ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಿಲೇಬಿಗೆ ‘ಸ್ಟ್ರಾಬೆರಿ ಲಸ್ಸಿ ಕಾಂಬಿನೇಷನ್; ಅಯ್ಯೋ ಇದೆಂಥಾ ವಿಚಿತ್ರ ಕಾಂಬಿನೇಷನ್‌!

Viral News: ಐಸ್ ಕ್ರೀಮ್ ರೋಲ್, ಲಿಚಿ ಮೊಮೊಸ್, ಜಾಮುನ್ ದೋಸೆ ಹೀಗೆ ವಿವಿಧ ಪಾಕ ವಿಧಾನದ ದೃಶ್ಯ ವೈರಲ್ ಆಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಹಸಿರು ಬಣ್ಣದ ‘ಮಚ್ಚಾ ಜಿಲೇಬಿ ಮತ್ತು ಗುಲಾಬಿ ಬಣ್ಣದ ‘ಸ್ಟ್ರಾಬೆರಿ ಲಸ್ಸಿಯ ಕಾಂಬಿನೇಷನ್ ದೃಶ್ಯ ವೊಂದು ವೈರಲ್ ಆಗಿದೆ. ಚಿನ್ನದ ಬಣ್ಣ ದಲ್ಲಿ ಸಕ್ಕರೆ ಪಾಕದಿಂದ ಹೊಳೆಯುವ ಜಿಲೇಬಿಯನ್ನು ಜಪಾನಿನ ಪ್ರಸಿದ್ಧ ಹಸಿರು ಚಹಾದ ಪುಡಿಯಾದ 'ಮಚ್ಚಾ' ಬಳಸಿ ಹಸಿರು ಬಣ್ಣಕ್ಕೆ ತಿರುಗಿಸಿದ್ದಾರೆ..ಈ ವಿಡಿಯೊ ನೋಡಿದ ಅನೇಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ‌.

‘ಮಚ್ಚಾ ಜಲೇಬಿ’ ಗೆ ‘ಸ್ಟ್ರಾಬೆರಿ ಲಸ್ಸಿ ಕಾಂಬಿನೇಷನ್

ನವದೆಹಲಿ, ಜೂ.6: ಸೋಷಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಆಹಾರ ಪ್ರಯೋಗದ ವಿಡಿಯೊಗಳು ವೈರಲ್ (Viral News) ಆಗುತ್ತವೆ. ಐಸ್ ಕ್ರೀಮ್ ರೋಲ್, ಲಿಚಿ ಮೊಮೊಸ್, ಜಾಮುನ್ ದೋಸೆ ಹೀಗೆ ವಿವಿಧ ಪಾಕ ವಿಧಾನ.ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಹಸಿರು ಬಣ್ಣದ ‘ಮಚ್ಚಾ ಜಿಲೇಬಿ ಮತ್ತು ಗುಲಾಬಿ ಬಣ್ಣದ ‘ಸ್ಟ್ರಾಬೆರಿ ಲಸ್ಸಿಯ ಕಾಂಬಿ ನೇಷನ್ ದೃಶ್ಯವೊಂದು ವೈರಲ್ ಆಗಿದೆ. ಚಿನ್ನದ ಬಣ್ಣದಲ್ಲಿ ಸಕ್ಕರೆ ಪಾಕದಿಂದ ಹೊಳೆಯುವ ಜಲೇಬಿಯನ್ನು ಜಪಾನಿನ ಪ್ರಸಿದ್ಧ ಹಸಿರು ಚಹಾದ ಪುಡಿಯಾದ 'ಮಚ್ಚಾ' ಬಳಸಿ ಹಸಿರು ಬಣ್ಣಕ್ಕೆ ತಿರುಗಿಸಿದ್ದಾರೆ..ಈ ವಿಡಿಯೊ ನೋಡಿದ ಅನೇಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ‌.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲವು ವಿಚಿತ್ರ ಖಾದ್ಯಗಳು ಜನರನ್ನು ಆಕರ್ಷಣೆ ಮಾಡಿದರೆ ಇನ್ನು ಕೆಲವು ನೋಡುಗರನ್ನು ಕೋಪಕ್ಕೆ ತಳ್ಳುತ್ತವೆ. ಅದೇ ರೀತಿ ಈ ವಿಚಿತ್ರ ಆಹಾರದ ಖಾದ್ಯವೊಂದು ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಭಾರತೀಯರನ್ನು ತೀವ್ರ ಆಶ್ಚರ್ಯ ಮತ್ತು ಅಸಮಾಧಾನಕ್ಕೆ ದೂಡಿದೆ.



