ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral Video: ಬರೇಲಿಯಲ್ಲಿ ರಣ ಭೀಕರ ಬಿರುಗಾಳಿ; ಶೆಡ್‌ನೊಂದಿಗೆ ಆಕಾಶಕ್ಕೆ ಹಾರಿದ ವ್ಯಕ್ತಿಯ ವಿಡಿಯೊ ವೈರಲ್‌

ಉತ್ತರ ಪ್ರದೇಶದ ಬರೇಲಿಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಭೀಕರ ಬಿರುಗಾಳಿ ಹಾಗೂ ಮಳೆಯ ಆರ್ಭಟಕ್ಕೆ 100ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಈ ಗಾಳಿ ಹಾಗೂ ಮಳೆಯ ತೀವ್ರತೆಗೆ ಶೆಡ್‌ ಬಳಿ ನಿಂತಿದ್ದ ವ್ಯಕ್ತಿಯೊಬ್ಬ ಆಕಾಶಕ್ಕೆ ಹಾರಿ ಹೋಗಿದ್ದಾನೆ. ಈ ಭಯಾನಕ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬರೇಲಿಯ ಬಿರುಗಾಳಿಗೆ ಆಕಾಶಕ್ಕೆ ಹಾರಿದ ವ್ಯಕ್ತಿ

ಲಖನೌ, ಮೇ 16: ಉತ್ತರ ಪ್ರದೇಶದ ಬರೇಲಿಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಭೀಕರ ಬಿರುಗಾಳಿ ಹಾಗೂ ಮಳೆಯ ಆರ್ಭಟಕ್ಕೆ 100ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಈ ಗಾಳಿ ಹಾಗೂ ಮಳೆಯ ತೀವ್ರತೆಗೆ ಶೆಡ್‌ ಕೆಳಗೆ ನಿಂತಿದ್ದ ವ್ಯಕ್ತಿಯೊಬ್ಬ ಆಕಾಶಕ್ಕೆ ಹಾರಿದ್ದಾನೆ‌. ಈ ಭಯಾನಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಬರೇಲಿ ಜಿಲ್ಲೆಯ ಭಮೋರಾ ಪೊಲೀಸ್ ಠಾಯ ವ್ಯಾಪ್ತಿಯ ಬಳಿ ಈ ಘಟನೆ ನಡೆದಿದೆ. ವೈರಲ್ ಕ್ಲಿಪ್‌ನಲ್ಲಿ ಶೆಡ್ ಅನಿಯಂತ್ರಿತವಾಗಿ ತೂಗಾಡುತ್ತಿದ್ದಂತೆ ವ್ಯಕ್ತಿಯನ್ನು ಹಲವು ದೂರದವರೆಗೆ ಗಾಳಿಯೂ ಕೊಂಡೊಯ್ದಿರುವುದು ಕಂಡು ಬಂದಿದೆ. ಸಂತ್ರಸ್ತ ವ್ಯಕ್ತಿಯನ್ನು ಸ್ಥಳೀಯ ಕಾರ್ಮಿಕ, 50 ವರ್ಷದ ನಾನ್ಹೆ ಮಿಯಾನ್ ಎಂದು ಗುರುತಿಸಲಾಗಿದೆ.

ವಿಡಿಯೊ ನೋಡಿ:



ಈ ವಿಡಿಯೊವನ್ನು ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ, ಅವರು ಇದನ್ನು "ಬರೇಲಿಯಿಂದ ಬಂದ ಭಯಾನಕ ಕ್ಷಣ" ಎಂದು ವಿವರಿಸಿದ್ದಾರೆ. ನಾನ್ಹೆ ಮದುವೆಯೊಂದಕ್ಕೆ ಟೆಂಟ್ ಸಾಮಗ್ರಿಗಳನ್ನು ತಲುಪಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ. ಗಾಳಿಯ ವೇಗದಿಂದಾಗಿ, ಇಡೀ ಟಿನ್ ಶೆಡ್ ನೆಲದಿಂದ ಕಿತ್ತುಕೊಂಡು ಆಕಾಶದಲ್ಲಿ ತೇಲಾಡಿದೆ. ಹಗ್ಗ ಹಿಡಿದಿದ್ದ ನಾನ್ಹೆ 30ರಿಂದ 50 ಅಡಿ ಎತ್ತರಕ್ಕೆ ಹಾರಿದ್ದಾರೆ.

ಶಾಲಾ ಬಸ್ಸಿನಲ್ಲಿ ನೇತಾಡುತ್ತಾ ಹೋಗುತ್ತಿರುವ ವಿದ್ಯಾರ್ಥಿಗಳು; ವಿಡಿಯೋ ವೈರಲ್‌

ಸುಮಾರು 80 ಅಡಿ ದೂರದಲ್ಲಿದ್ದ ಕೆಸರು ತುಂಬಿದ ಗದ್ದೆಗೆ ಬಿದ್ದಿದ್ದಾರೆ. ನಂತರ ಸ್ಥಳೀಯರು ತಕ್ಷಣ ಅವರನ್ನು ಬೈಕ್‌ನಲ್ಲಿ ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿದ್ದಾರೆ. ಘಟನೆಯ ತೀವ್ರತೆಗೆ ಅವರ ಕೈ ಮೂಳೆ ಮುರಿದಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬರೇಲಿ, ಪ್ರಯಾಗ್‌ರಾಜ್, ಭದೋಹಿ, ಫತೇಪುರ್ ಮತ್ತು ಸೋನ್‌ಭದ್ರ ಸೇರಿ ಹಲವು ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹವಾಮಾನ ವೈಪರೀತ್ಯ ಸಂಭವಿಸಿದೆ. ಭಾರಿ ಮಳೆಯೊಂದಿಗೆ ಅತ್ಯಂತ ಬಲವಾಗಿ ಬೀಸಿದ ಗಾಳಿಗೆ ಮರಗಳು ಬುಡಮೇಲಾಗಿದ್ದು. ಮನೆಗಳಿಗೆ ಹಾನಿಯಾಗಿದೆ. ವಿದ್ಯುತ್ ಕಂಬಗಳು ಉರುಳಿಬಿದ್ದಿವೆ‌. ಇದರ ಪರಿಣಾಮ 89ಕ್ಕೂ ಹೆಚ್ಚು ಸಾವು ಸಂಭವಿಸಿದ್ದು, ಸುಮಾರು 53 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.