ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral Video: "ಅತ್ಯಂತ ಮುರ್ಖತನದ ನಿರ್ಧಾರ"; 1.9 ಕೋಟಿ ರುಪಾಯಿಯ ಮೈಕ್ರೋಸಾಫ್ಟ್ ಉದ್ಯೋಗ ತ್ಯಜಿಸಿ ಅವಲತ್ತುಕೊಂಡ ಯುವಕ

ಪ್ರತಿಷ್ಠಿತ ಕಂಪನಿಯಲ್ಲಿ ಹೆಚ್ಚಿನ ಪ್ಯಾಕೇಜ್ ಹೊಂದಿದ ಕೆಲಸ ಸಿಗುವುದೇ ಅಪರೂಪ. ಇಂತಹ ಉದ್ಯೋಗವನ್ನು ಬಿಟ್ಟು ಬರುವ ನಿರ್ಧಾರವನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಆದರೆ ಸ್ವಿಟ್ಜರ್ಲೆಂಡ್‌ನ ಮೈಕ್ರೋಸಾಫ್ಟ್ ಕಂಪನಿಯಲ್ಲಿದ್ದ ಕ್ರಿಶ್ಚಿಯನ್ ಹಾರ್ಮ್ಸ್, ವರ್ಷಕ್ಕೆ ಸುಮಾರು 1.9 ಕೋಟಿ ರುಪಾಯಿ ಸಂಬಳ ಹೊಂದಿದ್ದ ಕೆಲಸಕ್ಕೆ ರಾಜೀನಾಮೆ ನೀಡಿದ್ದ. ಆದರೆ ಇದೀಗ ಈ ನಿರ್ಧಾರ ತೆಗೆದುಕೊಂಡಿದ್ದೇ ತಪ್ಪು ಎಂದು ಪಶ್ಚತಾಪ ಪಡುತ್ತಿದ್ದಾನೆ.

ಮೈಕ್ರೋಸಾಫ್ಟ್ ಕೆಲಸ ಬಿಟ್ಟ ನಿರ್ಧಾರ ತಪ್ಪು ಎಂದು ಬೇಸರ ಹೊರ ಹಾಕಿದ ಕ್ರಿಶ್ಚಿಯನ್ ಹಾರ್ಮ್ಸ್

ನವದೆಹಲಿ, ಜು. 13: ​ಆಸಕ್ತಿ ಇದ್ದ ಕ್ಷೇತ್ರದಲ್ಲೇ ಕೆಲಸ ಮಾಡಬೇಕೆಂದು ಬಯಸುವವರು ಅನೇಕರು ಇದ್ದಾರೆ‌. ಆದರೆ ಈ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಅನಿವಾರ್ಯವಾಗಿ ಸಿಕ್ಕ ಉದ್ಯೋಗದಲ್ಲಿ ಮುಂದುವರಿಯುವವರೇ ಬುತೇಕ ಮಂದಿ. ಪ್ರತಿಷ್ಠಿತ ಕಂಪನಿಯಲ್ಲಿ ಹೆಚ್ಚಿನ ಪ್ಯಾಕೇಜ್ ಹೊಂದಿದ ಉದ್ಯೋಗ ಸಿಗುವುದು ಅಪರೂಪ. ಇಂತಹ ಉದ್ಯೋಗವನ್ನು ಬಿಟ್ಟು ಬರುವ ನಿರ್ಧಾರವನ್ನು ಯಾರು ಕೂಡ ತೆಗೆದುಕೊಳ್ಳುವುದಿಲ್ಲ. ಆದರೆ ಸ್ವಿಟ್ಜರ್ಲೆಂಡ್‌ನ ಮೈಕ್ರೋಸಾಫ್ಟ್ ಕಂಪನಿಯಲ್ಲಿ ವರ್ಷಕ್ಕೆ ಸುಮಾರು 1.9 ಕೋಟಿ ರುಪಾಯಿ ಸಂಬಳಕ್ಕೆ ದುಡಿಯುತ್ತಿದ್ದ ಕ್ರಿಶ್ಚಿಯನ್ ಹಾರ್ಮ್ಸ್ ಎಂಬ ಯುವಕ ರಾಜೀನಾಮೆ ನೀಡಿ ಇದೀಗ ಪ್ರಾಯಶ್ಚಿತ ಪಡುತ್ತಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral Video) ಮಾಡಿರುವ ಆತನ ವಿಡಿಯೊ ಇದೀಗ ವೈರಲ್‌ ಆಗಿದೆ.

ಕೆಲವೊಮ್ಮೆ ವೈಯಕ್ತಿಕ ಕಾರಣ, ಕೆಲಸದ ಒತ್ತಡ ಹೀಗೆ ಹಲವು ಕಾರಣದಿಂದ ಕೆಲಸ ಬಿಡುವ ಯೋಚನೆ ಮಾಡುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಆತುರದ ನಿರ್ಧಾರವೇ ಮುಳ್ಳಾಗಿ ಕಾಡಬಹುದು ಎನ್ನುವುದಕ್ಕೆ ಕ್ರಿಶ್ಚಿಯನ್ ಹಾರ್ಮ್ಸ್‌ನ ಅನುಭವವೇ ಉತ್ತಮ ಉದಾಹರಣೆ. 27 ವರ್ಷದ ಕ್ರಿಶ್ಚಿಯನ್ ಹಾರ್ಮ್ಸ್ ಮೈಕ್ರೋಸಾಫ್ಟ್‌ನಲ್ಲಿ ಸುಮಾರು1.9 ಕೋಟಿ ರುಪಾಯಿ ಪ್ಯಾಕೇಜ್‌ನ ಕೆಲಸಕ್ಕೆ ಗುಡ್ ಬೈ ಹೇಳಿದ್ದ. ಆದರೆ ಉದ್ಯೋಗ ಬಿಟ್ಟ ನಂತರ ಅನುಭವಿಸಿದ ಹಿನ್ನಡೆಗಳು, ಪಾಠಗಳನ್ನು ಹಾರ್ಮ್ಸ್ ಹೇಳಿಕೊಂಡಿದ್ದಾನೆ.

