ಇಂದೋರ್: ನಮ್ಮ ದೇಶದಲ್ಲಿ ರಸ್ತೆಯಲ್ಲಿ ಸಂಚರಿಸುವಾಗ ವಾಹನ ಸವಾರರ ನಡುವೆ ಜಗಳವಾಗುವುದು ಸರ್ವೇ ಸಾಮಾನ್ಯ. ಇದು ದಿನನಿತ್ಯದ ಘಟನೆ. ಬಹುಶಃ ಇಂತಹ ದೃಶ್ಯವನ್ನು ನೀವೂ ನೋಡಿರಬಹುದು. ಅವು ಕಿರಿಕಿರಿ ಉಂಟುಮಾಡಬಹುದು, ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕೆಲವೊಮ್ಮೆ, ಈ ಘಟನೆಗಳು ತುಂಬಾ ತಮಾಷೆಯಾಗಿರುತ್ತವೆ. ಉದಾಹರಣೆಗೆ, ಒಬ್ಬ ಚಾಲಕ (driver) ನಿರಂತರವಾಗಿ ಹಾರ್ನ್ ಮಾಡುತ್ತಾ ಇನ್ನೊಬ್ಬ ಚಾಲಕನನ್ನು ಕೆರಳಿಸುತ್ತಾನೆ, ಇದು ಮಾತಿನ ಚಕಮಕಿಗೆ ಕಾರಣವಾಗುತ್ತದೆ. ಅಥವಾ ಪೈಪೋಟಿಗೆ ಇಳಿದಂತೆ ರಸ್ತೆಯು ರೇಸ್ ಕೋರ್ಸ್ ಆಗಿ ಮಾರ್ಪಾಡಾಗುತ್ತದೆ. ಕೆಲವೊಮ್ಮೆ ಹೊಡೆದಾಟವೂ ನಡೆಯಬಹುದು. ಇದೇ ರೀತಿಯ ದೃಶದ ವಿಡಿಯೊವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗುತ್ತಿದೆ.
X ನಲ್ಲಿ ವೈರಲ್ ಆಗುತ್ತಿರುವ ವಿಡಿಯೊದಲ್ಲಿ, ಮೋಟಾರ್‌ಬೈಕ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಪರಸ್ಪರ ಅಪಾಯಕಾರಿಯಾಗಿ ಹತ್ತಿರದಲ್ಲಿ ಸವಾರಿ ಮಾಡುವುದನ್ನು ರೆಕಾರ್ಡ್ ಮಾಡಲಾಗಿದೆ. ಇದು ಈಗಾಗಲೇ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಸೂಚಿಸುತ್ತದೆ. ಶೀಘ್ರದಲ್ಲೇ, ಒಬ್ಬ ಬೈಕ್ ಸವಾರ ಇನ್ನೊಬ್ಬನನ್ನು ಕಾಲಿನಿಂದ ಒದ್ದಿದ್ದಾನೆ. ಇದರಿಂದಾಗಿ ಅವನು ಕ್ಷಣಾರ್ಧದಲ್ಲಿ ಸಮತೋಲನ ಕಳೆದುಕೊಂಡಿದ್ದಾನೆ. ಕೂಡಲೇ ಇಬ್ಬರೂ ತಮ್ಮ ಬೈಕ್‍ಗಳಿಂದ ಇಳಿದು ಜಗಳವಾಡಿದ್ದಾರೆ. ಈ ಘಟನೆಯು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಇದನ್ನೂ ಓದಿ: Viral Video: ಚಲಿಸುವ ರೈಲಿನಲ್ಲಿ ಮೋಜು ಮಾಡಲು ಹೋಗಿ ಕೆಳಗೆ ಬಿದ್ದ ಯುವತಿ; ಈ ವಿಡಿಯೊ ನಿಜವೋ, ನಕಲಿಯೊ?
