ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪಹಲ್ಗಾಮ್‌ ದಾಳಿಯನ್ನು ಸಂಭ್ರಮಿಸಿದ್ದ ಮುಸ್ಲಿಂ ಯುವಕನಿಗೆ ಬಿತ್ತು ಸ್ಥಳೀಯರಿಂದ ಗೂಸಾ; ವಿಡಿಯೋ ನೋಡಿ

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಶನಿವಾರ ಡೆಹ್ರಾಡೂನ್‌ನಲ್ಲಿ ಸಾಹಿಲ್ ಖಾನ್ ಎಂಬ ಮುಸ್ಲಿಂ ಯುವಕನನ್ನು ಸ್ಥಳೀಯರ ಗುಂಪೊಂದು ಅರೆನಗ್ನವಾಗಿ ಮೆರವಣಿಗೆ ಮಾಡಿ ಥಳಿಸಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪಹಲ್ಗಾಮ್‌ ದಾಳಿಯನ್ನು ಸಂಭ್ರಮಿಸಿದ್ದ ಮುಸ್ಲಿಂ ಯುವಕನಿಗೆ ಬಿತ್ತು ಗೂಸಾ

Profile Vishakha Bhat Apr 28, 2025 9:21 AM

ಡೆಹ್ರಾಡೂನ್‌: ಪಹಲ್ಗಾಮ್‌ ದಾಳಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದವರ ಮೇಲೆ ಪೊಲೀಸರು ಈಗಾಗಲೇ ಕೇಸ್‌ ಮಾಡಿದ ಘಟನೆ ಹಲವು ಕಡೆ ನಡೆದಿದೆ. ಇದೀಗ ಡೆಹ್ರಾಡೂನ್‌ನಲ್ಲಿಯೂ ಅಂತಹುದೇ ಘಟನೆಯೊಂದು ನಡೆದಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಶನಿವಾರ ಡೆಹ್ರಾಡೂನ್‌ನಲ್ಲಿ ಸಾಹಿಲ್ ಖಾನ್ ಎಂಬ ಮುಸ್ಲಿಂ ಯುವಕನನ್ನು ಸ್ಥಳೀಯರ ಗುಂಪೊಂದು ಅರೆನಗ್ನವಾಗಿ ಮೆರವಣಿಗೆ ಮಾಡಿ ಥಳಿಸಿದೆ. ಸಾಹಿಲ್‌ ಮೇಲೆ ಹಲ್ಲೆ ನಡೆಸಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ (Viral Video) ಆಗಿದೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಸಾಹಿಲ್‌ ಸಂಭ್ರಮಿಸಿದ್ದ ಎನ್ನುವ ಕಾರಣಕ್ಕೆ ಆತನ ಮೇಲೆ ಸ್ಥಳೀಯ ಗುಂಪು ಹಲ್ಲೆ ಮಾಡಿದೆ ಎಂದು ತಿಳಿದು ಬಂದಿದೆ. ವೈರಲ್‌ ಆದ ಪೋಸ್ಟ್‌ ಪ್ರಕಾರ, ಸಾಹಿಲ್‌ ಸ್ಥಳೀಯ ದೇವತೆ ದೇವಾಲಯವನ್ನು ಕೆಡವುವ ಬಗ್ಗೆ ಮಾತನಾಡಿದ್ದ ಎಂದು ಹೇಳಲಾಗಿದೆ. ನಾವು ಕೇವಲ 28 ಜನರನ್ನು ಕೊಂದಿದ್ದೇವೆ ಅದಕ್ಕೇ ನೀವು ನಡಗುತ್ತಿದ್ದೀರಿ. ಇಷ್ಟೇ ಅಲ್ಲ ಇನ್ನೂ ಮುಂದುವರಿಯುತ್ತದೆ. ನಾವು ನಾವು ಧರ್ಮಪುರ (ಮಾತಾ) ದೇವಾಲಯವನ್ನು ನಾಶಪಡಿಸುತ್ತೇವೆ ಎಂದು ಸಾಹಿಲ್‌ ಹೇಳಿದ್ದ ಎಂದು ಸ್ಥಳೀಯರು ಆರೋಪಿಸಿದ್ದರು.



ಆತನ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಸಾಹಿಲ್‌ ಮೇಲೆ ಹಲ್ಲೆ ಮಾಡಿ, ಅವನನ್ನು ಹಿಡಿದು, ಥಳಿಸಿ, ಅವನ ಮೇಲಿನ ಬಟ್ಟೆಗಳನ್ನು ಹರಿದು ಹಾಕಿದರು. ಆಕ್ರೋಶಗೊಂಡ ಜನರು ಅವನ ಒಳ ಅಂಗಿಯನ್ನು ಹರಿದು ಬೀದಿಗಳಲ್ಲಿ ಅರೆಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ. ಖಾನ್‌ನ ತೋಳು ಹಾಗೂ ಬೆನ್ನ ಮೇಲೆ ಗಾಯಗಳಾಗಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ನಂತರ ಆತನನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ. ಸದ್ಯ ವೈರಲ್‌ ಆದ ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಇಂತಹ ದೇಶದ್ರೋಹಿಗಳಿಗೆ ಹೀಗೆಯೇ ಆಗಬೇಕು. ಆತನನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಹಲವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Pahalgam Attack: ಪಹಲ್ಗಾಮ್‌ ದಾಳಿ ನಡೆದ ವಾರದೊಳಗೆ ಮತ್ತೆ ಪ್ರವಾಸಿಗರ ಕಲರವ; ಚಿಗುರಿದ ಭರವಸೆ

ಮಹತ್ವದ ಬೆಳವಣಿಗೆಯೊಂದರಲ್ಲಿ, ಪಹಲ್ಗಾಮ್‌ನಲ್ಲಿ ದಾಳಿ ನಡೆಸಲು ಸಹಾಯ ಮಾಡಿದ್ದ ಉಗ್ರರ ಮನೆ ಮೇಲೆ ಸೇನೆ ದಾಳಿ ನಡೆಸಿದೆ. ಈಗಾಗಲೇ ಉಗ್ರರ 10 ಮನೆಗಳನ್ನು ಧ್ವಂಸ ಮಾಡಲಾಗಿದೆ. ಇನ್ನೊಂದೆಡೆ ದಾಳಿ ಕುರಿತು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪಹಲ್ಗಾಮ್‌ನಲ್ಲಿ ತನ್ನ ಕಾರ್ಯಾಚರಣೆ ಶುರು ಮಾಡಿದೆ. ಉಗ್ರರ ಜಾಡು ಹಿಡಿದು ಹೊರತಿರುವ ತನಿಖಾ ಸಂಸ್ಥೆಗೆ ಹಲವು ಮಹತ್ವದ ಸುಳಿವು ಸಿಕ್ಕಿದೆ. ಉಗ್ರರು ಯಾವ ಮಾರ್ಗದಲ್ಲಿ ಬಂದರು ಎಂಬುದರ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ.