ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

50 ಗಂಟೆಯ ಶಿಫ್ಟ್ ಮುಗಿಸಿ ಬಂದ ವೈದ್ಯೆಗೆ ಅತ್ತೆಯಿಂದ ಆರತಿಯ ಸ್ವಾಗತ: ವಿಡಿಯೊ ವೈರಲ್

Viral Video: ಪ್ಲಾಸ್ಟಿಕ್ ಸರ್ಜನ್ ಒಬ್ಬರು 50 ಗಂಟೆಯವರೆಗೆ ಕರ್ತವ್ಯ ಮಾಡಿರುವ ಸುದ್ದಿ ವೈರಲ್ ಆಗಿದೆ. ಡಾ. ಸೌಮ್ಯ ಗುಪ್ತಾ ಪ್ಲಾಸ್ಟಿಕ್ ಸರ್ಜನ್ ಆಗಿದ್ದು, ಸತತ 50 ಗಂಟೆಗಳವರೆಗೆ ಕರ್ತವ್ಯ ನಿರ್ವಹಿಸಿ ಮನೆಗೆ ಬಂದಾಗ ಅವರ ಅತ್ತೆ ಪ್ರೀತಿಯಿಂದ ಸ್ವಾಗತಿಸಿದ ವಿಡಿಯೊ ಜನರ ಮನಗೆದ್ದಿದೆ.

ಶಿಫ್ಟ್ ಮುಗಿಸಿ ಬಂದ ಸೊಸೆಗೆ‌ ಅತ್ತೆಯಿಂದ ಆರತಿ

ನವದೆಹಲಿ ,ಮಾ. 23: ಇತ್ತೀಚೆಗೆ ಹೆಚ್ಚಿನವರು ಕೆಲಸದ ಒತ್ತಡದಿಂದ ಬಳಲುತ್ತಿದ್ದಾರೆ.‌ ಕೆಲಸ ಮತ್ತು ವೈಯಕ್ತಿಕ ಜೀವನ ಎರಡನ್ನು ನಿಭಾಯಿಸಲು ಪರದಾಡುವ ಅನೇಕ ಘಟನೆಗಳನ್ನು ನಾವು ಕಂಡಿದ್ದೇವೆ. ಇದರ ಬೆನ್ನಲ್ಲೇ ಪ್ಲಾಸ್ಟಿಕ್ ಸರ್ಜನ್ ಒಬ್ಬರು 50 ಗಂಟೆವರೆಗೆ ಕರ್ತವ್ಯ ನಿರ್ವಹಿಸಿರುವ ಸುದ್ದಿ ವೈರಲ್ (Viral News) ಆಗಿದೆ. ಡಾ. ಸೌಮ್ಯ ಗುಪ್ತಾ ಪ್ಲಾಸ್ಟಿಕ್ ಸರ್ಜನ್ ಆಗಿದ್ದು, ಸತತ 50 ಗಂಟೆಗಳವರೆಗೆ ಕರ್ತವ್ಯ ಮುಗಿಸಿ ಮನೆಗೆ ಬಂದಾಗ ಅವರ ಅತ್ತೆ ಪ್ರೀತಿಯಿಂದ ಸ್ವಾಗತಿಸಿದ ವಿಡಿಯೊ ಜನರ ಮನಗೆದ್ದಿದೆ.

ಅತ್ತೆ ತನ್ನ ಸೊಸೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಆರತಿ ಮಾಡಿ ಸ್ವಾಗತಿಸಿದ್ದಾರೆ. ಈ ವೇಳೆ ಡಾ. ಸೌಮ್ಯ ಅತ್ತೆಯ ಪಾದ ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೊ ಗಮನ ಸೆಳೆದಿದ್ದು 4.5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಹಾಗೂ 95,000 ಲೈಕ್‌ಗಳನ್ನು ಪಡೆದುಕೊಂಡಿದೆ.

ವಿಡಿಯೊ ನೋಡಿ:



ಡಾ. ಸೌಮ್ಯ ಗುಪ್ತಾ 50 ಗಂಟೆ ಪ್ಲಾಸ್ಟಿಕ್ ಸರ್ಜನ್ ಕೆಲಸದಲ್ಲಿ ಬ್ಯುಸಿಯಾಗಿದ್ದರು‌. ಆಕೆ ತನ್ನ ಕೆಲಸ ಮುಗಿಸಿ ಮನೆಗೆ ಬಂದಾಗ ಅವರ ಅತ್ತೆ ಕೈಯಲ್ಲಿ ಆರತಿ ತಟ್ಟೆ ಹಿಡಿದು ಸ್ವಾಗತಿಸಿದ್ದಾರೆ. ʼʼನಾವು ಬಹಳ ಪುಣ್ಯ ಮಾಡಿದ್ದೇವೆ. ನೀವು ಮನೆಗೆ ಈಗ ಪಾದಾರ್ಪಣೆ ಮಾಡಿದ್ದೀರಿʼʼ ಎಂದು ಅತ್ತೆ ತಮಾಷೆ ಮಾಡಿದ್ದಾರೆ. ಡಾ. ಸೌಮ್ಯ ಅತ್ತೆಯ ಪಾದಗಳನ್ನು ಸ್ಪರ್ಶಿಸಿ "ಧನ್ಯವಾದಗಳು, ಮಮ್ಮಿʼʼ ಎಂದು ಹೇಳಿದ್ದಾರೆ.

ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್‌ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್

ಇದೇ ವೇಳೆ ಅತ್ತೆ ಕ್ಯಾಮೆರಾದತ್ತ ಮುಖ ಮಾಡಿ, ʼʼಈಕೆ ನಾಲ್ಕು ದಿನಕ್ಕೊಮ್ಮೆ ಮನೆಗೆ ಬರುತ್ತಾಳೆ. ಇವಳಿಂದ ನಮಗೇನು ಸುಖ?ʼʼ ಎಂದು ಹೇಳಿದ್ದಾರೆ. ಈ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು ಆಧುನಿಕ ಜಗತ್ತಿನಲ್ಲಿ ಹೆಣ್ಣು ಮಕ್ಕಳು ಮದುವೆಯಾಗಲು ಭಯ ಪಡುವುದು ಇದೇ ಕಾರಣಕ್ಕೆ ಎಂದು ಬರೆದುಕೊಂಡಿದ್ದಾರೆ.

ಸದ್ಯ ಈ ಟೀಕೆಗಳಿಗೆ ಸೌಮ್ಯ ಅವರ ಪತಿ ಡಾ. ಶಗುನ್ ಅಗರ್ವಾಲ್ ಪ್ರತಿಕ್ರಿಯೆ ನೀಡಿದ್ದು, ʼʼನನ್ನ ತಾಯಿ ಸೊಸೆಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಆಸ್ಪತ್ರೆಗೆ ಡ್ರೈವರ್ ಮೂಲಕ ಬಿಸಿಬಿಸಿ ಮನೆಯ ಊಟವನ್ನು ಕಳುಹಿಸಿ ಕೊಡುತ್ತಾರೆʼʼ ಎಂದಿದ್ದಾರೆ.