ಪುರುಷರು ರಸ್ತೆಯ ಮಧ್ಯದಲ್ಲಿ ತಮ್ಮ ಬೈಕುಗಳನ್ನು ನಿಲ್ಲಿಸಿ ಪರಸ್ಪರ ಹೊಡೆದಾಡಲು ಪ್ರಾರಂಭಿಸಿದ್ದಾರೆ. ಒಬ್ಬ ವ್ಯಕ್ತಿ ಕಪಾಳಮೋಕ್ಷ ಮಾಡಿದಾಗ, ಇನ್ನೊಬ್ಬ ಹೊಡೆದಿದ್ದಾನೆ. ಇಬ್ಬರೂ ಪರಸ್ಪರ ಹೊಡೆದಾಟ ನಡೆಸಿದ್ದಾರೆ. ಜನರು ಕುತೂಹಲದಿಂದ ಏನಾಗುತ್ತಿದೆ ಎಂದು ವೀಕ್ಷಿಸಲು ಸ್ಥಳದಲ್ಲಿ ಜಮಾಯಿಸಿದರು. ಕಾಲಿನಿಂದ ಒದ್ದಾತ ಇನ್ನೊಬ್ಬ ವ್ಯಕ್ತಿಯನ್ನು ಕೆಳಕ್ಕೆ ಬೀಳಿಸಿದ್ದಾನೆ. ನಂತರ ಅವನ ಮುಖಕ್ಕೆ ಹೊಡೆದಿದ್ದಾನೆ. ಅಲ್ಲಿಗೆ ವಿಡಿಯೊ ಕೊನೆಗೊಳ್ಳುತ್ತದೆ.
ವಿಡಿಯೊ ವೀಕ್ಷಿಸಿ:
ಈ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದಕ್ಕೆ ಯಾರಾದರೂ WWE ವ್ಯಾಖ್ಯಾನವನ್ನು ಸೇರಿಸಬಹುದೇ? ಎಂದು ಒಬ್ಬ ಬಳಕೆದಾರರು ಹಾಸ್ಯಮಯವಾಗಿ ಬರೆದಿದ್ದಾರೆ. ಕೊನೆಗೂ ಮೌಖಿಕ ಯುದ್ಧವಿಲ್ಲ, ಇದು ಬಾಲಿವುಡ್ ಶೈಲಿಯ ಹೋರಾಟ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ಧೂಮ್ ಚಲನಚಿತ್ರದಿಂದ ಸ್ಫೂರ್ತಿ ಪಡೆದಿರಬಹುದು ಎಂದು ಮತ್ತೊಬ್ಬರು ಹೇಳಿದರು. ಆ ಪಂಚ್‌ಗಳು ಒಂದು ಮೈಲಿ ದೂರದಿಂದ ಬರುವುದನ್ನು ನೋಡಬಹುದು ಎಂದು ಮಗದೊಬ್ಬರು ಹಾಸ್ಯಚಟಾಕಿ ಹಾರಿಸಿದರು.
ಸಿನಿಮಾ ಕ್ಷೇತ್ರದ ಇಬ್ಬರು ಸ್ಟಂಟ್ ಮಾಸ್ಟರ್‌ಗಳು ಜಗಳವಾಡುತ್ತಿರುವಂತೆ ನಟಿಸುತ್ತಿದ್ದಾರೆ. ಹಿನ್ನೆಲೆ ಧ್ವನಿ ಡಿಶುಂ ಡಿಶುಂ ಎಂಬುದು ಮಾತ್ರ ಕೇಳಿಸುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ತಮಾಷೆ ಮಾಡಿದ್ದಾರೆ. ಇದಕ್ಕಾಗಿಯೇ ನಾನು ನನ್ನ ಇಂಟರ್ನೆಟ್ ಬಿಲ್‌ಗಳಿಗೆ ಪಾವತಿಸುತ್ತೇನೆ ಎಂದು ಮತ್ತೊಬ್ಬ ವ್ಯಕ್ತಿ ಹಂಚಿಕೊಂಡಿದ್ದಾರೆ. ಇಲ್ಲಿ ಯಾರಿಗೂ ತಾಳ್ಮೆಯಿಲ್ಲ. ಕಾರು ಚಾಲಕರು ತಾವು ರಾಜರೆಂದು ಭಾವಿಸುತ್ತಾರೆ. ಮಾಲೀಕರು ತಾವು ಚಕ್ರವರ್ತಿಗಳೆಂದು ಭಾವಿಸುತ್ತಾರೆ. ನಮ್ಮ ದೇಶವಾಸಿಗಳನ್ನು ಯಾವತ್ತೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ.