ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟಾರ್ಗೆಟ್ ತಲುಪಿಲ್ಲ ಎಂದು 200 ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ ಮ್ಯಾನೇಜರ್: ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಯುವತಿ

Viral News: ಖಾಸಗಿ ಕಂಪನಿಯೊಂದರಲ್ಲಿ ಅಮಾನವೀಯವಾಗಿ ನಡೆಸಿಕೊಂಡ ಘಟನೆಯೊಂದು ನಡೆದಿದೆ. ಚೀನಾದ ಹ್ಯಾಂಗ್‌ಝೌನಲ್ಲಿರುವ ಸಾಲ ಒದಗಿಸುವ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ನೀಡಿದ ಟಾರ್ಗೆಟ್ ಪೂರ್ಣಗೊಳಿಸಿಲ್ಲ ಎನ್ನುವ ಕಾರಣಕ್ಕೆ ಮ್ಯಾನೇಜರ್‌ ಯುವ ಉದ್ಯೋಗಿಗೆ ಶಿಕ್ಷೆ ನೀಡಿದ್ದು, ಆಕೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ದೈನಂದಿನ ಕೆಲಸದ ಗುರಿಗಳನ್ನು ತಲುಪಿಲ್ಲ ಎನ್ನುವ ಕಾರಣಕ್ಕೆ 200 ಸ್ಕ್ವಾಟ್‌ (ಬಸ್ಕಿ) ಮಾಡುವ ಶಿಕ್ಷೆಯನ್ನು ಮ್ಯಾನೇಜರ್ ನೀಡಿದ್ದ.

ಸಾಂದರ್ಭಿಕ ಚಿತ್ರ

ಚೀನಾ, ಆ. 27: ಎಷ್ಟೇ ಪ್ಯಾಕೇಜ್ ನೀಡಿದರೂ ಟಾರ್ಗೆಟ್ ಇರುವ ಜಾಬ್ ಆಯ್ಕೆ ಮಾಡಿಕೊಳ್ಳಲು ಹೆಚ್ಚಿನವರು ಹಿಂಜರಿಯುತ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಖಾಸಗಿ ಕಂಪನಿಯೊಂದರಲ್ಲಿ ಅಮಾನವೀಯವಾಗಿ ನಡೆಸಿಕೊಂಡ ಘಟನೆಯೊಂದು (Viral News) ನಡೆದಿದೆ. ಚೀನಾದ ಹ್ಯಾಂಗ್‌ಝೌನಲ್ಲಿರುವ ಸಾಲ ಒದಗಿಸುವ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ನೀಡಿದ ಟಾರ್ಗೆಟ್ ಪೂರ್ಣಗೊಳಿಸಲ್ಲ ಎನ್ನುವ ಕಾರಣಕ್ಕೆ ಯುವ ಉದ್ಯೋಗಿಯೊಬ್ಬರು ಕಠಿಣ ಶಿಕ್ಷೆ ನೀಡಲಾಗಿದ್ದು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಆಕೆ ದೈನಂದಿನ ಕೆಲಸದ ಗುರಿ ತಲುಪಿಲ್ಲ ಎನ್ನುವ ಕಾರಣಕ್ಕೆ 200 ಸ್ಕ್ವಾಟ್‌ (ಬಸ್ಕಿ) ಶಿಕ್ಷೆಯನ್ನು ಮ್ಯಾನೇಜರ್ ನೀಡಿದ್ದ.

ಸಂತ್ರಸ್ತೆ ಯಾಂಗ್ ಜೂನ್‌ನಲ್ಲಿ ಝೆಜಿಯಾಂಗ್‌ನ ಹ್ಯಾಂಗ್‌ಝೌನಲ್ಲಿರುವ ಸಾಲ ಒದಗಿಸುವ ಕಂಪನಿಗೆ ಸೇರಿದ್ದರು. ಇಲ್ಲಿ ಅವರು ಹಣಕಾಸು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಮುಖ್ಯವಾಗಿ ಗ್ರಾಹಕರಿಗೆ ಸಾಲ ಒದಗಿಸುವುದು, ಪ್ರತಿದಿನ 200 ಕರೆಗಳನ್ನು ಮಾಡುವುದು ಮತ್ತು ಹೊಸ ಗ್ರಾಹಕರನ್ನು ಸೇರಿಸುವುದು ಆಕೆಯ ಕೆಲಸವಾಗಿತ್ತು.

