ಹೈದರಾಬಾದ್: ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನದಲ್ಲಿ (Andhra Temple) ಭಾನುವಾರ ಭಕ್ತರೊಬ್ಬರು ಲಡ್ಡೂ 'ಪ್ರಸಾದ'ದಲ್ಲಿ ಜಿರಳೆ ಸಿಕ್ಕಿದೆ ಎಂದು ಹೇಳಿಕೊಂಡಿದ್ದು, ಲಡ್ಡುವಿನಲ್ಲಿರುವ ಸತ್ತ ಜಿರಳೆಯ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ (Viral News) ಹರಿಬಿಟ್ಟಿದ್ದಾರೆ. ಸರಶ್ಚಂದ್ರ ಕೆ ಎಂಬ ವ್ಯಕ್ತಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಜಿರಲೆ ಕಂಡು ಬಂದ ಕೂಡಲೇ ಅವರು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನೀಡಿದರು. ದೂರಿನಲ್ಲಿ ನಿರ್ಲಕ್ಷ್ಯದಿಂದ ಇಂತಹ ಘಟನೆ ಸಂಭವಿಸಿದೆ ಎಂದು ಉಲ್ಲೇಖಿಸಲಾಗಿದೆ.
ಜೂನ್ 29 ರಂದು ನಾನು ಶ್ರೀಶೈಲಂ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ದೇವರ ದರ್ಶನದ ಬಳಿಕ ಲಡ್ಡು ಪ್ರಸಾದವನ್ನು ತೆಗೆದುಕೊಂಡೆ. ಅದರ ಒಳಗೆ ಸತ್ತ ಜಿರಳೆ ಇತ್ತು ಎಂದು ಸರಶ್ಚಂದ್ರ ಕೆ ಹೇಳಿದ್ದಾರೆ. ದೇವಸ್ಥಾನದ ಸಿಬ್ಬಂದಿ 'ಪ್ರಸಾದ' ತಯಾರಿಸುವಾಗ ನಿರ್ಲಕ್ಷ್ಯ ವಹಿಸಿದ್ದಾರೆ. ದೇವಸ್ಥಾನದಲ್ಲಿ ಈ ರೀತಿ ಆಗಬಾರದು. ಶುಚಿತ್ವ ಕಾಪಾಡ ಬೇಕು. ದಯವಿಟ್ಟು ಗಮನಿಸಿ ಸಮಸ್ಯೆಯನ್ನು ಬಗೆಹರಿಸಿ ಎಂದು ಅವರು ಮನವಿ ಮಾಡಿದ್ದಾರೆ.
ಆದರೆ, ದೇವಸ್ಥಾನದ ಅಧಿಕಾರಿಯೊಬ್ಬರು ಸರಶ್ಚಂದ್ರ ಅವರ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಶ್ರೀಶೈಲಂ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ ರಾವ್ ಅವರ ಪ್ರಕಾರ, ಅವರು ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಂಡು ಲಡ್ಡೂಗಳನ್ನು ತಯಾರಿಸುತ್ತಾರೆ. "ಲಡ್ಡೂಗಳನ್ನು ತಯಾರಿ ಕೇಂದ್ರದ ಸಿಬ್ಬಂದಿಯ ನಿರಂತರ ಮೇಲ್ವಿಚಾರಣೆಯಲ್ಲಿ ತಯಾರಿಸಲಾಗುತ್ತದೆ ಮತ್ತು ತಯಾರಿಸಲಾಗುತ್ತದೆ. ಅದರಲ್ಲಿ ಜಿರಳೆ ಕಂಡುಬರುವ ಸಾಧ್ಯತೆಯಿಲ್ಲ. ಭಕ್ತರು ಈ ಬಗ್ಗೆ ಚಿಂತಿಸಬೇಡಿ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: ಕಳಪೆ ಆಹಾರ: ಕೇಟರಿಂಗ್ ವ್ಯವಸ್ಥಾಪಕರಿಗೆ ಶಾಸಕರ ಕಪಾಳಮೋಕ್ಷ
ಕಳೆದ ವರ್ಷ ತಿರುಪತಿಯ ಪ್ರಸಾದದಲ್ಲಿ ಹುಳುಗಳು ಸಿಕ್ಕಿವೆ ಎಂದು ಭಕ್ತರು ಆರೋಪಿಸಿದ್ದರು. ನಾನು ವಾರಂಗಲ್ನಿಂದ ತಿಮ್ಮಪ್ಪನ ದರ್ಶನಕ್ಕೆಂದು ತೆರಳಿದ್ದೆ, ಮೊಸರನ್ನ ಊಟ ಮಾಡುವ ಸಮಯದಲ್ಲಿ ಊಟದಲ್ಲಿ ಹುಳು ಸಿಕ್ಕಿತ್ತು. ಈ ವಿಚಾರವನ್ನು ಸಿಬ್ಬಂದಿಗೆ ತಿಳಿಸಿದೆ ಆದರೆ ಅವರ ಪ್ರತಿಕ್ರಿಯೆ ಆಘಾತಕಾರಿಯಾಗಿತ್ತು,ಇದು ಕೆಲವೊಮ್ಮೆ ಸಂಭವಿಸುತ್ತದೆ. ಸರ್ಕಾರ ಬದಲಾದರೂ ಈ ಸಮಸ್ಯೆಗಳು ಹಾಗೆಯೇ ಉಳಿದಿವೆ ಎಂದು ಉತ್ತರ ಕೊಟ್ಟಿದ್ದರು. ವಿಷಯ ತಿಳಿದ ನಂತರ ದೇವಾಲಯದ ಸಿಬ್ಬಂದಿ ತಮ್ಮನ್ನು ನಿಂದಿಸಲು ಮತ್ತು ಬೆದರಿಸಲು ಪ್ರಯತ್ನಿಸಿದರು ಎಂದು ಭಕ್ತ ಆರೋಪಿಸಿದ್ದರು. ದೇವಾಲಯವನ್ನು ನೋಡಿಕೊಳ್ಳುವ ಟ್ರಸ್ಟ್ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಈ ಆರೋಪವನ್ನು ತಳ್ಳಿಹಾಕಿತ್ತು.