ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶಾಪಿಂಗ್ ಮಾಲ್‌ನಲ್ಲಿ 'ಜೈ ಶ್ರೀ ರಾಮ್' ಹಾಡು: ಗ್ರಾಹಕರ ಎದುರೇ ಸ್ಪೀಕರ್ ಹಿಡಿದು ಓಡಾಡಿದ ವ್ಯಕ್ತಿ!

Viral Video: ಶಾಪಿಂಗ್ ಮಾಲ್ ನಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಸ್ಪೀಕರ್ ಹಿಡಿದು ಓಡಾಡಿದ್ದಾನೆ. "ಭಾರತ್ ಕಾ ಬಚ್ಚಾ ಬಚ್ಚಾ ಜೈ ಶ್ರೀ ರಾಮ್ ಬೋಲೇಗಾ" ಎಂದು ಸ್ಪೀಕರ್ ನಲ್ಲಿ ಹಾಡು ಪ್ಲೇ ಮಾಡುತ್ತಾ ಮಾಲ್ ನಲ್ಲಿ ಓಡಾಡಿದ್ದಾನೆ. ಈ ದೃಶ್ಯವನ್ನು ಕಂಡು ಅಲ್ಲಿಗೆ ಬಂದ ಗ್ರಾಹಕರು ಅಚ್ಚರಿ ವ್ಯಕ್ತ ಪಡಿಸಿದ್ದಾರೆ.‌ ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಪರ- ವಿರೋಧದ ಚರ್ಚೆ ನಡೆಯುತ್ತಿದೆ..

ಶಾಪಿಂಗ್ ಮಾಲ್‌ನಲ್ಲಿ ಸ್ಪೀಕರ್ ಹಿಡಿದು ಓಡಾಡಿದ ವ್ಯಕ್ತಿ

ನವದೆಹಲಿ,ಮೆ 6: ಸಾರ್ವಜನಿಕ ಸ್ಥಳದಲ್ಲಿ ಜೋರಾಗಿ ಮೊಬೈಲ್ ನಲ್ಲಿ ಮಾತನಾಡುವುದು, ಹಾಡು ಕೇಳುವುದು ಇತ್ಯಾದಿ ಶಬ್ದಗಳು ಸಾರ್ವಜನಿಕರಿಗೆ ಕಿರಿ ಕಿರಿ ಉಂಟು ಮಾಡುತ್ತದೆ. ಈ ನಡುವೆ ಶಾಪಿಂಗ್ ಮಾಲ್ ನಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಸ್ಪೀಕರ್ ಹಿಡಿದು ಓಡಾಡಿದ್ದಾನೆ. "ಭಾರತ್ ಕಾ ಬಚ್ಚಾ ಬಚ್ಚಾ ಜೈ ಶ್ರೀ ರಾಮ್ ಬೋಲೇಗಾ" ಎಂದು ಸ್ಪೀಕರ್ ನಲ್ಲಿ ಹಾಡು ಪ್ಲೇ ಮಾಡುತ್ತಾ ಮಾಲ್ ನಲ್ಲಿ ಓಡಾಡಿದ್ದಾನೆ. ಈ ದೃಶ್ಯವನ್ನು ಕಂಡು ಅಲ್ಲಿಗೆ ಬಂದ ಗ್ರಾಹಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.‌ ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು ಪರ- ವಿರೋಧದ ಚರ್ಚೆ ನಡೆಯುತ್ತಿದೆ.

