ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಗ್ರಾದಲ್ಲಿ ವಿದೇಶಿ ಮಹಿಳೆ ಮೇಲೆ ಕೋತಿ ದಾಳಿ: ಗಂಟೆಗಟ್ಟಲೆ ಕಾದರೂ ಬರದ ಆಂಬ್ಯುಲೆನ್ಸ್

Viral Video: ದಕ್ಷಿಣ ಕೊರಿಯಾದ ಪ್ರವಾಸಿಯೊಬ್ಬರು ತಾಜ್ ಮಹಲ್ ವೀಕ್ಷಣೆ ಭೇಟಿಕೊಟ್ಟ ಸಂದರ್ಭದಲ್ಲಿ ಅನಾಹುತವೊಂದು ನಡೆದಿದೆ. ಕೋತಿಯೊಂದು ಮಹಿಳೆಯ ಕೈಯನ್ನು ಕಚ್ಚಿ ಗಾಯಗೊಳಿಸಿದೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರೇಕ್ಷಣೀಯ ಸ್ಥಳದಲ್ಲಿ ಪ್ರವಾಸಿಗರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.

ಆಗ್ರಾದಲ್ಲಿ ವಿದೇಶಿ ಮಹಿಳೆ ಮೇಲೆ ಕೋತಿ ದಾಳಿ

ಲಖನೌ, ಜು. 29: ಉತ್ತರ ಪ್ರದೇಶದ ಆಗ್ರಾದಲ್ಲಿ ಪ್ರವಾಸಿ ಮಹಿಳೆಯೊಬ್ಬರ ಮೇಲೆ ಕೋತಿಯೊಂದು ದಾಳಿ ಮಾಡಿದ ಅಘಾತಕಾರಿ ಘಟನೆ ನಡೆದಿದೆ. ದಕ್ಷಿಣ ಕೊರಿಯಾದ ಪ್ರವಾಸಿ ತಾಜ್ ಮಹಲ್ ವೀಕ್ಷಿಸಲು ಭೇಟಿ ನೀಡಿದ ಸಂದರ್ಭದಲ್ಲಿ ಕೋತಿ ಮಹಿಳೆಯ ಕೈಯನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ಪ್ರೇಕ್ಷಣೀಯ ಸ್ಥಳದಲ್ಲಿ ಪ್ರವಾಸಿಗರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.

ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್ ಮಹಲ್‌ ಭಾರತದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪಾರಂಪರಿಕ ತಾಣಗಳಲ್ಲಿ ಒಂದು. ದಿನ ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಇಂತಹ ಸ್ಮಾರಕದ ಪೂರ್ವ ದ್ವಾರದ ಬಳಿ ಈ ಘಟನೆ ಸಂಭವಿಸಿದ್ದು, ಮಂಗವೊಂದು ಪ್ರವಾಸಿಯ ಕೈಗೆ ಕಚ್ಚಿ ಗಾಯಗೊಳಿಸಿದೆ. ಆದರೆ ತುರ್ತು ವೈದ್ಯಕೀಯ ಸೇವೆ ದೊರೆಯದೆ ಪ್ರವಾಸಿಗರು ಕಿಡಿಕಾರಿದ್ದಾರೆ.

ವಿಡಿಯೊ ನೋಡಿ:



​ಮಹಿಳೆಯ ಕೈನಲ್ಲಿ ತೀವ್ರ ರಕ್ತಸ್ರಾವ ಉಂಟಾಗಿದ್ದು, ನೋವಿನಿಂದ ನರಳಾಡಿದ್ದಾರೆ. ಸ್ಥಳೀಯರು ತಕ್ಷಣವೇ ಅವರ ನೆರವಿಗೆ ಧಾವಿಸಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಪ್ರವಾಸಿ ಮಹಿಳೆ ತನ್ನ ಗಾಯಗೊಂಡ ಕೈಯನ್ನು ಹಿಡಿದು ನರಳಾಡುತ್ತಿದ್ದಾರೆ. ಸ್ಥಳೀಯ ನಿವಾಸಿಗಳು ಅವರಿಗೆ ಹತ್ತಿರದ ಆಸ್ಪತ್ರೆಗೆ ತೆರಳಲು ರಸ್ತೆ ತೋರಿಸುತ್ತಿರುವುದು ಕಂಡು ಬಂದಿದೆ.

ಕೆಲಸದ ಸಮಯ ಮುಗಿದ್ರೂ ಮನೆಗೆ ಹೋಗಂಗಿಲ್ಲ; ಸಿಬ್ಬಂದಿಯನ್ನು ಲಾಕ್ ಮಾಡಿದ ಮ್ಯಾನೇಜರ್!

​ಅವರ ಜತೆಯಲ್ಲಿದ್ದ ಸಹ-ಪ್ರವಾಸಿಗರು ತೀವ್ರ ಆತಂಕದಿಂದ, "ನಾವು ಎಲ್ಲಿ ಹೋಗಬೇಕು?" ಎಂದು ಸ್ಥಳೀಯರನ್ನು ಕೇಳುತ್ತಾ ಭಯಾಭೀತರಾಗಿದ್ದಾರೆ. ಈ ಘಟನೆಯಲ್ಲಿ ತುರ್ತು ವೈದ್ಯಕೀಯ ಸೇವೆಗಳ ವಿಳಂಬವು ಟೀಕೆಗೆ ಗುರಿಯಾಗಿದೆ. ದಾಳಿಯ ನಂತರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದು ಆದಾಗ್ಯೂ, ಆಂಬ್ಯುಲೆನ್ಸ್ ಸುಮಾರು ಒಂದು ಗಂಟೆಯಾದರೂ ಬರಲಿಲ್ಲ. ಇದರಿಂದಾಗಿ ಗಾಯಗೊಂಡ ಪ್ರವಾಸಿ ನರಳುತ್ತ ಕಾಯಬೇಕಾಯಿತು.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಎಎಸ್‌ಐ ಹಿರಿಯ ಸಂರಕ್ಷಣಾ ಸಹಾಯಕರು , "ಮಾಹಿತಿ ಸಿಕ್ಕ ತಕ್ಷಣವೇ ನಮ್ಮ ತಂಡ ಸ್ಪಂದಿಸಿದ್ದು ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಗಿತ್ತು. ಆದರೆ ಚಾಲಕನ ನಿರ್ಲಕ್ಷ್ಯದಿಂದ ತಡವಾಗಿದೆʼʼ ಎಂದರು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಅಲ್ಲಿನ ಆಡಳಿತವನ್ನು ಟೀಕಿಸಿದ್ದಾರೆ. ʼʼಅವರ ಜತೆ ಗೈಡ್ ಇರಲಿಲ್ಲವೇ? ತಾಜ್ ಮಹಲ್‌ನಲ್ಲಿ ಆಡಳಿತ ಕಚೇರಿ ಇಲ್ಲವೇ?ʼʼ ಎಂದು ಪ್ರಶ್ನಿಸಿದ್ದಾರೆ.