ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಾಜ್ ಮಹಲ್ ಎದುರಿನ ಕಾರಂಜಿಯನ್ನೇ ವಾಟರ್ ಪಾರ್ಕ್ ಮಾಡಿಕೊಂಡ ವಾನರ ಸೇನೆ; ಬಿಸಿಲ ಬೇಗೆಯಿಂದ ಪಾರಾಗಲು ಕೂಲ್‌ ಐಡಿಯ

Viral Video: ನೀರಿನ ಅಭಾವದಿಂದಾಗಿ ಮನುಷ್ಯರು ಮಾತ್ರವಲ್ಲದೆ ಪ್ರಾಣಿಗಳೂ ಕೂಡ ತತ್ತರಿಸಿ ಹೋಗಿವೆ.‌ ಸರಿಯಾಗಿ ಆಹಾರವಿಲ್ಲದೆ, ದಣಿವು ನಿವಾರಿಸಿಕೊಳ್ಳಲು ನೀರಿಲ್ಲದೆ ನರಳಾಡುತ್ತಿವೆ. ಇತ್ತೀಚೆಗಷ್ಟೇ ಮಹಾರಾಷ್ಟ್ರದ ಬಿಸಿಲಿನ ತಾಪಕ್ಕೆ ಸುಸ್ತಾದ ಮಂಗಗಳು, ನೀರನ್ನು ಹುಡುಕಿಕೊಂಡು ಬಸ್ಸನ್ನು ತಡೆದು ನಿಲ್ಲಿಸಿದ್ದವು. ಇದೀಗ ವಾನರ ಸೇನೆಯೊಂದು ತಾಜ್ ಮಹಲ್‌ ಬಳಿಯ ಕಾರಂಜಿಯನ್ನೇ ವಾಟರ್ ಪಾರ್ಕ್ ಮಾಡಿಕೊಂಡ ವಿಡಿಯೊ ವೈರಲ್ ಆಗಿದೆ.

ಆಗ್ರಾದ ತಾಜ್ ಮಹಲ್ ಕಾರಂಜಿಯಲ್ಲಿ ಎಂಜಾಯ್ ಮಾಡಿದ ವಾನರ ಸೇನೆ

ಲಖನೌ, ಜೂ. 5: ಕೆಲವಡೆ ಬೇಸಗೆಯ ತಾಪಮಾನ ಇನ್ನೂ ಮುಂದುವರಿದಿದೆ. ಹೀಗಾಗಿ ನೀರಿನ ಅಭಾವದಿಂದಾಗಿ ಮನುಷ್ಯರು ಮಾತ್ರವಲ್ಲದೆ ಪ್ರಾಣಿಗಳೂ ಕೂಡ ತತ್ತರಿಸಿ ಹೋಗಿವೆ.‌ ಸರಿಯಾಗಿ ಆಹಾರವಿಲ್ಲದೆ, ದಣಿವು ನಿವಾರಿಸಿಕೊಳ್ಳಲು ನೀರಿಲ್ಲದೆ ನರಳುತ್ತಿವೆ. ಇತ್ತೀಚೆಗಷ್ಟೇ ಮಹಾರಾಷ್ಟ್ರದಲ್ಲಿ ಬಿಸಿಲಿನ ತಾಪಕ್ಕೆ ಸುಸ್ತಾದ ಮಂಗಗಳು ನೀರನ್ನು ಹುಡುಕಿಕೊಂಡು ಚಲಿಸುತ್ತಿದ್ದ ಬಸ್ಸನ್ನು ತಡೆದಿದ್ದವು. ತೀರ ದಣಿದ ಮಂಗಗಳನ್ನು ಗಮನಿಸಿ ಪ್ರಯಾಣಿಕರು ನೀರು ನೀಡಿ ಉಪಚರಿಸಿದ್ದರು.‌ ಇದೀಗ ವಾನರ ಸೇನೆಯೊಂದು ಉತ್ತರ ಪ್ರದೇಶದ ಆಗ್ರಾದಲ್ಲಿನ ತಾಜ್ ಮಹಲ್‌ ಬಳಿಯ ಕಾರಂಜಿಯನ್ನೇ ವಾಟರ್ ಪಾರ್ಕ್ ಮಾಡಿಕೊಂಡ ವಿಡಿಯೊ ವೈರಲ್ (Viral News) ಆಗಿದೆ.