ಜುಲೈ 28ರಂದು ಯಾಂಗ್ ಗುರಿಗಳನ್ನು ತಲುಪಲು ವಿಫಲರಾಗಿದ್ದರು. ಇದಕ್ಕಾಗಿ 200 ಸ್ಕ್ವಾಟ್‌ಗಳನ್ನು ತೆಗೆಯಲು ಅಥವಾ ದಂಡ ಕಟ್ಟಲು ಮ್ಯಾನೇಜರ್ ಷರತ್ತು ವಿಧಿಸಿದ್ದ. ಹಣವಿಲ್ಲದ ಕಾರಣ ಯಾಂಗ್ 200 ಸ್ಕ್ವಾಟ್ಸ್ ಮಾಡಲು ಒಪ್ಪಿಕೊಂಡು, ಆ ವಿಡಿಯೊವನ್ನು ಮ್ಯಾನೇಜರ್‌ಗೆ ಸಾಕ್ಷಿಯಾಗಿ ಕಳುಹಿಸಿದರು. ಕೊನೆಯ ಕೆಲವು ಸ್ಕ್ವಾಟ್‌ಗಳನ್ನು ಮುಗಿಸಿದ ನಂತರ, ಯಾಂಗ್‌ಗೆ ನಿಲ್ಲಲು ಕಷ್ಟವಾಗಿದ್ದು ನಡೆಯಲು ಸಾಧ್ಯವಾಗದೆ ಕುಸಿದು ಬಿದ್ದಿದ್ದಾರೆ. ಶೀಘ್ರದಲ್ಲೇ ಅವರ ಕಾಲುಗಳಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ.

ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ!

ಐದು ದಿನಗಳ ನಂತರ ತೀವ್ರ ಅನಾರೋಗ್ಯ ಉಂಟಾಗಿ ಆಕೆ ಆಸ್ಪತ್ರೆಗೆ ತೆರಳಿದ್ದು, ಅಪಾಯಕಾರಿ ಸ್ನಾಯು ಕಾಯಿಲೆಯಿಂದ ಬಳಲುತ್ತಿರುವುದಾಗಿ ತಿಳಿಸಿದರು. ​ಅತಿಯಾದ ದೈಹಿಕ ಶ್ರಮದಿಂದ ಸ್ನಾಯುಗಳು ಹಾನಿಗೊಳಗಾಗಿ, ಮೂತ್ರಪಿಂಡಕ್ಕೆ ಹಾನಿಯಾಗಿದೆ. ಚಿಕಿತ್ಸೆಗಾಗಿ ಆಕೆ 1,400 ಯುವಾನ್ ಅಂದರೆ ಸುಮಾರು 19,000 ರುಪಾಯಿ ಖರ್ಚು ಮಾಡಬೇಕಾಯಿತು. ಕೊನೆಗೆ ಅವರು ಜುಲೈ 30ರಂದು ಕಂಪನಿಯನ್ನು ತೊರೆದರು.

​ಆಸ್ಪತ್ರೆಯ ವೆಚ್ಚ ಮತ್ತು ತಮಗಾದ ನಷ್ಟಕ್ಕೆ ಪರಿಹಾರ ಒದಗಿಸುವಂತೆ ಕಂಪನಿಯನ್ನು ಕೇಳಿದ್ದಾರೆ.​ ಮ್ಯಾನೇಜರ್ ಕಾರ್ಮಿಕ ನಿಯಮಗಳನ್ನು ಮೀರಿದ್ದಾಗಿ ಒಪ್ಪಿಕೊಂಡಿದ್ದರೂ, ಪರಿಹಾರ ನೀಡಲು ನಿರಾಕರಿಸಿದ್ದಾರೆ ಎಂದು ದೂರಿದ್ದಾರೆ. ಈ ಪ್ರಕರಣವು ಸೋಷಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದೆ. ''ಮ್ಯಾನೇಜರ್‌ನನ್ನು 15 ದಿನಗಳವರೆಗೆ ಬಂಧನದಲ್ಲಿಡಬೇಕು" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಯಾವುದೇ ಕೆಲಸವು ಆರೋಗ್ಯಕ್ಕಿಂತ ಮುಖ್ಯವಲ್ಲ" ಎಂದು ಬರೆದಿದ್ದಾರೆ.