ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮುಂಬೈಯಲ್ಲಿ ಮಹಿಳಾ ಬೈಕರ್‌ಗೆ ಕಿರುಕುಳ: ಮುಂಜಾನೆ 3 ಗಂಟೆಗೆ ಯುವತಿಯನ್ನು ಬೆನ್ನಟ್ಟಿದ ಕಾಮುಕ

Viral Video: ಮಹಿಳೆಯರ ಸುರಕ್ಷತೆ, ಮಹಿಳಾ ಸಬಲಿಕರಣ ಎಂದು ಸರ್ಕಾರ ಎಷ್ಟೇ ಕಾರ್ಯಕ್ರಮ ಹಮ್ಮಿಕೊಂಡರೂ ಕಿರುಕುಳ ಪ್ರಕರಣಕ್ಕೆ ಕಡಿವಾನ ಹಾಕಲು ಸಾಧ್ಯವಾಗಿಲ್ಲ. ಅದೇ ರೀತಿ ಮಹಾರಾಷ್ಟ್ರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮುಂಬೈಯ ಮರೈನ್ ಡ್ರೈವ್ ಬಳಿ ಬೆಳಗಿನ ಜಾವ ಯುವತಿಯೊಬ್ಬರನ್ನು ಕಾಮುಕನೊಬ್ಬ ಹಿಂಬಾಲಿಸಿದ್ದಾನೆ.

ಮುಂಬೈಯಲ್ಲಿ ಮುಂಜಾನೆ ಮಹಿಳೆಯನ್ನು ಹಿಂಬಾಲಿಸಿದ ವ್ಯಕ್ತಿ

ಮುಂಬೈ, ಮೇ 9: ಇತ್ತೀಚೆಗೆ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ಇದೀಗ ಮಹಾರಾಷ್ಟ್ರ ಮುಂಬೈಯಲ್ಲೂ ಮುಂಜಾನೆ ವೇಳೆ ಮಹಿಳಾ ಬೈಕರ್ ಒಬ್ಬರಿಗೆ ಕಿರುಕುಳ ನೀಡಿರುವ ಘಟನೆ ವರದಿಯಾಗಿದ್ದು, ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗಿದೆ. ಮುಂಬೈಯ ಮೆರೈನ್ ಡ್ರೈವ್ ಬಳಿ ಬೆಳಗಿನ ಜಾವ 3 ಗಂಟೆಗೆ ಕಾಮುಕನೊಬ್ಬ ಯುವತಿಯನ್ನು ಹಿಂಬಾಲಿಸಿದ್ದು ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.

ಮಹಿಳೆಯರ ಸುರಕ್ಷತೆ, ಮಹಿಳಾ ಸಬಲಿಕರಣ ಎಂದು ಸರಕಾರ ಎಷ್ಟೇ ಕಾರ್ಯಕ್ರಮ ಹಮ್ಮಿಕೊಂಡರೂ ಇಂತಹ ಕಿರುಕುಳ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಇದೀಗ ಮರೈನ್ ಡ್ರೈವ್ ಬಳಿ ಬೆಳಗಿನ ಜಾವ ತಮ್ಮನ್ನು ಕಾಮುಕನೊಬ್ಬ ಹಿಂಬಾಲಿಸಿದ್ದಾಗಿ ಮಹಿಳಾ ಬೈಕರ್ ವಿಡಿಯೊವೊಂದನ್ನು ಶೇರ್ ಮಾಡಿದ್ದಾರೆ. ಈ ದೃಶ್ಯ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳಗಳನ್ನು ಹುಟ್ಟು ಹಾಕಿದೆ. ಆಲ್ಕಾ ಫಿಟ್ ಎಂಬವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ದೃಶ್ಯ ಹಂಚಿ ಕೊಂಡಿದ್ದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ರೆಕಾರ್ಡ್ ಮಾಡಲಾಗಿದೆ.

ವಿಡಿಯೊ ನೋಡಿ:



ಯುವತಿ ತನ್ನ ಬೈಕ್‌ನಲ್ಲಿ ಸಂಚರಿಸುತ್ತಿದ್ದರು. ಈ ಸಂದರ್ಭದಲ್ಲಿ ಸ್ಕೂಟರ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹಿಂಬಾಲಿಸಿದ್ದಾನೆ. ವಾಹನ ಸವಾರಿಯ ನಡುವೆಯೂ ಆತ ತನ್ನ ಬಳಿಗೆ ಬರುತ್ತಲೇ ಇದ್ದ ಮತ್ತು ಹಲವಾರು ನಿಮಿಷಗಳ ಕಾಲ ದಿಟ್ಟಿಸುತ್ತಲೇ ಇದ್ದ ಎಂದು ಯುವತಿ ಹೇಳಿಕೊಂಡಿದ್ದಾರೆ. ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಿಂತಾಗ ಆತ ಗಾಡಿಯನ್ನು ಮಹಿಳೆಯ ಬೈಕ್ ಮುಂದೆಯೇ ತಂದು ನಿಲ್ಲಿಸಿ, ಪದೇ ಪದೆ ಆಕೆಯನ್ನು ದಿಟ್ಟಿಸಿ ನೋಡುತ್ತಿದ್ದ ಎನ್ನಲಾಗಿದೆ.

ಕೇವಲ 2 ಸೆಕೆಂಡ್‌ನಲ್ಲಿ 700 ಕಿ.ಮೀ ವೇಗದ ರೈಲು ಪ್ರಯಾಣ

ಮರೀನ್ ಡ್ರೈವ್ ಬಳಿ ಇದ್ದಾಗಲೂ ಆ ವ್ಯಕ್ತಿ ತನ್ನ ಸ್ಕೂಟರ್ ಅನ್ನು ನೇರವಾಗಿ ಮಹಿಳೆಯ ಬೈಕ್ ಮುಂದೆ ನಿಲ್ಲಿಸಿದ್ದ. ಬಳಿಕ ತುಸು ದೂರ ಸರಿದು ಈಕೆಯನ್ನೇ ಗಮನಿಸುತ್ತಿದ್ದ. ʼʼಇದು ನನಗೆ ಬಹಳಷ್ಟು ಮುಜುಗರ ತಂದಿದೆʼʼ ಎಂದು ಯುವತಿ ವಿಡಿಯೊದಲ್ಲಿ ಅಳಲು ತೋಡಿಕೊಂಡಿದ್ದಾರೆ. ಈ ದೃಶ್ಯ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಹಲವು ಪ್ರತಿಕ್ರಿಯೆ ವ್ಯಕ್ತವಾಗಿದೆ. ನೆಟ್ಟಿಗರು ಮುಂಬೈಯಲ್ಲಿ ರಾತ್ರಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಮುಂಬೈ ಪೊಲೀಸರು ಈ ದೃಶ್ಯ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.