Viral Video: ಕುಸ್ತಿ ಅಖಾಡವಾಗಿ ಮಾರ್ಪಟ್ಟ ಮೆಟ್ರೋ; ವಿಡಿಯೋ ನೋಡಿ
Metro Turns into WWE Arena: ದೆಹಲಿ ಮೆಟ್ರೋದಲ್ಲಿ ಇಬ್ಬರು ಪುರುಷರ ನಡುವೆ ಹೊಡೆದಾಟ ಪ್ರಾರಂಭವಾದ ಘಟನೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಾತಿನ ಚಕಮಕಿ ಬೆಳೆದು ಬಳಿತ ಕುಸ್ತಿ ಅಕಾಡವಾಗಿ ಮಾರ್ಪಟ್ಟಿದೆ. ಇದೆಲ್ಲಾ ಮಾಮೂಲಿ ಎಂದು ನೆಟ್ಟಿಗರು ಹೇಳಿದ್ದಾರೆ.

-

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋ (Delhi Metro) ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಾರಿ, ಅದರ ಒಂದು ಬೋಗಿಯೊಳಗೆ ಭಾರಿ ಜಗಳ, ಹೊಡೆದಾಟವಾಗಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಸಾಮಾನ್ಯ ಸವಾರಿಯಾಗಬೇಕಿದ್ದದ್ದು ಅನಿರೀಕ್ಷಿತವಾಗಿ ಕುಸ್ತಿ ಅಖಾಡವಾಗಿ ಮೆಟ್ರೋ ಮಾರ್ಪಾಡಾಯಿತು. ಇಬ್ಬರು ಪುರುಷರು ತೀವ್ರ ಹೊಡೆದಾಟದಲ್ಲಿ ತೊಡಗಿದ್ದಾರೆ.
ಕೆಲವು ಸೆಕೆಂಡುಗಳ ಕಾಲ ನಡೆದ ಹೊಡೆದಾಟದ ದೃಶ್ಯವನ್ನು ಸಹ ಪ್ರಯಾಣಿಕನೊಬ್ಬ ರೆಕಾರ್ಡ್ ಮಾಡಿದ್ದು, ಯಾವುದೋ ವಿಷಯದ ಬಗ್ಗೆ ನಡೆದ ವಾಗ್ವಾದದ ಪರಿಣಾಮವಾಗಿ ಜಗಳ ಪ್ರಾರಂಭವಾಗಿದೆ. ಆದರೆ ಕೆಲವೇ ಸೆಕೆಂಡುಗಳಲ್ಲಿ, ಧ್ವನಿಗಳು ಏರಿದವು, ಕೋಪ ಭುಗಿಲೆದ್ದಿತ್ತು. ಮಾತಿನ ಚಕಮಕಿ ಬೆಳೆದು ಕೊನೆಗೆ ಕೈ ಕೈ ಮಿಲಾಯಿಸಲಾಗಿದೆ.
ವಿಡಿಯೊದಲ್ಲಿ, ಒಬ್ಬ ವ್ಯಕ್ತಿ ಇನ್ನೊಬ್ಬನನ್ನು ತಳ್ಳುತ್ತಿರುವುದು ಕಂಡುಬಂದಿದೆ. ಆ ವ್ಯಕ್ತಿಗೆ ಹೊಡೆದು ನೆಲಕ್ಕೆ ಬೀಳಿಸಿದ್ದಾನೆ. ಕೆಳಕ್ಕೆ ಬಿದ್ದರೂ ಕೂಡಲೇ ಎದ್ದ ಆ ವ್ಯಕ್ತಿಯು ಕೂದಲು ಹಿಡಿದು ಗುದ್ದಾಡಿದ್ದಾನೆ. ಒಂದೇ ಕೋಚ್‌ನಲ್ಲಿ ಈ ಇಬ್ಬರು ಪ್ರಯಾಣಿಕರೊಂದಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಈ ನಾಟಕೀಯ ದೃಶ್ಯವನ್ನು ವೀಕ್ಷಿಸುತ್ತಾ ನಿಂತಿದ್ದಾರೆ.
