ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬ್ಲಿಂಕ್‌ಇಟ್‌ನಿಂದ ಮಧ್ಯರಾತ್ರಿ ಔಷಧ ಆರ್ಡರ್ ಮಾಡಿದ ವ್ಯಕ್ತಿಗೆ ಮೆಡಿಸಿನ್ ಜತೆ ಸಿಕ್ಕಿದ್ದು ವೈದ್ಯರ ಸಮಾಲೋಚನೆ: ಉಚಿತ ಸೇವೆಗೆ ಉದ್ಯಮಿ ಅರವಿಂದ್ ಅರೋರಾ ಮೆಚ್ಚುಗೆ

Viral News: ದಿನ ನಿತ್ಯ ಆಹಾರ ವಸ್ತುಗಳಿಂದ ಹಿಡಿದು ಮೆಡಿಸಿನ್, ಆಂಬ್ಯುಲೆನ್ಸ್ ಸೇವೆಯನ್ನು ಜನರು ಆ್ಯಪ್‌ ಮೂಲಕ ಪಡೆಯುತ್ತಿದ್ದಾರೆ‌. ಇದೀಗ ಬ್ಲಿಂಕ್‌ಇಟ್‌ನಿಂದ ಮಧ್ಯರಾತ್ರಿಯಲ್ಲಿ ತುರ್ತು ಔಷಧಗಳನ್ನು ಆರ್ಡರ್ ಮಾಡಿದ ವ್ಯಕ್ತಿಗೆ ಉಚಿತ ವೈದ್ಯರ ಸಮಾಲೋಚನೆ ಸಿಕ್ಕಿರುವ ಬಗ್ಗೆ ಉದ್ಯಮಿ ಅರವಿಂದ್ ಅರೋರಾ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಸೆ.13: ಆನ್‌ಲೈನ್ ಡೆಲಿವರಿ ಆ್ಯಪ್‌ಗಳಿಂದ ಬಹಳಷ್ಟು ಜನರ ಕೆಲಸ ಸುಲಭವಾಗ್ತಿದೆ. ದಿನ ನಿತ್ಯ ಆಹಾರ ವಸ್ತುಗಳಿಂದ ಹಿಡಿದು ಮೆಡಿಸಿನ್, ಆಂಬ್ಯುಲೆನ್ಸ್ ಸೇವೆಯನ್ನು ಜನರು ಆ್ಯಪ್‌ ಮೂಲಕ ಪಡೆಯುತ್ತಿದ್ದಾರೆ‌. ಇದೀಗ ಬ್ಲಿಂಕ್‌ಇಟ್‌ನಿಂದ ಮಧ್ಯರಾತ್ರಿಯಲ್ಲಿ ತುರ್ತು ಔಷಧಗಳನ್ನು ಆರ್ಡರ್ ಮಾಡಿದ ವ್ಯಕ್ತಿಗೆ ಉಚಿತ ವೈದ್ಯರ ಸಮಾಲೋಚನೆ ಸಿಕ್ಕಿರುವ ಬಗ್ಗೆ ಉದ್ಯಮಿ ಅರವಿಂದ್ ಅರೋರಾ ಸೋಷಿಯಲ್ ಮೀಡಿಯಾದಲ್ಲಿ (Viral News) ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ರಾತ್ರಿ 11:30ರಿಂದ ಮಧ್ಯರಾತ್ರಿಯ ಸುಮಾರಿಗೆ ಅವರ ಸೋದರ ಸಂಬಂಧಿಯೊಬ್ಬರಿಗೆ ಎದೆಯಲ್ಲಿ ಕಿರಿಕಿರಿ ಮತ್ತು ನೋವು ಕಾಣಿಸಿಕೊಂಡಿದ್ದಾಗಿ ವಿವರಿಸಿದ್ದಾರೆ. ಆರಂಭದಲ್ಲಿ ಕುಟುಂಬವು ಅವರನ್ನು ವೈದ್ಯರ ಬಳಿಗೆ ಕರೆದೊಯ್ಯಲು ಮುಂದಾಗಿದ್ದರೂ ಅವರು ಹಿಂಜರಿದಿದ್ದಾರೆ. ಆದರೆ ಅರೋರಾ ತುರ್ತು ಚಿಕಿತ್ಸೆಗೆ ನೆರವಾಗಬಹುದು ಎಂದು ಭಾವಿಸಿ ಬ್ಲಿಂಕ್‌ಇಟ್‌ ಆ್ಯಪ್‌ ಮೂಲಕ ಔಷಧಗಳನ್ನು ಆರ್ಡರ್ ಮಾಡಿದ್ದಾರೆ.

