Viral Video: ರೈಲ್ವೇ ಕ್ರಾಸಿಂಗ್‍ನಲ್ಲಿ ಕಾಯೋದ್ಯಾರು ಎನ್ನುತ್ತಾ ಹೆಗಲ ಮೇಲೆ ಬೈಕ್ ಹೊತ್ತ ವ್ಯಕ್ತಿ; ಬಾಹುಬಲಿ ಎಂದು ಕರೆದ ನೆಟ್ಟಿಗರು, ಇಲ್ಲಿದೆ ವಿಡಿಯೊ
Man Lifts Bike on His Shoulders: ರೈಲ್ವೆ ಕ್ರಾಸಿಂಗ್ ಗೇಟ್ ಹಾಕಿದ್ದ ವೇಳೆ ಕಾಯಲು ತಾಳ್ಮೆಯಿರದ ವ್ಯಕ್ತಿಯೊಬ್ಬ ತನ್ನ ಬೈಕನ್ನು ಹೆಗಲ ಮೇಲೆ ಎತ್ತಿಕೊಂಡು ಕ್ರಾಸಿಂಗ್‌ನ ಎದುರು ಭಾಗಕ್ಕೆ ನಡೆದುಕೊಂಡು ಹೋಗಿದ್ದಾನೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಕೆಲವು ಬಳಕೆದಾರರು ಈತನನ್ನು ಬಾಹುಬಲಿ ಎಂದು ಕರೆದಿದ್ರೆ, ಇನ್ನೂ ಕೆಲವರು ಟೀಕಿಸಿದ್ದಾರೆ.


ದೆಹಲಿ: ರೈಲ್ವೆ ಕ್ರಾಸಿಂಗ್ (Railway Crossing) ಗೇಟ್ ಹಾಕಿದ್ದ ವೇಳೆ ಕಾಯಲು ತಾಳ್ಮೆಯಿರದ ವ್ಯಕ್ತಿಯೊಬ್ಬ ತನ್ನ ಬೈಕನ್ನು ಹೆಗಲ ಮೇಲೆ ಎತ್ತಿಕೊಂಡು ಕ್ರಾಸಿಂಗ್‌ನ ಎದುರು ಭಾಗಕ್ಕೆ ನಡೆದುಕೊಂಡು ಹೋಗುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತನನ್ನು ಬಾಹುಬಲಿ ಎಂದು ಕರೆದಿದ್ದಾರೆ. 100 ಕೆಜಿಗಿಂತ ಹೆಚ್ಚು ತೂಕದ ಬೈಕನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆದಿದ್ದು, ಇದು ತೀವ್ರ ಬೆನ್ನು ನೋವಿಗೆ ಮತ್ತು ಸಂಧಿವಾತಕ್ಕೆ ಕಾರಣವಾಗಬಹುದು ಎಂದು ನೆಟ್ಟಿಗರು ಟೀಕಿಸಿದ್ದಾರೆ.
ಘಟನೆ ಎಲ್ಲಿ ನಡೆದಿದ್ದು ಎಂಬ ಬಗ್ಗೆ ತಿಳಿದು ಬಂದಿಲ್ಲ. ಆದರೆ ಅದು ಭಾರತದ ಗ್ರಾಮೀಣ ಪ್ರದೇಶದಂತೆ ಕಾಣುತ್ತದೆ. ಪ್ರಯಾಣಿಕರು ರೈಲ್ವೆ ಕ್ರಾಸಿಂಗ್‌ನಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಕಾಯುತ್ತಿದ್ದಾರೆ. ಸಿಗ್ನಲ್‌ಗಾಗಿ ಕಾಯಲು ಇಷ್ಟಪಡದ ಒಬ್ಬ ವ್ಯಕ್ತಿ, ತನ್ನ ಬೈಕನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾನೆ. ಆ ವ್ಯಕ್ತಿ ತನ್ನ ಕೈಗಳಿಂದ ಬೈಕನ್ನು ಎತ್ತಿ ರಸ್ತೆಯ ಇನ್ನೊಂದು ಬದಿಗೆ ಹೆಗಲ ಮೇಲೆ ಹೊತ್ತುಕೊಂಡು ಹೋಗುವುದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಅಷ್ಟು ಭಾರದ ಬೈಕ್ ಎತ್ತಿಕೊಂಡರೂ ಅವನು ಕಷ್ಟಪಡುತ್ತಿರುವಂತೆ ಕಾಣುತ್ತಿಲ್ಲ, ಹಾಗೆಯೇ ವಿಶ್ರಾಂತಿ ಕೂಡ ತೆಗೆದುಕೊಳ್ಳಲಿಲ್ಲ. ಬಹುತೇಕ ಮಂದಿ 10-20 ಕೆ.ಜಿ. ತೂಕ ಹೊರಲು ಕಷ್ಟಪಡುತ್ತಾರೆ. ಅಂಥವರ ಮಧ್ಯೆ, ದ್ವಿಚಕ್ರ ವಾಹನವನ್ನೇ ಹೆಗಲ ಮೇಲೆ ಹೊತ್ತು ಸಾಗಿದ್ದಾನೆ.
ವಿಡಿಯೊ ವೀಕ್ಷಿಸಿ:
रेलवे क्रॉसिंग की ऐसी की तैसी…..!!!
— kapil bishnoi (@Kapil_Jyani_) August 17, 2025
हम जहाँ खड़े होते है….. लाइन वहीं से शुरू होती है…!! pic.twitter.com/ZoibSNgyqW
ಇದನ್ನೂ ಓದಿ: Video Viral: ಗಾಲ್ಫ್ ಕೋರ್ಸ್‌ನಲ್ಲಿ ನೆಲಕ್ಕಪ್ಪಳಿಸಿದ ಲಘು ವಿಮಾನ; ಭಯಾನಕ ವಿಡಿಯೊ ವೈರಲ್
ಸಾಮಾನ್ಯವಾಗಿ ಬೈಕ್‌ಗಳು ಮತ್ತು ದ್ವಿಚಕ್ರ ವಾಹನಗಳು 150-200 ಕೆಜಿಗಿಂತ ಹೆಚ್ಚು ತೂಕವಿರುತ್ತವೆ. ಈ ವ್ಯಕ್ತಿ ಹೊತ್ತೊಯ್ಯುತ್ತಿರುವ ಬೈಕ್ ಹೀರೋ ಹೋಂಡಾ ಮಾದರಿಯಂತೆ ಕಾಣುತ್ತದೆ. ಇದು ಸರಾಸರಿ 112 ಕೆಜಿ ತೂಗುತ್ತದೆ ಎನ್ನಲಾಗಿದೆ. ಹೀಗಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರು ಈತನನ್ನು ಬಾಹುಬಲಿ ಎಂದು ಕರೆದಿದ್ದಾರೆ. ಈತನಿಗೆ ಭೂಮಿಯಿಂದಲೇ ಶಕ್ತಿ ಬರುತ್ತದೆ ಅಂತಾ ಕಾಣುತ್ತದೆ ಎಂದು ಬಳಕೆದಾರರೊಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದ್ರೆ ಇನ್ನೊಬ್ಬರು, ಐದು ನಿಮಿಷದಲ್ಲಿ ಏನಾಗುತ್ತದೆ? ಜೀವ ಇದ್ರೆ ಜೀವನ ಎಂದು ಕಾಮೆಂಟ್ ಮಾಡಿದ್ದಾರೆ.