ಸ್ಪೀಕರ್ ನಲ್ಲಿ ಜೋರಾಗಿ ಹಾಡನ್ನು ಪ್ಲೇ ಮಾಡುತ್ತಾ ಅಲ್ಲೇ ಸುತ್ತ ಮುತ್ತ ಓಡಾಡಿದ್ದಾನೆ. ಮೇರೆ ಭಾರತ್ ಕಾ ಬಚ್ಚಾ ಬಚ್ಚಾ ಜೈ ಶ್ರೀ ರಾಮ್ ಬೋಲೇಗಾ ಎಂಬ ಶೀರ್ಷಿಕೆಯ ಈ ಹಾಡು ಪೂಜಾ ಗೋಲ್ಹಾನಿ ಹಾಡಿರುವ ಪ್ರಸಿದ್ಧ ಹಿಂದೂ ಭಜನೆಯಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಆಚರಣೆಗಳ ಸಮಯದಲ್ಲಿ ಇದನ್ನು ನುಡಿಸಲಾಗುತ್ತದೆ. ಆದರೆ ಮಾಲ್ ನಲ್ಲಿ ಈ ರೀತಿ ಹಾಡು ಪ್ಲೇ ಮಾಡಿ ಕೇಳುವುದು ತಪ್ಪು ಎಂದು ಅನೇಕರು ಕಿಡಿಕಾರಿದ್ದಾರೆ‌.

ವಿಡಿಯೋ ನೋಡಿ:



ವೈರಲ್ ಆದ ವಿಡಿಯೊದಲ್ಲಿ ವ್ಯಕ್ತಿಯೂ ದೊಡ್ಡ ಪೋರ್ಟಬಲ್ ಸ್ಪೀಕರ್ ಅನ್ನು ಹೊತ್ತೊಯ್ಯುತಿರುವುದು ಕಾಣಬಹುದು. ಆ ವ್ಯಕ್ತಿ ಮಾಲ್‌ನ ಎಸ್ಕಲೇಟರ್ ಹತ್ತುವಾಗಲೂ ಹಾಡು ಜೋರಾಗಿ ಕೇಳುತ್ತಿತ್ತು. ಸುತ್ತಮುತ್ತಲಿದ್ದ ಜನರು ಆಶ್ಚರ್ಯದಿಂದ ಆತನನ್ನು ನೋಡುತ್ತಿದ್ದರು. ಆದರೆ ಕ್ಯಾರೇ ಎನ್ನದೆ ತನ್ನ ಪಾಡಿಗೆ ಓಡಾಡಿದ್ದಾನೆ. ವಿಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕ ಬಳಕೆದಾರರು ಈ ಕೃತ್ಯವನ್ನು ಟೀಕಿಸಿದ್ದು ಇದನ್ನು ಸಾರ್ವಜನಿಕ ಉಪದ್ರ ಎಂದು ಕರೆದಿದ್ದಾರೆ.

Viral Video: ಮದುವೆಗೆ ಕುಂಕುಮ ತರಲು ಮರೆತ ವರ; ಆಮೇಲಾಗಿದ್ದೇನು? ಇಲ್ಲಿದೆ ನೋಡಿ ವಿಡಿಯೊ

ಒಬ್ಬ ಬಳಕೆದಾರರು ಈತ ತುಂಬಾ ಧಾರ್ಮಿಕನಾಗಿದ್ದರೆ, ಅವನು ಇತರರ ಮೇಲೆ ಬಲವಂತವಾಗಿ ಭಕ್ತಿಗೀತೆಗಳನ್ನು ಕೇಳಿಸುತ್ತಿರಲಿಲ್ಲ ಎಂದಿದ್ದಾರೆ. ಮತ್ತೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಇಷ್ಟು ಜೋರಾಗಿ ಹಾಡು ಹಾಕುವುದು ತಪ್ಪು ಎಂದು ಬರೆದಿದ್ದಾರೆ. ಇದು ನಾಗರಿಕ ಪ್ರಜ್ಞೆಯ ಕೊರತೆ ಯಾವುದೇ ಭಕ್ತಿಯಾದರೂ ಸಾರ್ವಜನಿಕ ಸ್ಥಳದಲ್ಲಿ ಶಿಸ್ತು ಕಾಪಾಡಬೇಕು ಎಂದು ಕಿಡಿಕಾರಿದ್ದಾರೆ.