ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Guinness Record: ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಸ್ಪೆಷಲ್​ ಗಿಫ್ಟ್! ಗಿನ್ನಿಸ್ ದಾಖಲೆ ಬರೆದ ಯುವಕ

ಪ್ರಧಾನಿ ಮೋದಿ ಅವರು ಬುಧವಾರದಂದು 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ದೇಶ ವಿದೇಶಗಳ ಗಣ್ಯರು ಮೋದಿ ಅವರು ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಇದೇ ವೇಳೆ ಲಖನೌದ ಗೌರವ್ ಸಿದ್ಧಾರ್ಥ್‌ ಸಹ ಪ್ರಧಾನಿ ಮೋದಿಗೆ ಶುಭಕೋರಿದ್ದಾರೆ. ಅದು ಗಿನ್ನಿಸ್ ರೆಕಾರ್ಡ್ ಮಾಡುವ ಮೂಲಕ ಪಿಎಂಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ಯೋಗಿಯೊಂದಿಗೆ ಗೌರವ್ ಸಿದ್ಧಾರ್ಥ್‌

ನವದೆಹಲಿ: ಪ್ರಧಾನಮಂತ್ರಿ (Prime Minister) ನರೇಂದ್ರ ಮೋದಿಯವರ (Narendra Modi) 75ನೇ ಹುಟ್ಟುಹಬ್ಬದ ಆಚರಣೆ ಹಿನ್ನೆಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬೆಂಜಮಿನ್ ನೆತನ್ಯಾಹು ಹಾಗೂ ಇತರೆ ಜಾಗತಿಕ ಗಣ್ಯರು ಶುಭಾಶಯ ತಿಳಿಸಿದ್ದಾರೆ. ಈ ವೇಳೆ, ಲಖನೌದ ಗೌರವ್ ಸಿದ್ಧಾರ್ಥ್‌ (Gaurav Siddharth) ಕೈಗೊಂಡಿದ್ದ ದೇಶಾದ್ಯಂತ ಬೈಕ್ ಯಾತ್ರೆಯ ಗಿನ್ನೆಸ್ (Guinness) ದಾಖಲೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. 2015ರ ಸೆಪ್ಟೆಂಬರ್ 17ರಂದು ಮೋದಿಯವರ 65ನೇ ಹುಟ್ಟುಹಬ್ಬದ ದಿನ, ಗೌರವ್ 1,25,000 ಕಿ.ಮೀ. ಒಂಟಿ ಯಾತ್ರೆ ಆರಂಭಿಸಿದ್ದರು.

IIM ಲಕ್ನೋದ MBA ಪದವೀಧರ ಗೌರವ್, ಹೀರೋ ಇಂಪಲ್ಸ್ ಬೈಕ್‌ನಲ್ಲಿ 29 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳಲ್ಲಿ 1 ವರ್ಷ 8 ತಿಂಗಳು ಸಂಚರಿಸಿದರು. “2015ರಲ್ಲಿ Jio ಇರಲಿಲ್ಲ, ಡೇಟಾವನ್ನು MBಗಳಲ್ಲಿ ಉಳಿಸಬೇಕಿತ್ತು. ಪೆಟ್ರೋಲ್, ವಸತಿ ನಂತರ ಇಂಟರ್ನೆಟ್‌ಗೆ ಹೆಚ್ಚು ಖರ್ಚಾಯಿತು” ಎಂದು ಗೌರವ್ ಲಿಂಕ್ಡ್‌ಇನ್‌ನಲ್ಲಿ ಬರೆದಿದ್ದಾರೆ. ಬಾಬಾ ರಾಮ್‌ದೇವ್ ‘ಸ್ವದೇಶಿ’ ಸಂದೇಶದೊಂದಿಗೆ ಯಾತ್ರೆಗೆ ಚಾಲನೆ ನೀಡಿದ್ದರು. ಗೌರವ್ ಗುಜರಾತ್‌ನಲ್ಲಿ ಮೋದಿಯವರ ತಾಯಿ ಹೀರಾಬೆನ್‌ರ ಆಶೀರ್ವಾದವನ್ನೂ ಪಡೆದಿದ್ದರು.

