ವಿಯೆಟ್ನಾಂ, ಡಿ. 27: ರಾಜ್ಯದಲ್ಲಿ ಮಹಿಳೆಯರ ಮೇಲೆ ಜಗಳ, ಹಲ್ಲೆ, ದೌರ್ಜನ್ಯದಂತಹ ಘಟನೆ ಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಇದಕ್ಕೆ ಸಾಕ್ಷಿ ಎಂಬಂತೆ ಮಹಿಳೆಯೊಬ್ಬರಿಗೆ ಕ್ಲುಲ್ಲಕ ಕಾರಣಕ್ಕೆ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆವೊಂದು ವರದಿಯಾಗಿದೆ. ಸಂತ್ರಸ್ತ ಮಹಿಳೆಯ ಮಗು, ಆರೋಪಿಯ ಮಗನ ಜೊತೆ ಆಟವಾಡಲು ನಿರಾಕರಿಸಿದೆ ಎಂಬ ಸಣ್ಣ ವಿಚಾರಕ್ಕೆ ಜಗಳ ಉಂಟಾಗಿದೆ. ಕ್ಷುಲ್ಲಕ ಕಾರಣಕ್ಕಾಗಿಯೇ ಮಹಿಳೆಯ ಮೇಲೆ ಆ ವ್ಯಕ್ತಿ ಸಾರ್ವಜನಿಕವಾಗಿ ಅತ್ಯಂತ ಕ್ರೂರವಾಗಿ ಹಲ್ಲೆ ಮಾಡಿರುವ ಘಟನೆ ವಿಯೆಟ್ನಾಂನ ಹನೋಯಿಯಲ್ಲಿ ನಡೆದಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು ವ್ಯಕ್ತಿಯ ನಡೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಯೆಟ್ನಾಂನ ಹನೋಯ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಆರೋಪಿಯನ್ನು ಡ್ಯಾಂಗ್ ಚಿ ಥಾನ್ ಎಂದು ಗುರುತಿಸಲಾಗಿದೆ. ಸಂತ್ರಸ್ತ ಮಹಿಳೆಯ ಮಗು ಆರೋಪಿಯ ಮಗನ ಜೊತೆ ಆಟ ವಾಡಲು ನಿರಾಕರಣೆ ಮಾಡಿತ್ತು.. ಇದೇ ವಿಷಯವಾಗಿ ಇಬ್ಬರ ನಡುವೆ ಜಗಳ ಉಂಟಾಗಿದೆ. ಆತ ತನ್ನ ಮಗನಿಗೆ ಮಹಿಳೆ ನೋವುಂಟು ಮಾಡಿದ್ದಾಳೆ ಎಂದು ಆರೋಪ ಮಾಡಿ ಮಹಿಳೆಗೆ ಸರಿಯಾಗಿ ಹಿಂಸಿಸಿದ್ದಾನೆ. ಸೇರಿದ್ದ ಜನರ ಮುಂದೆಯೇ ಮಹಿಳೆಯನ್ನು ಆತ ಹಲವು ಬಾರಿ ಹೊಡೆದು ಒದೆಯುವುದನ್ನು ವಿಡಿಯೊದಲ್ಲಿ ನೋಡಬಹುದು.
ವಿಡಿಯೋ ನೋಡಿ:
ಇಬ್ಬರ ನಡುವೆ ವಾಗ್ವಾದ ಹೆಚ್ಚಾದಾಗ ಆ ವ್ಯಕ್ತಿಯೂ ಸಾರ್ವಜನಿಕರ ಮುಂದೆಯೇ ಮಹಿಳೆಯ ಮುಖಕ್ಕೆ ಸರಿಯಾಗಿ ಹೊಡೆದು ಕಾಲಿನಿಂದ ಒದ್ದು ಕೆಳಕ್ಕೆ ತಳ್ಳಿದ್ದಾನೆ. ಆಕೆ ನೆಲದ ಮೇಲೆ ಬಿದ್ದಾಗ ಸರಿಯಾಗಿ ಕಾಲಿನಿಂದ ಒದೆಯುವ ದೃಶ್ಯ ಕಂಡು ಬಂದಿದೆ. ಈ ಭೀಕರ ಘಟನೆ ನಡೆಯುವಾಗ ಸ್ಥಳದಲ್ಲಿ ನಾಲ್ವರು ಸಣ್ಣ ಮಕ್ಕಳು ಮತ್ತು ಆರೋಪಿಯ ಪತ್ನಿ ಕೂಡ ಇದ್ದರು. ಆದರೂ ಆತ ಮಕ್ಕಳ ಎದುರಲ್ಲೇ ಈ ರೀತಿಯಾಗಿ ಕೃತ್ಯ ಎಸಗಿರುವುದು ಕಂಡು ಬಂದಿದೆ.
Viral Video: ಒಂದೇ ಬೈಕ್‍ನಲ್ಲಿ 6 ಮಂದಿಯ ಸವಾರಿ; ಕ್ಯಾಮರಾ ನೋಡಿ ಏನು ಮಾಡಿದ್ರು ಗೊತ್ತಾ?
ಅಲ್ಲಿದ್ದ ಭದ್ರತಾ ಸಿಬ್ಬಂದಿ ಮತ್ತು ಹತ್ತಿರದ ಜನರು ಅವನನ್ನು ತಡೆಯಲು ಪ್ರಯತ್ನಿಸಿದಾಗಲೂ, ಆತನ ಕೋಪ ಕಡಿಮೆ ಯಾಗಿರಲಿಲ್ಲ. ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಅಷ್ಟು ಜನ ಪುರುಷರು ಅಲ್ಲಿದ್ದರೂ ಹಲ್ಲೆಯನ್ನು ತಡೆಯಲು ಸಾಧ್ಯವಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಈ ಕ್ರೂರ ವ್ಯಕ್ತಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಬರೆದುಕೊಂಡಿದ್ದಾರೆ.