ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಗುವನ್ನು ರಕ್ಷಿಸಲು ಹೋಗಿ ಜೇನುನೊಣಗಳ ದಾಳಿಗೆ ತುತ್ತಾದ ನ್ಯಾಯಾಧೀಶೆ! ಭಯಾನಕ ವಿಡಿಯೋ ವೈರಲ್‌

ಮೆಕ್ಸಿಕೋದ ಗ್ವಾಡಾಲುಪೆ ಕ್ರೀಡಾಂಗಣದಲ್ಲಿ ದಿಢೀರನೆ ಜೇನುನೊಣಗಳ ಹಿಂಡು ದಾಳಿ ಮಾಡಿದೆ. ಈ ಸಂದರ್ಭದಲ್ಲಿ ತನ್ನ ಮೂರು ವರ್ಷದ ಮಗುವನ್ನು ರಕ್ಷಿಸಲು ಹೋದ ನ್ಯಾಯಾಧೀಶೆ ವೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮಗುವನ್ನು ರಕ್ಷಿಸಲು ಹೋದ ಸಂದರ್ಭದಲ್ಲಿ ಅವರ ದೇಹವನ್ನು ಜೇನುನೊಣಗಳು ತುಂಬಿ ಕೊಂಡಿದ್ದು ಅವುಗಳ ದಾಳಿಗೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಆತಂಕಕಾರಿ ಘಟನೆಯೂ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಜೇನುನೊಣಗಳ ದಾಳಿಗೆ ಸಾವನ್ನಪ್ಪಿದ ಮೆಕ್ಸಿಕೋದ ನ್ಯಾಯಾಧೀಶೆ

ಮೆಕ್ಸಿಕೋ, ಮೇ 15: ಮೆಕ್ಸಿಕೋದಲ್ಲಿ (Mexico) ಅಘಾತಕಾರಿ ಘಟನೆಯೊಂದು ಕಂಡು ಬಂದಿದೆ. ಮೆಕ್ಸಿಕೋದ ಗ್ವಾಡಾಲುಪೆ ಕ್ರೀಡಾಂಗಣದಲ್ಲಿ ದಿಢೀರನೆ ಜೇನುನೊಣಗಳ ಹಿಂಡು ದಾಳಿ ಮಾಡಿದೆ. ಈ ಸಂದರ್ಭದಲ್ಲಿ ತನ್ನ ಮೂರು ವರ್ಷದ ಮಗುವನ್ನು ರಕ್ಷಿಸಲು ಹೋದ ನ್ಯಾಯಾಧೀಶೆವೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮಗುವನ್ನು ರಕ್ಷಿಸಲು ಹೋದ ಸಂದರ್ಭದಲ್ಲಿ ಅವರ ದೇಹವನ್ನು ಜೇನುನೊಣಗಳು ತುಂಬಿ ಕೊಂಡಿದ್ದು ಅವುಗಳ ದಾಳಿಗೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಆತಂಕಕಾರಿ ಘಟನೆಯೂ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಜೇನುನೊಣಗಳ ತೀವ್ರವಾದ ದಾಳಿಯಿಂದ ತನ್ನ ಮೂರು ವರ್ಷದ ಮಗನನ್ನು ಮೆಕ್ಸಿಕೋದ ಉನ್ನತ ನ್ಯಾಯಾಲಯದ ನ್ಯಾಯಾಧೀಶೆ ಓಯುಕಿ ರಾಮಿರೆಜ್ ಬರ್ಸಿಯಾಗ ರಕ್ಷಿಸಲು ಹೋಗಿದ್ದಾರೆ. ಆರಂಭದಲ್ಲಿ ಅವುಗಳ ದಾಳಿಯಿಂದ ಅವರು ಬದುಕುಳಿದಿದ್ದು ಆಸ್ಪತ್ರೆಗೆ ಸಾಗಿಸಲಾಯಿತು‌. ಆದರೆ ತೀವ್ರವಾದ ಅಲರ್ಜಿ ಮತ್ತು ನೋಣಗಳ ಕುಟುಕುಗಳಿಂದ ಉಂಟಾದ ಉರಿ ಯೂತದಿಂದಾಗಿ ಅವರ ಸ್ಥಿತಿ ಹದಗೆಟ್ಟಿದೆ.