ಮಂಗಗಳು ಉತ್ಸಾಹದಿಂದ ಕಾರಂಜಿಗೆ ಹಾರಿದ್ದು, ನೀರಿನಲ್ಲಿ ಆಟವಾಡಿವೆ. ತೀವ್ರ ಶಾಖದಿಂದ ಬಳಲುತ್ತಿದ್ದ ಮಂಗಗಳು ವಿಶ್ವ ಪ್ರಸಿದ್ಧ ತಾಜ್ ಮಹಲ್‌ನ ಕಾರಂಜಿಯನ್ನೇ ವಾಟರ್‌ ಪಾರ್ಕ್‌ ಮಾಡಿಕೊಂಡಿವೆ. ಏಕಾಏಕಿ ಮಂಗಗಳ ಹಿಂಡು ನೀರಿಗೆ ಇಳಿದಿದ್ದು, ಚಿಮ್ಮಿಸುತ್ತಾ ಎಂಜಾಯ್ ಮಾಡಿವೆ.

ವಿಡಿಯೊ ನೋಡಿ:



ಮಂಗಗಳು ಬಹಳ ಉತ್ಸಾಹದಿಂದ ಕಾರಂಜಿಗೆ ಹಾರಿದ್ದು ಸುತ್ತಲೂ ನೀರು ಚಿಮ್ಮುತ್ತಿದ್ದವು. ಒಂದನ್ನೊಂದು ಬೆನ್ನಟ್ಟಿ ನೀರಿನಲ್ಲಿ ಆನಂದಿಸುತ್ತಿದ್ದವು. ತಾಜ್ ಮಹಲ್ ವೀಕ್ಷಿಸಲು ಬಂದ ಪ್ರವಾಸಿಗರು ವಾನರರ ಈ ಆಟ ನೋಡಿ ಮನಸಾರೆ ನಕ್ಕಿದ್ದಾರೆ. ಅನೇಕರು ತಮ್ಮ ಕ್ಯಾಮರಾಗಳಲ್ಲಿ, ಮೊಬೈಲ್‌ಗಳಲ್ಲಿ ಅಪರೂಪದ ಮತ್ತು ಮೋಜಿನ ದೃಶ್ಯವನ್ನು ಸೆರೆ ಹಿಡಿದ್ದಾರೆ.

ವೇದಿಕೆಯಲ್ಲೇ ಆ್ಯಂಕರ್‌ಗೆ ಚಪ್ಪಲಿಯಿಂದ ಹೊಡೆದ ಖ್ಯಾತ ಗಾಯಕಿ

ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು ಅನೇಕ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು, "ಹಹಾ, ಇದು ತಮಾಷೆಯಾಗಿದೆ...ಮಂಗಗಳು ನಮಗಿಂತ ಉತ್ತಮವಾಗಿ ದಣಿವು ನಿವಾರಿಸಿಕೊಳ್ಳುತ್ತಿವೆʼʼ ಎಂದು ಹೇಳಿದ್ದಾರೆ. ಮತ್ತೊಬ್ಬರು, ʼʼವಿಶ್ವದ ಅದ್ಭುತ ತಾಜ್ ಮಹಲ್‌ನ ಸೌಂದರ್ಯವನ್ನು ಸವಿಯಲು ಈ ಭಾರಿ ವಾನರ ಸೇನೆ ಬಂದಿದೆʼʼ ಎಂದಿದ್ದಾರೆ.