ವೈರಲ್ ಆದ ದೃಶ್ಯದಲ್ಲಿ ಹಸಿರು ಬಣ್ಣದ ‘ಮಚ್ಚಾ ಜಲೇಬಿ’ ಮತ್ತು ಅದರ ಜೊತೆಗೆ ಗುಲಾಬಿ ಬಣ್ಣದ ‘ಸ್ಟ್ರಾಬೆರಿ ಲಸ್ಸಿ’ ಯನ್ನು ಸೇರಿಸಲಾಗಿದೆ. ಸಕ್ಕರೆ ಪಾಕದಲ್ಲಿ ಇರುವ ಜಲೇಬಿಗೆ ಜಪಾನಿನ ಪ್ರಸಿದ್ಧ ಹಸಿರು ಚಹಾದ ಪುಡಿಯ ಲೇಪನ ಮಾಡಲಾಗಿದೆ. ಆಹಾರದಲ್ಲಿ ಎಲ್ಲರೂ ಹೊಸತನವನ್ನು ಬಯಸುತ್ತಾರೆ..ಆದರೆ ಇದು ಬಹಳಷ್ಟು ಮಿತಿ ಮೀರಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

Viral Video: ಏರ್‌ಪೋರ್ಟ್‌ ರೋಡ್‌ನಲ್ಲಿ ಮಚ್ಚು ಹಿಡಿದು ವಿಲೀಂಗ್‌; ಯುವಕರ ಹುಚ್ಚಾಟ ಕ್ಯಾಮರಾದಲ್ಲಿ ಸೆರೆ

ಹೆಚ್ಚಿನವರು ​"ದಯವಿಟ್ಟು ಇದು AI ಚಿತ್ರವಾಗಿರಲಿ".. ನೋಡಲು ಬಹಳಷ್ಟು ಅಸಹ್ಯಕಾರವಾಗಿದೆ. ಜಿಲೇಬಿ ಮತ್ತು ಲಸ್ಸಿಯನ್ನು ಹಾಳುಮಾಡಲು ಇದೆಂಥ ಕೃತ್ಯ ಎಂದು ಬಳಕೆದಾರರೊಬ್ಬರು ಕಿಡಿಕಾರಿದ್ದಾರೆ. ಮತ್ತೊಬ್ಬರು ಸಾಮಾನ್ಯ ಜಲೇಬಿಗೆ ಹಸಿರು ಬಣ್ಣಹಾಕಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಇತ್ತೀಚೆಗೆ ಸಿಂಗಾಪುರದ ಕ್ಯಾಲ್ವಿನ್ ಲೀ ಎಂಬ ವ್ಯಕ್ತಿ ಕೋಕಾ ಕೋಲಾ ಮತ್ತು ಮೊಟ್ಟೆಗಳನ್ನು ಬಳಸಿ ನೂಡಲ್ಸ್ ತಯಾರು ಮಾಡುವ ವಿಡಿಯೊ ಕೂಡ ಬಹಳಷ್ಟು ವೈರಲ್ ಆಗಿತ್ತು. ಬಾಣಲೆಯಲ್ಲಿ ನೂಡಲ್ಸ್‌ ಹಾಕಿ ಅದಕ್ಕೆ ನೀರಿನ ಬದಲು ಕೋಕೋ ಕೋಲಾ ಹಾಕಿ ಬೇಯಿಸಿದ್ದಾನೆ. ನಂತರ ಇದಕ್ಕೆ ಎರಡು ಮೊಟ್ಟೆ ಗಳನ್ನು ಒಡೆದು ಹಾಕಿ ಈ ಖಾದ್ಯ ತಯಾರು ಮಾಡಿದ್ದಾನೆ.