ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಐ ನೆರವಿನಿಂದ ಕಳೆದುಹೋದ ಚಪ್ಪಲಿ ಹುಡುಕಿದ ವ್ಯಕ್ತಿ: ತಂತ್ರಜ್ಞಾನದ ಚಮತ್ಕಾರಕ್ಕೆ ನೆಟ್ಟಿಗರು ಫಿದಾ!

Viral News: ವ್ಯಕ್ತಿಯೊಬ್ಬ ಕಳೆದುಹೋದ ಚಪ್ಪಲಿಯನ್ನು ಹುಡುಕಲು ಎಐ ತಂತ್ರಜ್ಞಾನದ ಸಹಾಯ ಕೇಳಿದ್ದಾನೆ. ಒಂದು ಪಾದರಕ್ಷೆಯ ಚಿತ್ರವನ್ನು ತೆಗೆದುಕೊಂಡು ತನ್ನ ಕಾಣೆಯಾದ ಇನ್ನೊಂದು ಜೋಡಿಯನ್ನು ಗುರುತಿಸಲು ಸಹಾಯ ಮಾಡುವಂತೆ ಚಾಟ್ ಜಿಟಿಪಿಯನ್ನು ಕೇಳಿದ್ದಾನೆ. ಈ ಫೋಟೋದ ಆಧಾರದ ಮೇಲೆ ಎಐ ಚಪ್ಪಲಿ ಇರುವ ಸ್ಥಳವನ್ನು ಪತ್ತೆ ಮಾಡಿದೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎಐ ಚಮತ್ಕಾರಕ್ಕೆ ಫಿದಾ ಆಗಿದ್ದಾರೆ.

ಕಳೆದು ಹೋದ ಚಪ್ಪಲಿ ಪತ್ತೆ ಮಾಡಲು ಎಐ ತಂತ್ರಜ್ಞಾನ ಬಳಸಿದ ವ್ಯಕ್ತಿ

ನವದೆಹಲಿ,ಆ.16: ಇಂದು ಎಐ ತಂತ್ರಜ್ಞಾನ ದಿನನಿತ್ಯದ ಜೀವನದಲ್ಲೂ ಒಂದು ಭಾಗವಾಗಿ ಬಿಟ್ಟಿದೆ. ಏನೇ ಸಮಸ್ಯೆಗೆ ಉತ್ತರ ಕಂಡುಕೊಳ್ಳಬೇಕಾದರೂ ಜನ ಇದರ ಮೂಲಕವೇ ಉತ್ತರ ಹುಡುಕಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ವ್ಯಕ್ತಿಯೊಬ್ಬ ಕಳೆದುಹೋದ ಚಪ್ಪಲಿಯನ್ನು ಹುಡುಕಲು ಎಐ ತಂತ್ರಜ್ಞಾನದ ಸಹಾಯ ಕೇಳಿದ್ದಾನೆ. ಒಂದು ಪಾದರಕ್ಷೆಯ ಚಿತ್ರವನ್ನು ತೆಗೆದುಕೊಂಡು ತನ್ನ ಕಾಣೆಯಾದ ಇನ್ನೊಂದು ಜೋಡಿಯನ್ನು ಗುರುತಿಸಲು ಸಹಾಯ ಮಾಡುವಂತೆ ಚಾಟ್ ಜಿಟಿಪಿಯನ್ನು ಕೇಳಿದ್ದಾನೆ. ಈ ಫೋಟೋದ ಆಧಾರದ ಮೇಲೆ ಎಐ ಚಪ್ಪಲಿ ಇರುವ ಸ್ಥಳವನ್ನು ಪತ್ತೆ ಮಾಡಿದೆ. ಸದ್ಯ ಈ ಪೋಸ್ಟ್ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಎಐ ಚಮತ್ಕಾರಕ್ಕೆ ಫಿದಾ ಆಗಿದ್ದಾರೆ.