ವಿಡಿಯೊ ನೋಡಿ:



ʼʼಮೈಕ್ರೋಸಾಫ್ಟ್ ಉದ್ಯೋಗ ತೊರೆದಿರುವುದು ನಾನು ಮಾಡಿದ ಅತ್ಯಂತ ಮೂರ್ಖತನದ ಕೆಲಸ. ಆ ಸಂಬಳ, ಆ ಸ್ಥಿರತೆ, ನಮಗೆ ತಂದುಕೊಡು ಗೌರವವೇ ಬೇರೆ‌. ಆದರೆ ನಾನು ಮಾಡಿದ್ದು ಸರಿ ಎಂದು ನನ್ನ ಮನಸ್ಸಿಗೆ ಗೊತ್ತಿತ್ತು. ಆದರೂ ಕೆಲವು ದಿನಗಳ ಕಾಲ ಕಾಡುವ ಈ‌ ನೋವು ನಿಜಕ್ಕೂ ಬೇಸರದ ಸಂಗತಿʼʼ ಎಂದಿದ್ದಾನೆ.

ನೆರೆಮನೆಯ ಯುವಕನಿಂದನೇ ಕಿರುಕುಳ; ವಿಡಿಯೊ ಮಾಡಿದ ಅಪ್ರಾಪ್ತ ಬಾಲಕಿ

ʼʼಯಾವುದೇ ​ಕೆಲಸ ಅಥವಾ ನಿರ್ದಿಷ್ಟ ಯೋಜನೆ ಇಲ್ಲದೆ ಆಸ್ಟ್ರೇಲಿಯಾಕ್ಕೆ ಸ್ಥಳಾಂತರಗೊಂಡಿದ್ದೆ. ಕೈಯಲ್ಲಿದ್ದ ಹಣ ಮುಗಿಯಲು 5 ತಿಂಗಳು ಮಾತ್ರ ಇತ್ತು. ಇದಕ್ಕಾಗಿ ನಾನು ಒಂದು ಉದ್ಯಮವನ್ನು ಪ್ರಾರಂಭಿಸಲು ತಿಂಗಳುಗಟ್ಟಲೆ ಶ್ರಮಿಸಿದೆ. ಆದರೆ ಇದು ನಿಜಕ್ಕೂ ಮಾಡಬೇಕಿತ್ತೇ ಎಂದು ಪ್ರಶ್ನಿಸಿಕೊಳ್ಳಲಿಲ್ಲ. ಇದಕ್ಕೆ ಸೂಕ್ತ ಮಾರುಕಟ್ಟೆ ಇದ್ಯಾ ಎಂದು ಪರಿಶೀಲಿಸಲಿಲ್ಲ. ಹೀಗಿ ಇದರರಲ್ಲಿ ಯಶಸ್ಸು ಪಡೆಯಲಿಲ್ಲʼʼ ಎಂದು ಅನುಬವ ಹಂಚಿಕೊಂಡಿದ್ದಾನೆ.

ʼʼ26ನೇ ವಯಸ್ಸಿನಲ್ಲಿ ಮೈಕ್ರೋಸಾಫ್ಟ್‌ ಕೆಲಸ ಬಿಟ್ಟೆ. ಬ್ರ್ಯಾಂಡ್ಗಳಿಗಾಗಿ ವಿಡಿಯೊ ಮಾಡಲು ಈ ನಿರ್ಧಾರ ತೆಗೆದುಕೊಂಡೆ. ಈ ಹೊತ್ತಿಗೆ ನಾನು ಒಬ್ಬ ಯಶಸ್ವಿ ಉದ್ಯಮಿಯಾಗಬೇಕಿತ್ತು. ಆದರೆ ಹಾಗೆ ಆಗಿಲ್ಲʼʼ ಎಂದು ತಿಳಿಸಿದ್ದಾನೆ.

ಹಾರ್ಮ್ಸ್‌ನ ಈ ಪ್ರಾಮಾಣಿಕ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅನೇಕರು ಬೆಂಬಲ ನೀಡಿದ್ದಾರೆ. ​ಒಬ್ಬರು, "ಜೀವನದಲ್ಲಿ ಸೋಲು ಎಂಬುದಿಲ್ಲ, ಪ್ರತಿಯೊಂದೂ ಹೊಸದನ್ನು ಕಲಿಯುವ ಅನುಭವ'' ಎಂದು ಧೈರ್ಯ ತುಂಬಿದ್ದಾರೆ. ಮತ್ತೊಬ್ಬರು, ʼʼಪ್ರತಿಯೊಂದು ಅನುಭವವು ನಿಮಗೆ ಏನನ್ನಾದರೂ ಕಲಿಸುತ್ತದೆʼʼ ಎಂದು ಬರೆದುಕೊಂಡಿದ್ದಾರೆ.