2018ರಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಗೌರವ್‌ ಅವರ 1,25,000 ಕಿ.ಮೀ. ಯಾತ್ರೆಯನ್ನು (1,15,000 ಕಿ.ಮೀ. ದಾಖಲಿತ) ಒಂದೇ ದೇಶದ ದೀರ್ಘಯುತ ಬೈಕ್ ಯಾತ್ರೆ ಎಂದು ದೃಢೀಕರಿಸಿತು. ಇನ್ನೂ ಇದಕ್ಕೂ ಮುಂಚೆ ಅಮೆರಿಕಾದ ಡಾನೆಲ್ ಲಿನ್‌ ಅವರು 78,000 ಕಿ.ಮೀ. ಕ್ರಮಿಸಿ ದಾಖಲೆ ಬರೆದಿದ್ದರು.


https://www.linkedin.com/posts/gaurav-siddharth-568ab49a_journey-doc-activity-7374134586278096896-vXGE?utm_source=li_share&utm_content=feedcontent&utm_medium=g_dt_web&utm_campaign=copy

ಗೌರವ್ ಯಾತ್ರೆ ವೇಳೆ ನೋಟ್ ‌ಬ್ಯಾನ್, Jio ಪ್ರಾರಂಭ, ಸಾಮಾಜಿಕ ಜಾಲತಾಣಗಳ ಜನಪ್ರಿಯತೆ, ಗಡಿಯ ಉದ್ವಿಗ್ನತೆಯನ್ನು ಕಂಡರು. “ದೇಶದಾದ್ಯಂತ ಸಾವಿರಾರು ಜನರು, ರಾಜ್ಯ, ಧರ್ಮ, ರಾಜಕೀಯ ಭೇದವಿಲ್ಲದೆ, ನನಗೆ ಸಹಾಯ ಮಾಡಿದರು. ಇದು ಭಾರತದ ಒಗ್ಗಟ್ಟಿನ ಶಕ್ತಿ,” ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: Sabarimala: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ 4 ಕೆಜಿ ಚಿನ್ನ ನಾಪತ್ತೆ...!

ಗೌರವ್‌ ಅವರ ಸಾಧನೆಯನ್ನು ಜಾಲತಾಣದಲ್ಲಿ ಜನರು ಮೆಚ್ಚಿದ್ದಾರೆ. “ಇಂಟರ್ನೆಟ್ ಜನಪ್ರಿಯವಾಗುವ ಮೊದಲೇ ಗೌರವ್ ಖ್ಯಾತರಾಗಿದ್ದರು. ಒಂದು ಅದ್ಭುತ ಸಾಹಸ” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಸಾಹಸವು ಯುವಕರಿಗೆ ಸ್ಫೂರ್ತಿಯಾಗಿದೆ. ಇನ್ನು ರಾಜಕೀಯ ರಂಗ ಹೊರತುಪಡಿಸಿ ಪ್ರಧಾನಿ ಮೋದಿಗೆ ದೇಶ ವಿದೇಶಗಳ ಗಣ್ಯರು ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

ಇದೇ ವೇಳೆ ವಿಶ್ವ ಪ್ರಸಿದ್ಧ ಫುಟ್ಬಾಲ್​ ತಾರೆ ಅರ್ಜೆಂಟೀನಾ ತಂಡದ ಆಟಗಾರ ಲಿಯೋನೆಲ್​ ಮೆಸ್ಸಿ ಸಹ ಪ್ರಧಾನಿ ಮೋದಿಗೆ ವಿಶ್ ಮಾಡಿದ್ದು, ಅಷ್ಟೇ ಅಲ್ಲ, ಅವರು ಮೋದಿಗೆ ಹುಟ್ಟುಹಬ್ಬದ ಉಡುಗೊರೆಯನ್ನು ಸಹ ಕಳುಹಿಸಿದ್ದಾರೆ. ಮೆಸ್ಸಿ ತಾವು ಸಹಿ ಮಾಡಿದ 2022ರ ವಿಶ್ವಕಪ್​ ಜೆರ್ಸಿಯನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆ. ಮೆಸ್ಸಿ ನಾಯಕತ್ವದಲ್ಲಿ, ಅರ್ಜೆಂಟೀನಾ ತಂಡ 2022ರ ವಿಶ್ವಕಪ್ ಗೆದ್ದುಕೊಂಡಿತ್ತು. ಈ ವೇಳೆ ಮೆಸ್ಸಿ ಧರಿಸಿದ್ದ ಜೆರ್ಸಿಯನ್ನು ಪ್ರಧಾನಿಗೆ ಕಳುಹಿಸಿರುವುದಾಗಿ ಸತಾದ್ರು ದತ್ತಾ ಬಹಿರಂಗ ಪಡಿಸಿದ್ದಾರೆ.