ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರಸ್ತೆ ಮಧ್ಯೆ ಸಿಕ್ಕಿದ ಮಗ, ಆತನ ಗೆಳತಿಗೆ ಚಪ್ಪಲಿಯಲ್ಲಿ ಹೊಡೆದ ತಾಯಿ

ಮಗ ಮತ್ತು ಆತನ ಗೆಳತಿಯನ್ನು ಪೋಷಕರು ರಸ್ತೆ ಮಧ್ಯೆಯೇ ಹಿಡಿದು ಥಳಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. 21 ವರ್ಷದ ಯುವಕ ಮತ್ತು ಆತನ 19 ವರ್ಷದ ಗೆಳತಿಯನ್ನು ಯುವಕನ ತಾಯಿ ರಸ್ತೆಯ ಮಧ್ಯದಲ್ಲಿ ಸಾರ್ವಜನಿಕವಾಗಿ ಚಪ್ಪಲಿಯಿಂದ ಥಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮಗ ಮತ್ತು ಆತನ ಪ್ರೇಯಸಿಗೆ ಚಪ್ಪಲಿಯಲ್ಲಿ ಹೊಡೆದ ತಾಯಿ

ಲಖನೌ: ಮಗ ಮತ್ತು ಆತನ ಗೆಳತಿಯನ್ನು ಪೋಷಕರು ರಸ್ತೆ ಮಧ್ಯೆಯೇ ಹಿಡಿದು ಥಳಿಸಿರುವ ಘಟನೆ ಉತ್ತರ ಪ್ರದೇಶದ (Uttarpradesh) ಕಾನ್ಪುರದಲ್ಲಿ (Kanpur) ನಡೆದಿದೆ. ಇತ್ತೀಚೆಗೆ ಸಂಜೆ 21 ವರ್ಷದ ಯುವಕ ಮತ್ತು ಆತನ 19 ವರ್ಷದ ಗೆಳತಿಯನ್ನು ಯುವಕನ ತಾಯಿ ರಸ್ತೆಯ ಮಧ್ಯದಲ್ಲಿ ಸಾರ್ವಜನಿಕವಾಗಿ ಚಪ್ಪಲಿಯಿಂದ ಥಳಿಸಿದ್ದಾರೆ. ಇವರಿಬ್ಬರ ಸ್ನೇಹಕ್ಕೆ ಹಿರಿಯರು ಒಪ್ಪದೇ ಇರುವುದರಿಂದ ರಸ್ತೆಯಲ್ಲಿಯೇ ಅವರು ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆಯ ವಿಡಿಯೊ (Viral Video) ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಕಾನ್ಪುರದ ಗುಜೈನಿ ಪ್ರದೇಶದ ರಾಮ್ ಗೋಪಾಲ್ ವೃತ್ತದ ಬಳಿ ರೋಹಿತ್ ಎಂಬ ಯುವಕ ತನ್ನ ಗೆಳತಿಯೊಂದಿಗೆ ರಸ್ತೆಬದಿಯ ಅಂಗಡಿಯಲ್ಲಿ ನೂಡಲ್ಸ್ ತಿನ್ನುತ್ತಿದ್ದ. ಈ ವೇಳೆ ಇದ್ದಕ್ಕಿದ್ದಂತೆ ಅಲ್ಲಿಗೆ ಬಂದ ರೋಹಿತ್‌ ಪೋಷಕರಾದ ಶಿವಕರನ್ ಮತ್ತು ಸುಶೀಲಾ ತಮ್ಮ ಗೆಳತಿಯೊಂದಿಗೆ ಇದ್ದ ಮಗನನ್ನು ನೋಡಿ ಆಕ್ರೋಶ ಹೊರ ಹಾಕಿದ್ದಾರೆ.

ಪೋಷಕರನ್ನು ನೋಡಿ ಸ್ಕೂಟರ್‌ನಲ್ಲಿ ಹೊರಡಲು ಅನುವಾದ ರೋಹಿತ್ ಮತ್ತು ಆತನ ಗೆಳತಿಯನ್ನು ಹಿಡಿದು ಸುಶೀಲಾ ಚಪ್ಪಲಿಯಿಂದ ಹೊಡೆಯಲು ಪ್ರಾರಂಭಿಸಿದರು. ಯುವತಿಯ ಕೂದಲು ಹಿಡಿದು ಎಳೆದಾಡಿದರು.

ಸುಶೀಲಾ ಯುವತಿಯನ್ನು ನಿಂದಿಸುತ್ತಿರುವುದು ಮತ್ತು ರೋಹಿತ್ ದುಂದು ವೆಚ್ಚ ಮಾಡಲು ಆಕೆಯ ಕಾರಣ ಎಂದು ಯುವತಿಯನ್ನು ದೂಷಿಸುತ್ತಿರುವುದು ವೈರಲ್ ಆಗಿರುವ ವಿಡಿಯೊದಲ್ಲಿ ಸೆರೆಯಾಗಿದೆ. ಇವರ ಗಲಾಟೆಯನ್ನು ಸುತ್ತ ನೆರೆದಿದ್ದ ಜನರು ವೀಕ್ಷಿಸಿದ್ದಾರೆ. ಕೆಲವರು ವಿಡಿಯೊ ಕೂಡ ಮಾಡಿದ್ದಾರೆ.



ವಿಡಿಯೊದಲ್ಲಿ ರೋಹಿತ್ ಮತ್ತು ಅವನ ಗೆಳತಿ ಸ್ಕೂಟಿಯಲ್ಲಿ ಕುಳಿತಿರುವುದನ್ನು ಕಾಣಬಹುದು. ಅವರ ವಾಹನದ ನೂರಾರು ಜನ ನರೆದಿದ್ದು, ರೋಹಿತ್ ಮತ್ತು ಯುವತಿಗೆ ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರೋಹಿತ್ ತನ್ನ ಗೆಳತಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದನ್ನು ಕೂಡ ಇದರಲ್ಲಿ ಕಾಣಬಹುದು. ಸ್ವಲ್ಪ ಸಮಯದ ಬಳಿಕ ರೋಹಿತ್‌ನ ಗೆಳತಿ ಸ್ಕೂಟಿಯಿಂದ ಕೆಳಗಿಳಿದು ಅಲ್ಲಿದ್ದ ಒಬ್ಬ ವ್ಯಕ್ತಿಯ ಬಳಿ ಘಟನೆಯನ್ನು ವಿವರಿಸಿದ್ದು, ಆ ವ್ಯಕ್ತಿ ಕೋಪದಿಂದ ಅವಳ ಪೋಷಕರನ್ನು ಬರುವಂತೆ ಹೇಳುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿರುವ ಕಾನ್ಪುರ್ ನಗರದ ಪೊಲೀಸ್ ಕಮಿಷನರೇಟ್, ಈ ವಿಷಯ ಸ್ಥಳೀಯ ಪೊಲೀಸರಿಗೆ ತಿಳಿದಿದೆ. ಪೊಲೀಸರು ಕೌನ್ಸೆಲಿಂಗ್ ಬಳಿಕ ಇಬ್ಬರನ್ನು ಬೇರ್ಪಡಿಸಿದ್ದಾರೆ. ಮುಂದಿನ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಸಾಮಾನ್ಯವಾಗಿದೆ ಎಂದು ಎಕ್ಸ್‌ನಲ್ಲಿ ಹೇಳಿದೆ.

ಗುಜೈನಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ವಿನಯ್ ತಿವಾರಿ ಪ್ರತಿಕ್ರಿಯಿಸಿ, ಈ ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಿ ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಿದರು.