ನವದೆಹಲಿ, ಆ. 4: ಭಾವನೆ ಅನ್ನೋದು ಕೇವಲ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಪ್ರೀತಿ, ನೋವಿನ ಬೆಲೆ ಗೊತ್ತು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ತಾಯಿ ಡಾಲ್ಫಿನ್ ಒಂದು ತನ್ನ ಮೃತ ಮರಿಯೊಂದನ್ನು ಸುಮಾರು ಆರು ದಿನಗಳವರೆಗೆ ಬೆನ್ನ ಮೇಲೆ ಹೊತ್ತು ಈಜಿದೆ. ಕಂದನನ್ನು ಮರೆಯಲಾಗದೆ ತನ್ನ ಜತೆಯಲ್ಲೇ ಮೃತ ಮರಿಯನ್ನು ಹೊತ್ತೊಯ್ದಿದೆ. ಈ ಭಾವುಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದ್ದು ಎಲ್ಲರ ಕಣ್ಣಂಚಲ್ಲಿ ನೀರು ತರರಿಸಿದೆ.
"ಫ್ರಾಗಲ್" ಎಂಬ ಹೆಸರಿನ ಬಾಟಲ್‌ನೋಸ್ ಡಾಲ್ಫಿನ್ ತನ್ನ ಮೃತ ಮರಿಯ ದೇಹವನ್ನು ಹೊತ್ತು ಸುಮಾರು ಆರು ದಿನಗಳ ಕಾಲ ಹಿಂದೂ ಮಹಾಸಾಗರದಲ್ಲಿ ಈಜಿದೆ. ಆಸ್ಟ್ರೇಲಿಯಾದ ಕರಾವಳಿ ಸಂಶೋಧನಾ ಸಂಸ್ಥೆ 'ಜಿಯೋಗ್ರಾಫ್ ಮರೀನ್ ರಿಸರ್ಚ್' ಡ್ರೋನ್ನಲ್ಲಿ ಈ ದೃಶ್ಯ ಸೆರೆಹಿಡಿದಿದೆ. ತಾಯ್ತನದ ಪ್ರೀತಿ ಅನ್ನೋದು ಕೇವಲ ಮನುಷ್ಯರಿಗೆ ಮಾತ್ರವಲ್ಲ, ಈ ಪ್ರೀತಿ, ಆಗಲಿಕೆಯ ನೋವು ಪ್ರಾಣಿಗಳಿಗೂ ಇದೆ ಎನ್ನುವುದನ್ನು ಇದು ಸಾಬೀತು ಪಡಿಸಿದೆ.
ವಿಡಿಯೊ ನೋಡಿ:
ಬಾಟಲ್‌ನೋಸ್ ಡಾಲ್ಫಿನ್ ತನ್ನ ಮರಿಯನ್ನು ದೇಹದ ಮೇಲೆ ನಿಧಾನವಾಗಿ ಸಮತೋಲನಗೊಳಿಸುತ್ತ ಈಜುವುದನ್ನು ಮುಂದುವರಿಸಿದೆ. ಮೃತಪಟ್ಟ 2 ವಾರದ ಮರಿಯನ್ನು ಸುಮಾರು 6 ದಿನಗಳ ಕಾಲ ಬೆನ್ನಿನ ಮೇಲೆ ಹೊತ್ತುಕೊಂಡು ಈಜಿದೆ. ಸಂರಕ್ಷಣಾ ತಂಡದ ಪ್ರಕಾರ, ಅದು ಈ ಹಿಂದೆ ನಾಲ್ಕು ಮರಿಗಳನ್ನು ಕಳೆದುಕೊಂಡಿತ್ತು. ಈ ತಾಯಿಗೆ, ಪ್ರಸ್ತುತ ಮೃತಪಟ್ಟ ಮರಿಯು 5ನೇ ಸಂತತಿ.
ಪೊಲೀಸ್ ಠಾಣೆಯಲ್ಲೇ ಕಾನ್ಸ್‌ಟೇಬಲ್‌ಗಳ ರೊಮ್ಯಾನ್ಸ್
ಮರಿ ಮೃತಪಟ್ಟರೂ ಅದನ್ನು ನೀರಿನಲ್ಲಿ ಮುಳುಗಲು ಬಿಡದೆ 6 ದಿನಗಳ ಕಾಲ ಸಮುದ್ರದಲ್ಲಿ ಸಾಗಿದೆ. ವಿಡಿಯೊದಲ್ಲಿ ಸೆರೆಹಿಡಿಯಲಾದ ಅತ್ಯಂತ ಹೃದಯಸ್ಪರ್ಶಿ ಕ್ಷಣವೆಂದರೆ ಇತರ ಡಾಲ್ಫಿನ್‌ಗಳ ನಡವಳಿಕೆ. ತಾಯಿ ಡಾಲ್ಫಿನ್ ಬಿಟ್ಟು ಹೋಗದ ಅವು ಹತ್ತಿರದಲ್ಲಿಯೇ ನಿಂತು ಜತೆಯಾಗಿ ಸಾಗಿವೆ.
ಈ ಭಾವನಾತ್ಮಕ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ವೀಕ್ಷಕರು ತಾಯಿಯ ಬಾಂಧವ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಒಬ್ಬರು, "ಪ್ರಾಣಿಗಳಿಗೂ ಭಾವನೆಗಳಿವೆ" ಎಂದಿದ್ದಾರೆ. ಮತ್ತೊಬ್ಬರು, ʼʼನಿಜಕ್ಕೂ ಈ ದೃಶ್ಯ ನನ್ನನ್ನು ಅಳವಮತೆ ಮಾಡಿತುʼʼ ಎಂದಿದ್ದಾರೆ.