ವಿಡಿಯೋ ನೋಡಿ:



ಮೇ 3 ರಂದು ಮೆಕ್ಸಿಕೋದ ಜಕಾಟೆಕಾಸ್‌ನಲ್ಲಿರುವ ಗ್ವಾಡಾಲುಪೆ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದೆ. ಅಲ್ಲಿ ನೆರೆದಿದ್ದ ಜನರ ಮೇಲೆ ಧಿಡೀರನೆ ಜೇನು ನೊಣಗಳು ದಾಳಿ ಮಾಡಿವೆ..ಈ ವೇಳೆ ತನ್ನ ಮಗನ ಮೇಲೆ ನೋಣಗಳು ಕಚ್ಚದಂತೆ ಮಗುವನ್ನು ಪೂರ್ತಿಯಾಗಿ ಮುಚ್ಚಿ ರಕ್ಷಿಸಿದ್ದಾರೆ. ಮಗುವನ್ನು ರಕ್ಷಣೆ ಮಾಡಲು ಹೋಗಿ ಅವರು ಅವುಗಳಿಂದ ಕಚ್ಚಿಸಿಕೊಂಡಿದ್ದಾರೆ.

Viral News: ಶೇಕಡಾ 49 ಅಂಕ ಪಡೆದ SSLC ವಿದ್ಯಾರ್ಥಿಯ ಫೋಟೊ ಶೇರ್ ಮಾಡಿದ ವ್ಯಕ್ತಿಯ ವಿರುದ್ಧ ನೆಟ್ಟಿಗರ ಆಕ್ರೋಶ

ಗಾಯಗೊಂಡಿದ್ದರೂ ಸಹ, ಘಟನೆಯ ಸಮಯದಲ್ಲಿ ಪರಿಣಾಮ ಬೀರಿದ ತನ್ನ ಮಗು ಮತ್ತು ಅವರ ವೃದ್ಧ ತಂದೆಯ ಸುರಕ್ಷತೆಯ ಮೇಲೆ ಆಕೆ ಗಮನಹರಿಸಿದ್ದಳು. ತೀವ್ರವಾದ ಸ್ಥಿತಿಯಲ್ಲೇ ಆಕೆ ಸಹಾಯಕ್ಕಾಗಿ ಕೇಳಿಕೊಳ್ಳುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯ ನಂತರ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜೇನುನೊಣಗಳ ವಿಷದಿಂದಾಗಿ ಅವರ ದೇಹದಲ್ಲಿ ಅಲರ್ಜಿ ಉಂಟಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು.. ಸುಮಾರು ಒಂಬತ್ತು ದಿನಗಳಲ್ಲಿ ಚಿಕಿತ್ಸೆ ಪಡೆದರೂ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಜೇನುನೊಣ ಕುಟುಕುಗಳು ಅನಾಫಿಲ್ಯಾಕ್ಟಿಕ್ ಆಘಾತ, ಅಂಗಾಂಗ ವೈಫಲ್ಯ ಅಥವಾ ತೀವ್ರವಾದ ಉರಿಯೂತದ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು.

ರಾಮಿರೆಜ್ ಬುರ್ಸಿಯಾಗಾ ಕೇವಲ ಏಳು ತಿಂಗಳು ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು ಜಕಾಟೆಕಾಸ್ ನ್ಯಾಯಾಂಗ ಶಾಖೆಯಲ್ಲಿ ಎರಡು ದಶಕಗಳಿಗಿಂತ ಹೆಚ್ಚು ಅನುಭವವನ್ನು ಪಡೆದಿದ್ದರು..