ವಿಡಿಯೊ ವೀಕ್ಷಿಸಿ:
Kalesh b/w Uncle and a guy inside delhi metro. pic.twitter.com/xt6NMKi5F1
— Ghar Ke Kalesh (@gharkekalesh) October 2, 2025
ಜಗಳ ಹೆಚ್ಚಾಗುತ್ತಿದ್ದಂತೆ, ಇಬ್ಬರು ಪುರುಷರು ಸೀಟಿಗಾಗಿ ಕುಸ್ತಿಯಾಡುತ್ತಾ ಎಡವಿ ಬೀಳುತ್ತಾ, ಹಿಂದೆ ಸರಿಯಲು ನಿರಾಕರಿಸುತ್ತಿರುವುದು ಕಂಡುಬಂದಿತು. ಆದರೆ ಸಹ ಪ್ರಯಾಣಿಕರು ಅಂತರ ಕಾಯ್ದುಕೊಂಡರು. ಕೊನೆಗೆ ಕೆಲವರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರು. ಬಹಳ ಹೋರಾಟದ ನಂತರ, ಅವರು ಇಬ್ಬರನ್ನೂ ಬೇರ್ಪಡಿಸುವಲ್ಲಿ ಯಶಸ್ವಿಯಾದರು.
ಇಬ್ಬರ ಜಗಳವನ್ನು ಬಿಡಿಸಿದ ನಂತರವೂ ವಾದವು ಸಂಪೂರ್ಣವಾಗಿ ಅಲ್ಲಿಗೇ ನಿಲ್ಲಲಿಲ್ಲ. ಕೋಪಗೊಂಡಿದ್ದ ವ್ಯಕ್ತಿಯೊಬ್ಬರು, ಮಾತಿನ ಚಕಮಕಿ ವೇಳೆ ಅಶ್ಲೀಲ ಭಾಷೆಯನ್ನು ಬಳಸಿದ್ದಕ್ಕಾಗಿ ಇನ್ನೊಬ್ಬರ ಮೇಲೆ ಕೂಗಿದ್ದಾರೆ. ಪುರುಷರಲ್ಲಿ ಒಬ್ಬರು ಅಶ್ಲೀಲ ಪದವನ್ನು ಬಳಸಿದ ನಂತರ, ಅದರಲ್ಲೂ ತಾಯಿ ಬಗ್ಗೆ ಕೆಟ್ಟದಾಗಿ ಮಾತು ಪ್ರಾರಂಭಿಸಿದರಿಂದ ಜಗಳ ಪ್ರಾರಂಭವಾಯಿತು ಎನ್ನಲಾಗಿದೆ.
ಇದನ್ನೂ ಓದಿ: Viral Video: ಗ್ರೇಟ್ ಎಸ್ಕೇಪ್ ಅಂದ್ರೆ ಇದೇ; ಹೋರ್ಡಿಂಗ್ ಕುಸಿದು ಆಟೋ ಚಾಲಕ ಕೂದಲೆಳೆ ಅಂತರದಲ್ಲಿ ಪಾರು: ವಿಡಿಯೊ ನೋಡಿ
ಈ ವಿಡಿಯೊ ಶೀಘ್ರ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಒಬ್ಬ ಬಳಕೆದಾರರು, ದೆಹಲಿ ಮೆಟ್ರೋದಲ್ಲಿ ಇದು ತುಂಬಾ ಸಾಮಾನ್ಯ ಎಂದು ಹೇಳಿದರು. ನೆಟ್‌ಫ್ಲಿಕ್ಸ್ ತುಂಬಾ ನೀರಸವಾಗಿದೆ. ಹೀಗಾಗಿ ನಾನು ದೈನಂದಿನ ನಾಟಕ ನೋಡಲು ದೆಹಲಿ ಮೆಟ್ರೋದಲ್ಲಿ ಹೋಗುತ್ತೇನೆ ಎಂದು ಮತ್ತೊಬ್ಬ ಬಳಕೆದಾರರು ವ್ಯಂಗ್ಯವಾಡಿದರು.