್ನು ಸುರಕ್ಷಿತವಾಗಿ ಓಡಿಸಲು ಪ್ರಯತ್ನಿಸಿದನು. ಆದಾಗ್ಯೂ, ಭಯಭೀತರಾದ ನಾಯಿ ಅವರ ಮೇಲೆಯೇ ತಿರುಗಿಬೀಳಲು ಯತ್ನಿಸಿದೆ‌.

ವಿಡಿಯೋ ನೋಡಿ:



ಇಷ್ಟಕ್ಕೆ ಈ ವೈರಲ್ ವಿಡಿಯೊ ಕೊನೆಗೊಂಡಿದ್ದು ವೀಕ್ಷಕರು ನಾಯಿಯ ಜೀವದ ಬಗ್ಗೆ ವಿಚಾರಿ ಸುತ್ತಿದ್ದಾರೆ‌. ಆದರೆ ಈ ಘಟನೆ ಯನ್ನು ಕಣ್ಣಾರೆ ಕಂಡ ಪ್ರಯಾಣಿಕರು ನಾಯಿ ಬದುಕುಳಿದಿದೆ. ಅಂತಿಮವಾಗಿ ರಕ್ಷಿಸಲಾಗಿದೆ ಎಂದು ಭರವಸೆ ನೀಡಿದರು. ಲೋಕೋ ಪೈಲಟ್ ನಾಯಿಯನ್ನು ಹಳಿಗಳಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವವರೆಗೆ ರೈಲು ಮುಂದಕ್ಕೆ ಚಲಿಸಲಿಲ್ಲ. ಅವರ ತಾಳ್ಮೆಗೆ ಮೆಚ್ಚಲೇ ಬೇಕು ಬರೆದಿದ್ದಾರೆ.

Viral Video: ʼʼಥೂ...ಎಷ್ಟು ಚೀಪ್‌ ಅನ್ನಿಸ್ತು ಎಂದ್ರೆ...ʼʼ; ಕಾರಿನಲ್ಲಿ ಊಟ ಮಾಡಿ ತಟ್ಟೆ ರಸ್ತೆಗೆ ಎಸೆದ ಕುಟುಂಬ

ಒಬ್ಬ ಬಳಕೆದಾರರು ಬರೆದಿದ್ದಾರೆ, "ಗುರುವಾರ ರಾತ್ರಿ ನಾನು ಮನೆಗೆ ಹೋಗುತ್ತಿದ್ದಾಗ ಅಲ್ಲಿದ್ದೆ, ಅದನ್ನು ರಕ್ಷಿಸಲು ನಾನು ಇಳಿದೆ, ಆದರೆ ಅದು ತನ್ನತ್ತ ತಿರುಗಿ ಬೀಳುತ್ತಿತ್ತು. ಆದರೆ ರೈಲು ಬಂದ ತಕ್ಷಣ, ನಾಯಿ ದಾರಿ ಕಂಡುಕೊಳ್ಳುವವರೆಗೂ ಲೋಕೋ ಪೈಲಟ್ ರೈಲು ನಿಲ್ಲಿಸಿದರೂ ಅದು ಸುರಕ್ಷಿತವಾಗಿದೆ ಅಂದರು''. ಲೋಕೋ ಪೈಲಟ್ ತೋರಿಸಿದ ಕಾಳಜಿ ಮತ್ತು ಪ್ರೇಕ್ಷಕರ ಪ್ರಯತ್ನಗಳಿಂದಾಗಿ ನಾಯಿ ಯಾವುದೇ ಹಾನಿಯಾಗದಂತೆ ಪಾರಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು "ಮಾನವೀಯತೆ ಹಾಗೆಯೇ ಉಳಿದಿದೆ" ಎಂದು ಬರೆದಿದ್ದಾರೆ.

ಇತ್ತೀಚೆಗೆ ಪ್ರಯಾಣಿಕರು ಚಲಿಸುತ್ತಿದ್ದ ರೈಲಿನ ಎಂಜಿನ್‌ನೊಳಗೆ ಸಿಲುಕಿದ್ದ ನವಿಲನ್ನು ರಕ್ಷಣೆ ಮಾಡಿದ ಘಟನೆಯೂ ಮಹಾರಾಷ್ಟ್ರದ ಶೇಗಾಂವ್ ನಲ್ಲಿ ನಡೆದಿದೆ. ನರಳಾಡುತ್ತಿದ್ದ ನವಿಲನ್ನು ರೈಲ್ವೆ ಸಿಬ್ಬಂದಿ, ಸರ್ಕಾರಿ ರೈಲ್ವೆ ಪೊಲೀಸ್ ಮತ್ತು ಸ್ಥಳೀಯರು ಸೇರಿ ರಕ್ಷಿಸಿದ್ದರು. ತಕ್ಷಣವೇ ದಿನನಿತ್ಯದ ರೈಲ್ವೆ ಕಾರ್ಯಾಚರಣೆಯನ್ನು ಬದಿಗಿಟ್ಟು ಪಕ್ಷಿಯನ್ನು ಅವರು ರಕ್ಷಿಸಿದ್ದರು.