ಹೊಸದೆಹಲಿ, ಆ. 15: ಮಾನ್ಸಿ ಠಾಕೂರ್ ಎನ್ನುವ ಯುವತಿ ಕನ್ವರ್ ಯಾತ್ರೆಯಲ್ಲಿ 61 ಲೀಟರ್ ನೀರು ಹೊತ್ತು ಹೆಜ್ಜೆ ಹಾಕುವ ಮೂಲಕ ಭಾರಿ (Viral News) ಸುದ್ದಿಯಲ್ಲಿದ್ದಾರೆ. ಅವರು ತಮ್ಮ ವಿಶಿಷ್ಟ ಕಂದು ಕಣ್ಣು ಹಾಗೂ ಸೌಂದರ್ಯದಿಂದಲೂ ಗಮನ ಸೆಳೆದಿದ್ದಾರೆ. ಹೀಗಾಗಿ ನೆಟ್ಟಿಗರು ಈ ಹಿಂದೆ ಭಾರಿ ಸುದ್ದಿ ಮಾಡಿದ ಕುಂಭಮೇಳದ ಮೊನಲಿಸಾಗೆ ಹೋಲಿಕೆ ಮಾಡುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಮಾನಸಿ ಠಾಕೂರ್ ತನ್ನನ್ನು ಮೊನಾಲಿಸಗೆ ಹೋಲಿಕೆ ಮಾಡಬೇಡಿ, ತನ್ನ ನಿಲುವು ಬೇರೆಯೇ ಎಂದು ಖಡಕ್ ಆಗಿ ಹೇಳಿದ್ದಾರೆ. ಸದ್ಯ ಅವರ ವಿಡಿಯೊ ವೈರಲ್ ಆಗಿದೆ.
ಮಾನ್ಸಿ ರಜಪೂತ್ ಎಂದೂ ಕರೆಯಲ್ಪಡುವ ಮಾನಸಿ ಠಾಕೂರ್, 61 ಲೀಟರ್ ನೀರು ಹೊತ್ತುಕೊಂಡು 180 ಕಿಲೋ ಮೀಟರ್ ಉದ್ದದ ಕನ್ವರ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಕುಂಭ ಮೇಳದ ಮೊನಲಿಸಾ ಜತೆ ಹೋಲಿಕೆ ಮಾಡಿರುವ ಬಗ್ಗೆ ಬೇಸರ ಹೊರಹಾಕಿದ್ದಾರೆ.
ವಿಡಿಯೊ ನೋಡಿ:
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಮಾನ್ಸಿ, ʼʼನನ್ನನ್ನು ಮೊನಾಲಿಸಾಗೆ ಹೋಲಿಸ ಬೇಡಿ. ನಾನು ಸನಾತನಿ ಹಾಗೂ ಶಿವನ ಭಕ್ತೆ. ತಾನು ಕೇವಲ ಭಕ್ತಿಯಿಂದಾಗಿ ಗುರುತಿಸಿಕೊಳ್ಳಲು ಬಯಸುತ್ತೇನೆ. ಹಾಗಾಗಿ ಯಾರಿಗೋ ನನ್ನನ್ನು ಹೊಲಿಸಬೇಡಿʼʼ ಎಂದು ಮನವಿ ಮಾಡಿದರು. ಅದರ ಜತೆ ಮೊನಾಲಿಸಾಳ ಮದುವೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ʼʼಮೊನಾಲಿಸಾ ಮುಸ್ಲಿಂ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ನಾನು ನನ್ನ ಹಿಂದೂ ನಂಬಿಕೆಯನ್ನು ಪ್ರತಿನಿಧಿಸುತ್ತಿದ್ದೇನೆ. ಹೀಗಾಗಿ ಅವರಿಗೆ ನನ್ನನ್ನು ಹೋಲಿಕೆ ಮಾಡುವುದು ಸರಿಯಲ್ಲʼʼ ಎಂದಿದ್ದಾರೆ. ತಮ್ಮದೇ ಆದ ಧಾರ್ಮಿಕ ಗುರುತನ್ನು ಬಯಸಿರುವ ಮಾನ್ಸಿ, ತನ್ನನ್ನು'ಕನ್ವರ್ ಯಾತ್ರೆಯ ವೈರಲ್ ಶೇರ್ನಿ ಎಂದು ಕರೆಯಬೇಕು ಎಂಬುದಾಗಿ ಮನವಿ ಮಾಡಿದ್ದಾರೆ.
ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ!
ಆರಂಭದಲ್ಲಿ ಮಾನ್ಸಿ ತನ್ನ ರೂಪ ಮತ್ತು ಮೊನಲಿಸಾ ಹೋಲಿಕೆಗಳಿಂದ ಜನಪ್ರಿಯರಾದರು. ಇದೀಗ ಶಿವನ ಮೇಲಿನ ಭಕ್ತಿ ಮತ್ತು ಕನ್ವರ್ ಯಾತ್ರೆಯ ಗುರುತನ್ನು ತೋರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 61 ಲೀಟರ್ ನೀರು ಹೊತ್ತು 180 ಕಿ.ಮೀ. ನಡೆದ ಮಾನ್ಸಿ ಠಾಕೂರ್, ಸದ್ಯ ಜಾಲತಾಣಗಳಲ್ಲಿ ಕೇವಲ ಸೌಂದರ್ಯಕ್ಕಷ್ಟೇ ಅಲ್ಲದೆ ಭಕ್ತಿ ಸಾರುವ ಮೂಲಕವೂ ಗಮನ ಸೆಳೆದಿದ್ದಾರೆ.
ಪ್ರಯಾಗ್‌ರಾಜ್ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತ ತನ್ನ ಆಕರ್ಷಕ ಕಣ್ಣುಗಳಿಂದಲೇ ಮೊನಲಿಸಾ ಈ ಹಿಂದೆ ಜನಪ್ರಿಯರಾಗಿದ್ದರು. ಇದೀಗ ತಮ್ಮ ಪ್ರಿಯಕರ ಫರ್ಮಾನ್ ಖಾನ್ ಅವರನ್ನು ಕೇರಳಂನ ತಿರುವನಂತಪುರಂ ಬಳಿ ವಿವಾಹವಾಗಿ ವಿವಾದಕ್ಕೆ ಗುರಿಯಾಗಿದ್ದಾರೆ.