ಭೋಪಾಲ್, ಮಾ. 4: ಜಪಾನ್ನ ಮೃಗಾಲಯದಲ್ಲಿರುವ ಪಂಚ್ ಕೋತಿಯ ಕಣ್ಣೀರಿನ ಕಥೆ ಎಲ್ಲರಿಗೂ ತಿಳಿದಿದೆ. ತಾಯಿ ಪ್ರೀತಿ ಕಳೆದುಕೊಂಡಿದ್ದ ಪಂಚ್ ಗೊಂಬೆಯನ್ನು ಅಪ್ಪಿಕೊಂಡೇ ಜೀವಿಸುತ್ತಿದೆ. ಈ ನಡುವೆ ಇಡೀ ಊರಿನ ಕಣ್ಮಣಿಯಾಗಿದ್ದ ಕೋತಿ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದು ಇಡೀ ಗ್ರಾಮವೇ ಕಂಬನಿ ಮೀಡಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಮಧ್ಯ ಪ್ರದೇಶದ ಸೆಹೋರ್ ಜಿಲ್ಲೆಯ ಅಷ್ಟ ತಹಸಿಲ್‌ನಲ್ಲಿರುವ ದಲ್ಪತ್‌ಪುರ ಗ್ರಾಮದಲ್ಲಿ ಈ ಕೋತಿ ಕಳೆದ ಹಲವು ವರ್ಷಗಳಿಂದ ಎಲ್ಲರ ಜತೆ ಉತ್ತಮ ಭಾಂದವ್ಯ ಬೆಳೆಸಿಕೊಂಡಿತ್ತು. ಇದು ಇಲ್ಲಿನ ಗ್ರಾಮಸ್ಥರಿಗೆ ಕೇವಲ ಒಂದು ಪ್ರಾಣಿಯಾಗಿರಲಿಲ್ಲ, ಬದಲಿಗೆ ಕುಟುಂಬದ ಸದಸ್ಯನಂತೆ ಇತ್ತು.
ಹಲವು ವರ್ಷಗಳಿಂದ ಗ್ರಾಮಸ್ಥರ ಜತೆ ವಾಸಿಸುತ್ತಿದ್ದ ಈ ಕೋತಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡು ಗ್ರಾಮಸ್ಥರನ್ನು ಶೋಕದಲ್ಲಿ ಮುಳುಗಿಸಿದೆ. ಮರಗಳಲ್ಲಿ ಆಟವಾಡುತ್ತ ಮನೆಗಳ ಹೊರಗೆ ಇಟ್ಟ ಬ್ರೆಡ್ ಮತ್ತು ತರಕಾರಿಗಳನ್ನು ತಿಂದು ಇದು ಹಳ್ಳಿಯ ಜೀವನದ ಭಾಗವೇ ಆಗಿತ್ತು. ಅದು ಕೋತಿಯಾಗಿದ್ದರೂ, ಯಾರಿಗೂ ಹಾನಿ ಮಾಡಲಿಲ್ಲ ಎಂಬುದನ್ನು ಇಲ್ಲಿನ ಗ್ರಾಮಸ್ಥರು ನೆನಪಿಸಿಕೊಂಡಿದ್ದಾರೆ.
ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!
ಗ್ರಾಮದ ಹಿರಿಯ ಹರ್ದಯಾಳ್ ಪಟೇಲ್ ಪ್ರಕಾರ, ಈ ಕೋತಿ ಗ್ರಾಮದ ಮರಗಿಡಗಳಲ್ಲಿ ಆಡುತ್ತಾ, ಮನೆಗಳ ಮುಂದೆ ಇಡುತ್ತಿದ್ದ ರೊಟ್ಟಿ, ತರಕಾರಿಗಳನ್ನುತಿನ್ನುತ್ತಾ ಬೆಳೆದಿದೆ. ಮಕ್ಕಳೊಂದಿಗೆ ಆಟವಾಡುತ್ತಿತ್ತು ಎಂದು ಭಾವುಕರಾಗಿ ನೆನಪಿಸಿಕೊಂಡಿದ್ದಾರೆ. ಇದು ಸತ್ತಿರುವ ವಿಚಾರ ತಿಳಿದಾಗ ಮಹಿಳೆಯರು ಮತ್ತು ಮಕ್ಕಳು ಕಣ್ಣೀರು ಹಾಕಿದ್ದಾರೆ.
ಭಾರತದ ಮಧ್ಯ ಪ್ರದೇಶದ ಈ ಗ್ರಾಮವೇ ಇದೀಗ ನೋವು ತೋಡಿಕೊಂಡಿದೆ. ಕೋತಿಯ ಮೃತದೇಹಕ್ಕೆ ಮನುಷ್ಯನಿಗೆ ಮಾಡುವಂತೆಯೇ ಅಂತ್ಯಕಿಯೆ ನೆರವೇರಿಸಿ ಸಕಲ ವಿಧಿವಿಧಾನಗಳೊಂದಿಗೆ ವಿದಾಯ ಹೇಳಿದ್ದಾರೆ. ಕೋತಿಯ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ಸ್ಮಶಾನಕ್ಕೆ ಕೊಂಡೊಯ್ದಿರುವ ದೃಶ್ಯ ವೈರಲ್ ಆಗಿದೆ.. ಮಂತ್ರಘೋಷಗಳ ನಡುವೆ ಚಿತೆ ಸಿದ್ಧಪಡಿಸಿ ಅಂತ್ಯಕ್ರಿಯೆ ನಡೆಸಲಾಗಿದೆ.