ಸಾವಿರಾರು ಪಾದರಕ್ಷೆಗಳ ರಾಶಿಯಲ್ಲಿ ತಮ್ಮ ಚಪ್ಪಲಿಗಳನ್ನು ಹುಡುಕುವುದು ಸವಾಲಿನ ಕೆಲಸವಾಗಿರುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ಹೊಸ ರೀತಿಯಲ್ಲಿ ಪರಿಹಾರ ಕಂಡುಕೊಂಡಿದ್ದಾರೆ. ತನ್ನ ಕಳೆದು ಹೋದ ಚಪ್ಪಲಿ ಹುಡುಕಲು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಚಪ್ಪಲಿ ಇರುವ ಜಾಗ ಪತ್ತೆ ಮಾಡಿದ್ದಾರೆ. ಸದ್ಯ ಈ ಘಟನೆಗೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿ:



ಬಳಕೆದಾರ ಶುಭಾಂಗ್ ಬೋರ್ಕರ್ ಈ ದೃಶ್ಯ ಶೇರ್ ಮಾಡಿದ್ದಾರೆ. 1,000 ಕ್ಕೂ ಹೆಚ್ಚು ಜೋಡಿ ಪಾದರಕ್ಷೆಗಳು ಇಲ್ಲಿದ್ದು ಜನದಟ್ಟಣೆಯ ಸ್ಥಳವನ್ನು ತೋರಿಸುತ್ತದೆ. ಪೋಸ್ಟ್ ಪ್ರಕಾರ, ಆ ವ್ಯಕ್ತಿ ತನ್ನ ಒಂದು ಚಪ್ಪಲಿಯನ್ನು ಅದೇ ರಾಶಿಯಲ್ಲಿ ಎಲ್ಲೋ ಕಳೆದು ಕೊಂಡಿದ್ದ. ಕೂಡಲೇ ಚಪ್ಪಲಿಗಳಿದ್ದ ಜಾಗದ ಫೋಟೋ ತೆಗೆದು,ಅದನ್ನು ಚಾಟ್‌ಜಿಪಿಟಿಗೆ ಅಪ್‌ಲೋಡ್ ಮಾಡಿ ತನ್ನ ಕಳೆದುಹೋದ ಚಪ್ಪಲಿ ಎಲ್ಲಿದೆ ಎಂದು ಗುರುತಿಸಲು ಸಹಾಯ ಕೋರಿದ್ದಾನೆ.

Viral Video: ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ; ಇದೇನು ನಿಮ್ಮ ಮನೆಯ ಆಸ್ತಿಯೇ? ನೆಟ್ಟಿಗರ ಪ್ರಶ್ನೆ

ಕೂಡಲೆ ಚಾಟ್‌ಬಾಟ್ ಚಪ್ಪಲಿ ಇರುವ ಸರಿಯಾದ ಸ್ಥಳ ಹುಡುಕಿ ಕೊಟ್ಟಿದೆ. ಸದ್ಯ ಈ ಪೋಸ್ಟ್ 2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಅನೇಕ ಬಳಕೆದಾರರು ChatGPT ಇಂತಹ ಸರಳ ದೈನಂದಿನ ಸಮಸ್ಯೆಯನ್ನು ಪರಿಹರಿಸಲು ಬಳಸಲಾಗುತ್ತಿದೆ ಎಂದರೆ ನಿಜಕ್ಕೂ ಶಾಕ್ ಎಂದು ಬರೆದುಕೊಂಡಿದ್ದಾರೆ.

ಬಳಕೆದಾರರೊಬ್ಬರು "ಚಾಟ್ ಜಿಟಿಪಿಯನ್ನು ಈ ರೀತಿ ಬಳಸಬಹುದೆಂದು ನನಗೆ ತಿಳಿದಿರಲಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇನ್ಮುಂದೆ ಅತ್ಯಂತ ಸುಂದರವಾದ ಜೋಡಿಯನ್ನು ಚಾಟ್ ಜಿಟಿಪಿ ಮೂಲಕವೇ ಆರಿಸಬಹುದು ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು ಇದರ ಬದಲು ಅತೀ ಸುಂದರವಾದ ಚಪ್ಪಲಿ ಜೋಡಿಯನ್ನು ತೆಗೆದುಕೊಂಡು ಹೋಗಲು ಅವಕಾಶ ಇತ್ತು ಎಂದು ಕಾಲೆಳೆದಿದ್ದಾರೆ.