ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಾದಾಮಿ ಗುಹಾಂತರ ದೇವಾಲಯಕ್ಕೆ ಚಪ್ಪಲಿ ಧರಿಸಿ ಬಂದ ಮುಸ್ಲಿಂ ಯುವತಿ; ಪ್ರವಾಸಿಗರಿಂದ ತರಾಟೆ, ವಿಡಿಯೋ ನೋಡಿ

Viral Video: ಬಾದಾಮಿ ಗುಹಾಂತರ ದೇವಾಲಯದ ಒಳಗೆ ಮುಸ್ಲಿಂ ಯುವತಿಯೊಬ್ಬಳು ಚಪ್ಪಲಿ ಧರಿಸಿ ಹೋಗಲು ಮುಂದಾಗಿದ್ದು ಹಿಂದು ಪ್ರವಾಸಿಯೊಬ್ಬರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಪವಿತ್ರ ಹಾಗೂ ಐತಿಹಾಸಿಕತೆಯನ್ನು ಸಾರುವ ದೇವಾಲಯಕ್ಕೆ ಚಪ್ಪಲಿ ಧರಿಸಿ ಹೋಗುವುದು ಹಿಂದುಗಳ ಭಾವನೆಕ್ಕೆ ಧಕ್ಕೆ ಮಾಡಿದಂತೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಚಪ್ಪಲಿ ಧರಿಸಿ ದೇವಾಲಯ ಒಳ ಪ್ರವೇಶಿಸಿದ ಮುಸ್ಲಿಂ ಯುವತಿ

ಬಾಗಲಕೋಟೆ, ಮೇ 19: ಹಿಂದು- ಮುಸ್ಲಿಂ ವಿವಾದಗಳಿಗೆ ಸಂಬಂಧಿಸಿದಂತೆ ಅನೇಕ ಘಟನೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತವೆ. ಇದೀಗ ಬಾದಾಮಿ ಗುಹಾಂತರ ದೇವಾಲಯದ ಒಳಗೆ ಮುಸ್ಲಿಂ ಯುವತಿಯೊಬ್ಬಳು ಚಪ್ಪಲಿ ಧರಿಸಿ ಹೋಗಲು ಮುಂದಾಗಿದ್ದು ಹಿಂದು ಪ್ರವಾಸಿಯೊಬ್ಬರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಪವಿತ್ರ ಹಾಗೂ ಐತಿಹಾಸಿಕತೆಯನ್ನು ಸಾರುವ ದೇವಾಲಯಕ್ಕೆ ಚಪ್ಪಲಿ ಧರಿಸಿ ಹೋಗುವುದು ಹಿಂದುಗಳ ಭಾವನೆಕ್ಕೆ ಧಕ್ಕೆ ಮಾಡಿದಂತೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಹಿಜಾಬ್ ಮತ್ತು ಹಸಿರು ಉಡುಪು ಧರಿಸಿದ ಯುವತಿಯೊಬ್ಬಳು 6ನೇ ಶತಮಾನದ ಬಾದಾಮಿ ಗುಹಾಂತರ ದೇವಾಲಯದ ಆವರಣದೊಳಗೆ ಪಾದರಕ್ಷೆ ಧರಿಸಿರುವುದನ್ನು ಕಂಡು ಪ್ರವಾಸಿ ಮಹಿಳೆಯೊಬ್ಬರು ಕಿಡಿಕಾರಿದ್ದಾರೆ. ವೀಡಿಯೊದಲ್ಲಿ, ಬಾದಾಮಿ ಗುಹಾ ದೇವಾಲಯದ ಹೊರಗೆ ಹಿಜಾಬ್ ಧರಿಸಿದ ಮಹಿಳೆ ಯೊಬ್ಬರು ಇನ್ನೊಬ್ಬ ಮಹಿಳೆಯೊಂದಿಗೆ ಜಗಳವಾಡುತ್ತಿರುವುದನ್ನು ತೋರಿಸಲಾಗಿದೆ.

ವಿಡಿಯೋ ನೋಡಿ:



ದೇವಾಲಯದೊಳಗೆ ಪಾದರಕ್ಷೆ ಧರಿಸಿದ್ದ ಯುವತಿಯ ಹೆಸರು ರೋಶ್ನಿ ಮುಸ್ತಫಿ ಎಂದು ಪ್ರವಾಸಿ ಹೇಳಿಕೊಂಡಿದ್ದು, ಅವರು ದೇವಾಲಯದೊಳಗೆ ಪಾದರಕ್ಷೆ ಧರಿಸಿದ್ದರು ಎಂದು ಆರೋಪಿಸಿದ್ದಾರೆ. ರೋಶ್ನಿ ಅವರು ತಾವು ಅಲ್ಲಿನ ಸಿಬ್ಬಂದಿ ಎಂದು ಹೇಳಿಕೊಂಡಿದ್ದಾರೆ. ಇಲ್ಲಿನ ಸಿಬ್ಬಂದಿಯಾಗಿದ್ದರು ಇಂತಹ ಪವಿತ್ರ ಸ್ಥಳದಲ್ಲಿ ನಿಯಮಗಳನ್ನು ಪಾಲಿಸದೆ, ಧಾರ್ಮಿಕ ಭಾವನೆಗಳಿಗೆ ಗೌರವ ನೀಡದೇ ಇರುವುದು ತಪ್ಪು ನಿಮ್ಮ ಮಸೀದಿಗೆ ನೀವು ಚಪ್ಪಲಿ ಧರಿಸಿ ಹೋಗುತ್ತಿರಾ ಎಂದು ಪ್ರಶ್ನಿಸಿದ್ದಾರೆ‌. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ.

Viral News: ರಣಬೀರ್‌ ಕಪೂರ್‌-ದೀಪಿಕಾ ಪಡುಕೋಣೆ ಸಿನಿಮಾ ನೋಡಿ ಕಾರ್ಪೋರೇಟ್‌ ಕೆಲಸ ಬಿಟ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಯುವತಿ

ಬಳಕೆದಾರರೊಬ್ಬರು ನೀವು ಇಲ್ಲಿನ ಸಿಬ್ಬಂದಿಯೇ ಆಗಿದ್ದರೂ, ಪ್ರತಿಯೊಬ್ಬ ಭಕ್ತ ಮತ್ತು ಪ್ರವಾಸಿಯಂತೆ ಚಪ್ಪಲಿಗಳನ್ನು ಹೊರಗೆ ಬಿಟ್ಟು ಗೌರವಿಸಬೇಕು ಎಂದರು. ಮತ್ತೊಬ್ಬರು ಇಲ್ಲಿನ ತೀವ್ರ ಬಿಸಿಲಿಗೆ ಆಕೆಯ ಪಾದಗಳನ್ನು ರಕ್ಷಿಸಲು ಚಪ್ಪಲಿ ಹಾಕಿರ ಬಹುದು. ಇದರಲ್ಲಿ ತಪ್ಪೇನಿದೆ ಎಂದು ಯುವತಿ ಪರ ಮಾತನಾಡಿದ್ದಾರೆ‌. ಆದರೆ ಈ ವೀಡಿಯೊದ ಕುರಿತು ಭಾರತೀಯ ಪುರಾತತ್ವ ಸಮೀಕ್ಷೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.