ವಿಡಿಯೊ ನೋಡಿ:



ಅದಾಗ್ಯೂ, ಮಾತ್ರೆಗಳು ತಲುಪುವ ಬದಲಿಗೆ ವೈದ್ಯರಿಂದ ಕರೆ ಬಂದಾಗಲೇ ಘಟನೆ ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಡಾ. ಪದಮ್ ಜ್ಞಾನ್ ಪ್ರಕಾಶ್ ಸಿಂಗ್ ಎಂಬ ವೈದ್ಯರು ಅರೋರಾ ಅವರ ಸೋದರ ಸಂಬಂಧಿಯೊಂದಿಗೆ ಮಾತನಾಡಿ ರೋಗದ ಲಕ್ಷಣಗಳು ಮತ್ತು ಔಷಧಿಯನ್ನು ಏಕೆ ಆರ್ಡರ್ ಮಾಡಲಾಗಿದೆ ಎಂಬುದರ ಕುರಿತು ಪ್ರಶ್ನಿಸಿದ್ದಾರೆ. ಅವರು ಆರ್ಡರ್‌ ಮಾಡಿದ್ದು ಹೃದಯಕ್ಕೆ ಸಂಬಂಧಿಸಿದ ಔಷಧವಾಗಿರುವುದರಿಂದ, ವೈದ್ಯರ ಸಲಹೆ ನೀಡಲು ಕರೆ ಮಾಡಿದ್ದು. ಅಲ್ಲದೆ ಈ ಔಷಧವನ್ನು ವೈದ್ಯರ ಸಲಹೆ ಇಲ್ಲದೆ ನೀಡುವಂತಿಲ್ಲ.ಗೀಗಾಗಿ ಖಚಿತಪಡಿಸಿಕೊಳ್ಳುವ ಸಲುವಾಗಿಯೂ ವೈದ್ಯರು ಕರೆ ಮಾಡಿದ್ದರು.

ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ

ಬಳಿಕ ಕರೆ ಮಾಡಿದ ವೈದ್ಯರು ರೋಗಿಯ ಲಕ್ಷಣಗಳನ್ನು ವಿವರವಾಗಿ ಕೇಳಿ ತಿಳಿದುಕೊಂಡಿದ್ದು ಔಷಧದ ಬಳಕೆ, ಅದನ್ನ ಹೇಗೆ ತೆಗೆದುಕೊಳ್ಳಬೇಕು ಮತ್ತು ಎದೆ ಉರಿ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಂದಿದ್ದರೆ ತಕ್ಷಣ ಏನು ಮಾಡಬೇಕು ಎಂದು ವಿವರಿಸಿದರು. ಈ ಘಟನೆಯ ನಂತರ, ಬ್ಲಿಂಕ್‌ಇಟ್ ಸಂಸ್ಥೆ ವೈದ್ಯರನ್ನು ಲಭ್ಯ ವಾಗುವಂತೆ ಮಾಡಿದ್ದಕ್ಕಾಗಿ ಅರೋರಾ ಶ್ಲಾಘಿಸಿದರು.

​"ನಾವು ಬರಿ ಮೆಡಿಸಿನ್ ಆರ್ಡರ್ ಮಾಡಿದ್ದೆವು. ಆದರೆ 500ರಿಂದ 1,000 ರೂಪಾಯಿ ಬೆಲೆಬಾಳುವ ವೈದ್ಯರ ಸಲಹೆ ನಮಗೆ ಉಚಿತವಾಗಿ ಸಿಕ್ಕಿತು. ಇದು ನಿಜವಾದ ಸೇವೆ'' ಎಂದು ಅರವಿಂದ್ ಅರೋರಾ ಬ್ಲಿಂಕ್‌ಇಟ್‌ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಅ ವೈರಲ್ ಆಗಿದ್ದು, ಸುಮಾರು ಏಳು ಮಿಲಿಯನ್ ವೀಕ್ಷಣೆ ಗಳಿಸಿದೆ. ಜನರು ತಾವು ನೆರವು ಪಡೆದುಕೊಂಡಿರುವ ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒಬ್ಬರು, ʼʼನಾನು ಬ್ಲಿಂಕ್‌ಇಟ್‌ಗೆ ತುಂಬಾ ಕೃತಜ್ಞನಾಗಿದ್ದೇನೆ. ನಿಜವಾದ ಸೇವೆ" ಎಂದು ಹೊಗಳಿದ್ದಾರೆ. ಮತ್ತೊಬ್ಬರು, ʼʼ​ಭಾರತದಲ್ಲಿ ಇಂತಹ ಸೇವೆ ಸಿಗುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆʼʼ ಎಂದಿದ್ದಾರೆ.